ವಿಭಿನ್ನಶೈಲಿ ಗಡಿಯಾರ ಕಲಾಕಾರ ವಿಜಯ

ಅಂಕವಿಕಲನಾದರೂ ಸಾಧಿಸುವ ಛಲ ಬಿಡದ ಕುಮಾರಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್ ಚಾಂಪಿಯನ್‌

Team Udayavani, Mar 9, 2020, 1:22 PM IST

9-March-10

ಚಿಕ್ಕಮಗಳೂರು: ಸಾಧನೆ ಯಾರ ಸ್ವತ್ತು ಅಲ್ಲ, ಸಾಧಿಸುವ ಛಲವಿರಬೇಕಷ್ಟೇ. ಅನೇಕರು ದೈಹಿಕವಾಗಿ ಶಕ್ತರಾಗಿದ್ದರೂ ತಮ್ಮ ಶೈಕ್ಷಣಿಕ ಅರ್ಹತೆಗೆ ಸರಿದೂಗುವ ಅವಕಾಶ ಸಿಗಲಿಲ್ಲ ಎಂದು ಮೂಲೆಗುಂಪಾದವರ ನಡುವೆ ಹುಟ್ಟಿನಿಂದ ಕಿವುಡ-ಮೂಗನಾಗಿರುವ ನಗರದ ವಿಜಯ್‌ಕುಮಾರ್‌ ಛಲ ಬಿಡದೇ ವಿಭಿನ್ನ ರೀತಿಯ ಗಡಿಯಾರವನ್ನು ತಯಾರಿಸುವ ಮೂಲಕ ಎಲೆಮರೆ ಕಾಯಿಯಂತೆ ಸಾಧನೆಯಲ್ಲಿ ತೊಡಗಿದ್ದಾರೆ.

ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್‌ನಲ್ಲಿ ಗಡಿಯಾರದ ಅಂಗಡಿ ನಡೆಸುತ್ತಿರುವ ವಿಜಯ್‌ಕುಮಾರ್‌ ಹುಟ್ಟು ವಿಕಲಚೇತನ. ಇವರಿಗೆ ಕಿವಿ ಕೇಳಿಸುವುದಿಲ್ಲ, ಮಾತು ಬಾರದು. ಹುಟ್ಟಿನಿಂದ ಇವರಿಗೆ ಅಂಗವೈಕಲ್ಯ ಬಂದಿದ್ದರೂ ಅದಕ್ಕೆ ಶಪಿಸುತ್ತ ಕಾಲ ಕಳೆಯದೇ ಸ್ವ ಸಾಮರ್ಥ್ಯದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ತರಬೇತಿ ಪಡೆದು ಕಲಿತಿಲ್ಲ: ಅಪರೂಪ, ವೈವಿಧ್ಯಮಯ ಗಡಿಯಾರ ತಯಾರಿಸುವ ಹಾಗೂ ಯಾರಿಂದಲೂ ರಿಪೇರಿ ಮಾಡಲಾಗದ ವಾಚ್‌ಗಳು, ಗಡಿಯಾರಗಳನ್ನು ಕೆಲವೇ ಕ್ಷಣಗಳಲ್ಲಿ ರಿಪೇರಿ ಮಾಡುವ ಕಲೆ ಸಿದ್ಧಿಸಿಕೊಂಡಿದ್ದಾರೆ. ವಿಜಯ್‌ಕುಮಾರ್‌ ಗಡಿಯಾರ ತಯಾರಿಸುವ ಕಲೆ ಯಾರಿಂದಲೂ ತರಬೇತಿ ಪಡೆದು ಕಲಿತದ್ದಲ್ಲ. ಕೇವಲ 7ನೇ ತರಗತಿ ಓದಿರುವ ಇವರು ಚಿಕ್ಕ ವಯಸ್ಸಿನಲ್ಲಿ ವಾಚ್‌ ರಿಪೇರಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು.

