chikkamagaluru: ಬಿಜೆಪಿ-ಜೆಡಿಎಸ್‌ ಮೈತ್ರಿ ಅಭಿವೃದ್ಧಿಗೆ ಪೂರಕ


Team Udayavani, Apr 3, 2024, 11:16 AM IST

chikkamagaluru: ಬಿಜೆಪಿ-ಜೆಡಿಎಸ್‌ ಮೈತ್ರಿ ಅಭಿವೃದ್ಧಿಗೆ ಪೂರಕ

ಉದಯವಾಣಿ ಸಮಾಚಾರ
ಕಡೂರು: ಪಕ್ಷಕ್ಕಿಂತ ರಾಷ್ಟ್ರದ ಹಿತವೇ ಮುಖ್ಯ ಎಂಬ ದೃಢ ನಿರ್ಧಾರದಿಂದ ಜೆಡಿಎಸ್‌ ಮತ್ತು ಬಿಜೆಪಿ ಒಂದಾಗಿರುವುದು ರಾಜ್ಯದ ಅಭಿವೃದ್ಧಿಗೂ ಪೂರಕ ಎಂದು ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಹೇಳಿದರು. ತಾಲೂಕಿನ ಮಚ್ಚೇರಿಯ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ- ಜೆಡಿಎಸ್‌ ಕಾರ್ಯಕರ್ತರ ಜಂಟಿ ಸಮನ್ವಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವವೇ ತಿರುಗಿ ನೋಡುವಂತಹ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಿ ಭಾರತ ದೇಶ ವಿಶ್ವನಾಯಕ ಸ್ಥಾನಕ್ಕೇರು ವುದರಲ್ಲಿ ಯಾವ ಅನುಮಾನವಿಲ್ಲ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಮಾತನಾಡಿ, ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್‌ ಅವರನ್ನು ಗೆಲ್ಲಿಸಬೇಕಿದೆ. ಕಡೂರಿಗೂ ದೇವೇಗೌಡರಿಗೂ ಅವಿನಾಭಾವ ಸಂಬಂಧವಿದೆ. ರಾಷ್ಟ್ರಹಿತಕ್ಕಾಗಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ದುಡಿದು ನಮ್ಮ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

ಮಾಜಿ ಶಾಸಕ ಬೆಳ್ಳಿಪ್ರಕಾಶ್‌ ಮಾತನಾಡಿ, ಯಾರನ್ನು ಟೀಕಿಸುವ ಅಗತ್ಯವಿಲ್ಲ. ಬೇರೆಯವರ ಟೀಕೆಗೆ ಉದ್ರೇಕಗೊಳ್ಳುವ ಅಗತ್ಯವೂ ಇಲ್ಲ. ರಾಷ್ಟ್ರಹಿತವನ್ನೇ ಪ್ರಮುಖ ಧ್ಯೇಯವನ್ನಿಟ್ಟುಕೊಂಡ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಎರಡೂ ಪಕ್ಷಗಳು ಸಮಾನವಾಗಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರವಾಗಿ ಶ್ರಮಿಸಿ ಗೆಲ್ಲಿಸಬೇಕು. ನಾವು ನೀಡುವ ಪ್ರತಿ ಮತವೂ ರಾಷ್ಟ್ರ ರಕ್ಷಣೆಗೆ ಎಂಬ ಚಿಂತನೆ ಎಲ್ಲರಲ್ಲೂ ಮೂಡಬೇಕು. ಅತ್ಯಂತ ಪ್ರಾಮಾಣಿಕವಾಗಿ ಪ್ರಜ್ವಲ್‌ ಅವರ ಪರವಾಗಿ ಕಾರ್ಯಕರ್ತರ ಜೊತೆಗೂಡಿ ಶ್ರಮಿಸುತ್ತೇನೆ ಎಂದರು.

ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ, ವಿರೋ ಧಿಗಳ ಟೀಕೆಗೆ ಉತ್ತರಿಸುವ ಅವಶ್ಯಕತೆಯಿಲ್ಲ. ಕೊಚ್ಚೆಗೆ ಕಲ್ಲು ಹಾಕಲು ಹೋಗುವುದಿಲ್ಲ. ಕಾಂಗ್ರೆಸ್‌ನ ನಿಲುವು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎನಿಲುವನ್ನು ಗಮನಿಸಬೇಕಿದೆ. ಕಾಂಗ್ರೆಸ್‌ ರಾಷ್ಟ್ರ ಒಡೆಯುವ ಮಾರ್ಗಸೂಚಿಯಲ್ಲಿದೆ. ಆದರೆ ಮೋದಿಯವರು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಚಿಂತನೆಯಲ್ಲಿದ್ದಾರೆ. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದಲೇ ದೇವೇಗೌಡರು ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಾರೆ.ಸಂಸದನಾಗಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.

ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್‌, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್‌, ವಕ್ತಾರ ಕೆ.ಆರ್‌. ಮಹೇಶ್‌ ಒಡೆಯರ್‌, ಟಿ.ಆರ್‌. ಲಕ್ಕಪ್ಪ, ಜಿಗಣೇಹಳ್ಳಿ ನೀಲಕಂಠಪ್ಪ, ಜೆಡಿಎಸ್‌ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಮುಖಂಡರಾದ ಸೋನಾಲ್‌ ಧರ್ಮೆಗೌಡ, ಚೇತನ್‌ ಕೆಂಪರಾಜ್‌, ಕೆ.ಎಂ. ವಿನಾಯಕ, ಶೂದ್ರ ಶ್ರೀನಿವಾಸ್‌, ಸವಿತಾ ರಮೇಶ್‌, ಕೆ.ಎಂ. ಬೊಮ್ಮಣ್ಣ, ಬಿ.ಪಿ. ನಾಗರಾಜ್‌, ಸುನೀತಾ ಜಗದೀಶ್‌, ಶೂದ್ರ ಶ್ರೀನಿವಾಸ, ಬಿ.ಟಿ.ಗಂಗಾಧರನಾಯ್ಕ ಮತ್ತಿತರರು ಇದ್ದರು.

ವೇದಿಕೆಯಲ್ಲಿ ಒಟ್ಟಿಗೆ ಕುಳಿದ ಮಾಜಿ ಶಾಸಕರು
ಕೇವಲ ಹತ್ತು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿದ್ದಾ ಜಿದ್ದಿಯ ಹೋರಾಟ ನಡೆಸಿದ್ದ ಮಾಜಿ ಶಾಸಕರಾದ ವೈಎಸ್‌.ವಿ. ದತ್ತ ಮತ್ತು ಬೆಳ್ಳಿಪ್ರಕಾಶ್‌ ಇಬ್ಬರೂ ಪ್ರಥಮ ಬಾರಿ ವೇದಿಕೆ ಹಂಚಿಕೊಂಡರು. ಕೋಮುವಾದಿ ಪಕ್ಷ ಎಂದೇ ಸದಾ ಹೇಳುತ್ತಿದ್ದ ದತ್ತ ಬಿಜೆಪಿಯ ಮತ್ತು ಬೆಳ್ಳಿಪ್ರಕಾಶ್‌ ಜೆಡಿಎಸ್‌ ಶಾಲು ಧರಿಸಿ ಗಮನ ಸೆಳೆದರು. ಮಾತಿನ ಮಧ್ಯೆ ದತ್ತ ಅವರು ಬೆಳ್ಳಿ ನನ್ನ ಶಿಷ್ಯ. ಆತನ ನೇತೃತ್ವದಲ್ಲೇ ಕಾರ್ಯಕರ್ತರು ಪ್ರಜ್ವಲ್‌ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಕರೆ ನೀಡಿದರು. ಬೆಳ್ಳಿಪ್ರಕಾಶ್‌ ಸಹ ನನ್ನ ಗುರುಗಳಾದ ದತ್ತ ಎಂದು ಹೇಳಿ ಒಗ್ಗಟ್ಟು ಪ್ರದರ್ಶಿಸಿದರು.

ಟಾಪ್ ನ್ಯೂಸ್

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

7-bus

Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.