Chikkamagaluru; ರಾಹುಲ್ ಗಾಂಧಿ ತನ್ನ ಅಯೋಗ್ಯತನ ಪ್ರದರ್ಶಿಸಿದ್ದಾರೆ: ಸಿ.ಟಿ ರವಿ
Team Udayavani, Jul 2, 2024, 6:01 PM IST
ಚಿಕ್ಕಮಗಳೂರು: ರಾಹುಲ್ ಗಾಂಧಿ ತನ್ನ ಅಯೋಗ್ಯತನವನ್ನು ಪ್ರದರ್ಶನ ಮಾಡಿದ್ದಾರೆ. ತಾನು ವಿಪಕ್ಷ ನಾಯಕ ಎಂಬ ಜವಾಬ್ದಾರಿಯನ್ನೂ ಮರೆತಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಎಂದು ಹೇಳುವವರು ದ್ವೇಷ ಭಾವನೆ ಬಿತ್ತುವವರು ಎಂಬ ಆರೋಪ ಮಾಡಿದ್ದಾರೆ. ಹಿಂದೂ ಎಂದರೆ ಸರ್ವೇ ಜನ ಸುಖಿನೋಭವಂತು ಎನ್ನುವುದನ್ನು ಪ್ರತಿಪಾದಿಸಿದೆ. ಹಿಂದೂ ಎನ್ನುವುದು ವಿಶ್ವ ಒಂದು ಕುಟುಂಬ ಎಂದು ಭಾವಿಸುವುದು. ಹಿಂದೂ ಎನ್ನುವುದು ಅಣುರೇಣು ತೃಣಕಾಷ್ಟಗಳಲ್ಲೂ ಭಗವಂತನನ್ನು ಕಾಣುವುದು. ಹಿಂದೂ ಎನ್ನುವುದು ಮನುಷ್ಯ ಮಾತ್ರವಲ್ಲ ಮರಗಿಡ-ಪ್ರಾಣಿಪಕ್ಷಿಯೂ ಚೆನ್ನಾಗಿರಬೇಕೆಂದು ಪ್ರಾರ್ಥಿಸುವುದು. ಅನ್ನ ಬೆಂದಿದೆಯಾ ಎಂದು ನೋಡಲು ಎಲ್ಲಾ ಅಕ್ಕಿಯನ್ನು ಮುಟ್ಟಿ ನೋಡಬೇಕಿಲ್ಲ. ರಾಹುಲ್ ಅವರು ಚೊಚ್ಚಲ ಭಾಷಣದಲ್ಲಿಯೇ ನಾನು ಆ ಸ್ಥಾನಕ್ಕೆ ಯೋಗ್ಯನಲ್ಲ ಎಂದು ತೋರಿಸಿದ್ದಾರೆ ಎಂದರು.
ರಾಹುಲ್ ಗಾಂಧಿ ಸಹಸ್ರಾರು ವರ್ಷದ ಸನಾತನ ಪರಂಪರಗೆ ಅಪಮಾನದ ಕೆಲಸ ಮಾಡಿದ್ದಾರೆ. ತನ್ನ ಹೇಳಿಕೆಗೆ ರಾಷ್ಟ್ರದ ಕ್ಷಮೆಯಾಚನೆ ಮಾಡಬೇಕು. ತಕ್ಷಣ ಕ್ಷಮೆಯಾಚಿಸಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಬೇಕಾದ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಯಾರೋ ಟ್ಯೂಷನ್ ಕೊಟ್ಟಿದ್ದನ್ನು ಇಲ್ಲಿ ಹೇಳುವುದು ಎಂದು ಆ ಮನುಷ್ಯನನ್ನು ನೋಡಿದರೆ ಗೊತ್ತಾಗುತ್ತದೆ. ಆ ಟ್ಯೂಷನ್ ಕೊಡುವವರು ಭಾರತ ವಿರೋಧಿಗಳು ಅಥವಾ ಹಿಂದೂ ವಿರೋಧಿಗಳು ಇರಬೇಕು. ಆ ಮೂಲಕವೇ ತನ್ನ ಅಯೋಗ್ಯತನ ಏನು ಎನ್ನುವದನ್ನು ಇವರು ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್ಸಿಗೆ ಎರಡು ಅವಧಿಯಲ್ಲಿ ಅಧಿಕೃತ ವಿಪಕ್ಷದ ನಾಯಕನಾಗುವ ಯೋಗ್ಯತೆಯನ್ನು ಜನ ಕೊಟ್ಟಿರಲಿಲ್ಲ. ಮೂರನೇ ಬಾರಿ ಅವಕಾಶ ಸಿಕ್ಕಾಗ ಕಾಂಗ್ರೆಸ್ ಓರ್ವ ಅಯೋಗ್ಯನನ್ನ ಕೂರಿಸಿ ನಾವು ವಿಪಕ್ಷಕ್ಕೂ ಲಾಯಕ್ಕಲ್ಲ ಎಂದು ತೋರಿಸಿದೆ ಎಂದು ಟೀಕಿಸಿದರು.
ಎಐಸಿಸಿ ಅಧ್ಯಕ್ಷರೇ, ಈ ಹೇಳಿಕೆಯನ್ನು ನಿಮ್ಮ ಕಾಂಗ್ರೆಸ್ ಪಕ್ಷ ಒಪ್ಪುತ್ತಾ? ನೀವು ಗುಲಾಮಗಿರಿಯನ್ನು ಒಪ್ಪದಿದ್ರೆ ಈ ಹೇಳಿಕೆಯನ್ನು ವಿರೋಧಿಸುತ್ತೀರಾ? ನೀವು ಗುಲಾಮಗಿರಿಯನ್ನು ಒಪ್ಪಿದರೆ ಗುಲಾಮಿ ಮಾನಸಿಕತೆಯಿಂದ ಅವರು ಹೇಳಿದ್ದೆಲ್ಲಾ ಸರಿ ಅಂತ ಜೀ ಹೂಜರ್ ಅಂತೀರಾ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಮೂಡಾದಲ್ಲಿ 5 ಸಾವಿರ ಕೋಟಿ ಹಗರಣ ಆರೋಪ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿಯೇ ನಡೆದಿರುವ ಹಗರಣ. ಚಾರ್ಲ್ ಶೋಭರಾಜ್ ಬದುಕಿದ್ದರೆ ನನ್ನನ್ನ ಮೀರಿಸುತ್ತಾರೆ ಎಂದು ಕಾಂಗ್ರೆಸ್ಸಿಗರಿಗೆ ಸರ್ಟಿಫಿಕೇಟ್ ಕೊಡಬಹುದು. ಕಾಂಗ್ರೆಸ್ಸಿನದ್ದು ದೊಡ್ಡ ಲೂಟಿ, ಮಹಾ ಮೋಸ. ಗಂಗಾ ಕಲ್ಯಾಣ ಯೋಜನೆಗೆ ಒಂದು ಬೋರ್ ವೆಲ್ ಗೆ 3500 ಲಂಚ. ಇದು ಕಾಂಗ್ರೆಸ್ ನ ಸ್ಯಾಂಪಲ್ ಅಷ್ಟೆ. ಇವರು ಲೂಟಿಗೆ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಪ್ಲಾನ್ ಸ್ಯಾಂಕ್ಷನ್ ಮಾಡಿಸಲು 1 ಅಡಿಗೆ 100 ರೂ ಲಂಚ ಕೊಡಬೇಕು. ಇದು ಇಂದಿನ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.