ಅಲ್ಲಿ ನೋಡಿದ್ದನ್ನೇ ಮನಸ್ಸಿನಲ್ಲಿ ತೆಗೆದುಕೊಂಡು ತಮ್ಮ ಮನೋಸಾಮರ್ಥ್ಯದಿಂದ ಸ್ವತಃ ತಾವೇ ಗಡಿಯಾರ ರಿಪೇರಿ ಮಾಡುವುದನ್ನು ಕಲಿತಿದ್ದಾರೆ.

ಅಪರೂಪದ ಗಡಿಯಾರ ತಯಾರಿಕೆ: ಸಮಾಜ ತಮ್ಮನ್ನು ನೋಡುವ ದೃಷ್ಟಿ ಬದಲಾಗಬೇಕಾದಲ್ಲಿ ಏನಾದರೂ ಸಾಧಿಸಿ ತೋರಬೇಕೆಂದು ನಿಶ್ಚಯಿಸಿ 20 ವರ್ಷಗಳಿಂದ ಯಾರೂ ನೋಡಿರದಂತಹ 400 ವರ್ಷಗಳ ಹಿಂದೆ ಬಳಸುತ್ತಿದ್ದ ಅಪರೂಪದ ಜಲಗಡಿಯಾರ, ಪೆಂಡ್ಯುಲಮ್‌ ಗಡಿಯಾರ, ಮರಳಿನಿಂದ ಓಡುವ ಗಡಿಯಾರ, ಸೈಕಲ್‌ನಿಂದ ಚಲಿಸುವ ಗಡಿಯಾರ, ನೀರಿನಿಂದ ಓಡುವ ಗಡಿಯಾರ ಸೇರಿದಂತೆ ವಿಸ್ಮಯಕಾರಿ ಗಡಿಯಾರ ತಯಾರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಎಲ್ಲೆಡೆ ಬೇಡಿಕೆ: ಇವರು ತಯಾರಿಸುವ ಅಪರೂಪದ ಗಡಿಯಾರಗಳಿಗೆ ಎಲ್ಲೆಡೆ ಬೇಡಿಕೆ ಇದೆ. ಹೆಚ್ಚಾಗಿ ಗ್ರಾಹಕರು ಇಂತಹ ಗಡಿಯಾರ ಮನೆಯಲ್ಲಿ ಅಲಂಕಾರಕ್ಕಾಗಿ ಬಳಸುತ್ತಾರೆ. ಅದರಲ್ಲೂ ಬೆಂಗಳೂರಿನಿಂದ ಇಂತಹ ಗಡಿಯಾರಕ್ಕೆ ಬೇಡಿಕೆ ಹೆಚ್ಚು ಬರುತ್ತಿದೆ. ಇಂತಹ ಗಡಿಯಾರಗಳನ್ನು ವಿಜಯ್‌ಕುಮಾರ್‌ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ.

ಗಡಿಯಾರಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಸುತ್ತಮುತ್ತಲು ಸಿಗುವ ಅನುಪಯುಕ್ತ ವಸ್ತುಗಳಿಂದಲೇ ಆಯ್ದುಕೊಳ್ಳುತ್ತಾರೆ. ವಿಜಯ್‌ಕುಮಾರ್‌ ಒಬ್ಬ ಉತ್ತಮ ಚಿತ್ರಕಲಾವಿದರೂ ಆಗಿರುವುದರಿಂದ ಆ್ಯಂಟಿಕ್ಯೂ ಗಡಿಯಾರಗಳನ್ನು ಸುಂದರವಾಗಿ ಸ್ವತಃ ಅವರೇ ತಯಾರಿಸುತ್ತಾರೆ.

ತಮ್ಮ ಬಳಿ ಬರುವವರು ಹಿಂದಿನ ಕಾಲದ ಮರಳು, ನೀರು ಚಾಲಿತ ಗಡಿಯಾರಗಳನ್ನು ಆರ್ಡರ್‌ ಕೊಟ್ಟು ಮಾಡಿಸುತ್ತಾರೆ. ಇವರ ಅಸಾಧಾರಣ ಪ್ರತಿಭೆಗೆ ಬೆರಾಗಾಗುವ ಗ್ರಾಹಕರು ಸಣ್ಣಪುಟ್ಟ ವಾಚ್‌ ರಿಪೇರಿಗೂ ವಿಜಯ್‌ ಬಳಿಗೆ ಬರುತ್ತಾರೆ. ಇದರಿಂದ ವಿಜಯ್‌ ಅವರ ಅಂಗಡಿ ಸದಾ ಗ್ರಾಹಕರಿಂದಲೇ ತುಂಬಿರುತ್ತದೆ.

