![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 20, 2021, 9:08 AM IST
ಚಿಕ್ಕಮಗಳೂರು: ಮೆಡಿಕಲ್ ಸ್ಟೋರ್ ಸಿಬ್ಬಂದಿ ಗ್ರಾಹಕರೊಬ್ಬರಿಗೆ 9 ವರ್ಷದ ಹಳೇ ಗ್ಲೂಕೋಸ್ ಅನ್ನು ನೀಡಿದ ಆಘಾತಕಾರಿ ಘಟನೆ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದಿದೆ.
ಗುರು ಎಂಬುವರು ಜನರಿಕ್ ಮೆಡಿಕಲ್ ಕೇಂದ್ರದಲ್ಲಿ ಗ್ಲೂಕೋಸ್ ಒಂದನ್ನು ಖರೀದಿಸಿದ್ದರು. ಈ ವೇಳೆ 9 ವರ್ಷ ಹಳೇ ಗ್ಲೂಕೋಸ್ ಕಂಡು ಕಂಗಾಲಾದ ಅವರು, ಪರೀಕ್ಷೆ ಮಾಡಲೆಂದೇ ಮತ್ತೊಂದು ಗ್ಲೂಕೋಸ್ ಪ್ಯಾಕೇಟ್ ಕೊಂಡುಕೊಂಡಿದ್ದಾರೆ.
ಈ ವೇಳೆ 2012 ಏಪ್ರಿಲ್ ನಲ್ಲಿ ತಯಾರಾದ ಗ್ಲೂಕೋಸ್, 2021 ರ ಏಪ್ರಿಲ್ ನಲ್ಲಿ ಮತ್ತೆ ಮಾರಾಟವಾಗಿರುವುದು ಪತ್ತೆಯಾಗಿದೆ. ಮೆಡಿಕಲ್ ಸ್ಟೋರ್ ನವರು ಗ್ಲುಕೋಸ್ ತಯಾರಿಕಾ ದಿನಾಂಕದ ಮೇಲೆ ಮತ್ತೊಂದು ಲೇಬಲ್ ಹಾಕಿ ಮತ್ತೆ ಮಾರಾಟ ಮಾಡಿದ್ದಾರೆ.
ಇದನ್ನೂ ಓದಿ: ಈ ಡೈವ್ ಅಂದು ಹೊಡೆದಿದ್ದರೇ ವಿಶ್ವಕಪ್ ಗೆಲ್ಲಬಹುದಿತ್ತು! ನೆಟ್ಟಿಗರ ವಾದವೇನು ?
ಗ್ಲೂಕೋಸಿನ ಆಯಸ್ಸು ಕೇವಲ 24 ತಿಂಗಳು ಮಾತ್ರವಿದ್ದರೂ 26 ರೂಪಾಯಿಯ ಗ್ಲೂಕೋಸ್ 13 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಅದು ಕೂಡ 9 ವರ್ಷ ಹಳೆಯದು ಎಂದು ಗುರು ಆರೋಪಿಸಿದ್ದಾರೆ.
ಇದನ್ನೂ ಓದಿ: ಉಪೇಂದ್ರ ನೇರ ಮಾತು: ಬಿಝಿನೆಸ್ ರಾಜಕಾರಣವೇ ಇವತ್ತಿನ ಸ್ಥಿತಿಗೆ ಕಾರಣ !
You seem to have an Ad Blocker on.
To continue reading, please turn it off or whitelist Udayavani.