ನಿರಾಶ್ರಿತರ ಕೇಂದ್ರಕ್ಕೆ ಕಾರ್ಮಿಕರು
ತಾಂತ್ರಿಕ ದೋಷ ಅರ್ಜಿ ಸಲ್ಲಿಕೆಗೆ ತೊಂದರೆ
Team Udayavani, May 6, 2020, 5:17 PM IST
ಚಿಕ್ಕಮಗಳೂರು: ಸೇವಾ ಸಿಂಧೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಗರದ ತಾಲೂಕು ಕಚೇರಿಗೆ ಬಂದಿದ್ದ ವಲಸೆ ಕಾರ್ಮಿಕರು.
ಚಿಕ್ಕಮಗಳೂರು: ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿರುವ ಬೇರೆ ರಾಜ್ಯಗಳ ವಲಸೆ ಕಾರ್ಮಿಕರಿಗೆ ಅವರ ರಾಜ್ಯಗಳಿಗೆ ಕಳಿಸಿಕೊಡಲು ಸರ್ಕಾರ ಆದೇಶ ನೀಡಿ ಸೇವಾಸಿಂಧೂ ಆನ್‌ಲೈನ್ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಮಂಗಳವಾರ ತಾಂತ್ರಿಕ ದೋಷದಿಂದ ವೆಬ್‌ಸೈಟ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತಮಿಳುನಾಡು ಮೂಲದ 200 ಕ್ಕೂ ಹೆಚ್ಚು ಕಾರ್ಮಿಕರನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿದ ಘಟನೆ ಮಂಗಳವಾರ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಆಲದಗುಡ್ಡೆ ಸುತ್ತಮುತ್ತಲ ತೋಟಗಳಲ್ಲಿ ಕಳೆದ ಮೂರು ತಿಂಗಳ ಹಿಂದೆ ಮೆಣಸು ಕೊಯ್ಲಿಗೆ ತಮಿಳುನಾಡು ಸೇಲಂ ಜಿಲ್ಲೆಯ ವೃದ್ಧರು, ಮಕ್ಕಳು, ಮಹಿಳೆಯರು ಹಾಗೂ ಇಬ್ಬರು ಗರ್ಭಿಣಿಯರು ಸೇರಿದಂತೆ 80ಕ್ಕೂ ಮಂದಿ ಲಾಕ್‌ಡೌನ್ ನಿಂದ ತಮ್ಮ ಊರುಗಳಿಗೆ ತೆರಳಲಾಗದೆ ತೋಟಗಳಲ್ಲಿ ಸಿಲುಕಿದ್ದರು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ತಮ್ಮ ರಾಜ್ಯಕ್ಕೆ ಹೋಗಲು ಸರ್ಕಾರ ಅವಕಾಶ ನೀಡಿದ್ದರ ಬಗ್ಗೆ ಮಾಹಿತಿ ಪಡೆದ ಕಾರ್ಮಿಕರು ಸೇವಾಸಿಂಧೂ ಆನ್ ಲೈನ್ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಮಂಗಳವಾರ ಬೆಳಗ್ಗೆ ತಮ್ಮ ಅಗತ್ಯ ವಸ್ತುಗಳೊಂದಿಗೆ ತಾಲೂಕು ಕಚೇರಿಗೆ ಬಂದಿದ್ದರು.ಸೇವಾಸಿಂಧೂ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿ ನಮ್ಮನ್ನು ನಮ್ಮ ರಾಜ್ಯಕ್ಕೆ ಹೋಗಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಸೇವಾ ಸಿಂಧೂ ಆನ್ ಲೈನ್ ವೆಬ್‌ಸೈಟ್ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು, ಮರು ಚಾಲನೆ ಪಡೆಯಲು ಎರಡು ದಿನ ಕಾಲಾವಕಾಶ ಬೇಕಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಮರಳಿ ತೋಟಕ್ಕೂ ತೆರಳಲಾಗದೆ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಕಾರ್ಮಿಕರು ಕಂಗಾಲಾಗಿದ್ದರು. ಪಶ್ಚಿಮ ಬಂಗಾಳ ರಾಜ್ಯದ 15ಕ್ಕೂ ಹೆಚ್ಚು ಯುವಕರ ತಂಡ ಸಾಮಿಲ್‌ಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಅವರು ತಮ್ಮ ಊರುಗಳಿಗೆ ತೆರಳಲು ಅರ್ಜಿ ಸಲ್ಲಿಸಲು ತಾಲೂಕು ