ಬಣಕಲ್ ಬಾಲಿಕಾ ಮರಿಯಾ ಚರ್ಚ್‌ಗೆ ಸುವರ್ಣ ಸಂಭ್ರಮ
Team Udayavani, Jan 13, 2020, 3:32 PM IST
ಚಿಕ್ಕಮಗಳೂರು: ಕೊಟ್ಟಿಗೆಹಾರ ಸಮೀಪದ ಬಣಕಲ್‌ನ ಬಾಲಿಕಾ ಮರಿಯ ಚರ್ಚ್‌ನ ಸುವರ್ಣ ಮಹೋತ್ಸವ ಸೋಮವಾರ ಜ.13ರಂದು ನಡೆಯಲಿದ್ದು, ಚರ್ಚ್‌ನ ಆವರಣ ತಳೀರು ತೋರಣಗಳಿಂದ ಸಿಂಗಾರಗೊಂಡಿದೆ.
1970 ರಲ್ಲಿ ಕ್ರೈಸ್ತ ಧರ್ಮಕೇಂದ್ರವಾಗಿ ಮೂಡಿಗೆರೆ ಧರ್ಮಕೇಂದ್ರದಿಂದ ಬೇರ್ಪಟ್ಟು 1974 ರಲ್ಲಿ ಚರ್ಚ್ ನಿರ್ಮಾಣವಾಯಿತು. ಮಂಗಳೂರಿನಿಂದ ಬಂದ ಕಪುಚಿನ್ ಗುರುಗಳು ಹಾಗೂ ಚರ್ಚ್‌ನ ಪ್ರಪ್ರಥಮ ಗುರುಗಳಾದ ಕರ್ನೆಲಿಯಸ್ ಮೊಂತೆರೋ ಅವರ ಶ್ರಮದ ಪರಿಣಾಮವಾಗಿ ಬಣಕಲ್‌ನ 2 ಎಕರೆ ಜಾಗದಲ್ಲಿ ಚರ್ಚ್ ನಿರ್ಮಾಣವಾಯಿತು.
1974ರಲ್ಲಿ ಧರ್ಮಗುರುಗಳಾದ ಸಿರಿಲ್ ಅಂದ್ರಾದೆ, 1978ರಲ್ಲಿ ಡೊಮಿನಿಕ್ ವೇಗಸ್, 1983 ರಲ್ಲಿ ವಿಲಿಯಂ ಅಂದ್ರಾದೆ, 1987 ರಲ್ಲಿ ವಲೇರಿಯನ್ ಡಿಸಿಲ್ವಾ, 1993 ರಲ್ಲಿ ಅಂತೋಣಿ ವಾಸ್, 1999 ರಲ್ಲಿ ಮ್ಯಾಕ್ಸಿಮ್ ಪಿಂಟೋ, 1999 ರಲ್ಲಿ ಪೀಟರ್ ಮತ್ತು ಪೀಟರ್ ಮೆಂಡೋನ್ಸಾ, 2010 ರಲ್ಲಿ ಪ್ರಶಾಂತ್ ಅರ್ಥರ್, 2012 ರಲ್ಲಿ ಸುದೀಪ್ ಸಂತಾನ ಗೊನ್ಸಾಲ್ವಿಸ್ ಸೇವೆ ಸಲ್ಲಿಸಿದ್ದು, ಪ್ರಸ್ತುತ 2016 ರಿಂದ ಆಲ್ಪರ್ಟ್ ಡಿಸಿಲ್ವಾ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ಚಿಕ್ಕಮಗಳೂರು ಬಿಷಪ್ ರೆವರೆಂಡ್ ಡಾ.ಟಿ.ಅಂತೋನಿ ಸ್ವಾಮಿ ಸಂಭ್ರಮಿಕ ಬಲಿ ಪೂಜೆ ಅರ್ಪಿಸಲಿದ್ದಾರೆ. ಅವರೊಂದಿಗೆ ಕರ್ನಾಟಕ ಪ್ರಾಂತ್ಯದ ಕಪುಚಿನ್ ಧರ್ಮಗುರುಗಳ ಮುಖ್ಯಸ್ಥ ರೆವರೆಂಡ್ ಫಾದರ್ ಡಾ.ಜಾನ್ ಆಲ್ವಿನ್ ಡಾಯಸ್ ಹಾಗೂ ಜಿಲ್ಲೆಯ ವಿವಿಧ ಚರ್ಚ್‌ನ ಧರ್ಮಗುರುಗಳು, ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಭಾಗವಹಿಸಲಿದ್ದಾರೆ.
ನಂತರ 11.30ಕ್ಕೆ ನಡೆಯುವ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಶಾಸಕಿ ಮೋಟಮ್ಮ, ವಿಧಾನ ಪರಿಷತ್ ಶಾಸಕ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ತಾಪಂ ಅಧ್ಯಕ್ಷ ಕೆ.ಸಿ.ರತನ್, ಜಿಲ್ಲಾ ಪಂಚಾಯಿತಿ ಸದಸ್ಯ ಶಾಮಣ್ಣ, ತಾಲೂಕು ಪಂಚಾಯಿತಿ ಸದಸ್ಯೆ ವೀಣಾ ಉಮೇಶ್, ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.