ಅಪರೂಪದ ಬಹುಮುಖ ಪ್ರತಿಭೆ ವಿಜಯ್‌ ಕುಮಾರ್‌ ನಗರದ ಹನುಮಂತಪ್ಪ ಸರ್ಕಲ್‌ನ ಷರೀಫ್‌ ಗಲ್ಲಿಯಲ್ಲಿ ಸಣ್ಣದೊಂದು ಅಂಗಡಿಯಿಂದ ಜೀವನ ನಡೆಸುತ್ತಿದ್ದಾರೆ. ವಿವಾಹಿತರಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಬಡತನದ ಬೇಗೆಯಲ್ಲೂ ದೈಹಿಕ ನ್ಯೂನತೆ ನಡುವೆ ವಿಶಿಷ್ಟ ಸಾಧನೆ ಮಾಡುತ್ತಿರುವ ಅವರು ತಮ್ಮ ಅಂಗಡಿಯಲ್ಲಿ ಯಾವಾಗಲೂ ಗಡಿಯಾರಗಳ ಪ್ರಪಂಚದಲ್ಲಿಯೇ ಮುಳುಗಿರುತ್ತಾರೆ. ತಾನೊಬ್ಬ ಅಂಗವಿಕಲ ಎಂಬುದನ್ನು ಮರೆತು ಸದಾ ಹೊಸ ಬಗೆಯ ಗಡಿಯಾರಗಳ ತಯಾರಿಕೆ ಬಗ್ಗೆ ಸಂಶೋಧನೆಯಲ್ಲಿ ನಿರತರಾಗಿರುತ್ತಾರೆ .

ಸಾಧಕರನ್ನು ಗುರುತಿಸಿ-ಚೈತನ್ಯ ತುಂಬಿ
ಪ್ರತಿನಿತ್ಯ ಹೊಸ ಮಾದರಿ ಗಡಿಯಾರ ತಯಾರಿಕೆಯಲ್ಲಿ  ಜಯಕುಮಾರ ನಿರತರಾಗಿರುತ್ತಾರೆ. ತಮ್ಮಂತೆ ಅಂಗವಿಕಲತೆ ಹೊಂದಿದವರಿಗೆ ತಾವು ಕಲಿತ ವಿದ್ಯೆ ಹೇಳಿಕೊಡುತ್ತಾರೆ. ಉತ್ತಮ ಚಿತ್ರಕಲಾವಿದರಾಗಿರುವ ವಿಜಯ್‌ ಕರಾಟೆಯಲ್ಲಿ ಪರಿಣಿತರಾಗಿದ್ದು, ಬ್ಲ್ಯಾಕ್‌ಬೆಲ್ಟ್ ಚಾಂಪಿಯನ್‌. ಕಿವುಡ-ಮೂಗನಾಗಿದ್ದುಕೊಂಡು ಸಾಧನೆಗೈದ ಇವರನ್ನು ಕೆಲ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಸರ್ಕಾರ ಇಂತಹ ಅಪರೂಪದ ಸಾಧಕರನ್ನು ಗುರುತಿಸಿ ಇನಷ್ಟು ಚೈತನ್ಯ ತುಂಬಲಿ ಎಂಬುದು ಹಿತೈಷಿಗಳ ಮನವಿ.

ಟಾಪ್ ನ್ಯೂಸ್

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-ckm

Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi

ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ

12-

Chikkamagaluru: ನಕ್ಸಲರ ಶರಣಾಗತಿಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮಟೆ ಮನವಿ

Chikkamagaluru: ನಕ್ಸಲ್‌ ಆರೋಪಿತರ ಪ್ರಕರಣ ಖುಲಾಸೆ

Chikkamagaluru: ನಕ್ಸಲ್‌ ಆರೋಪಿತರ ಪ್ರಕರಣ ಖುಲಾಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.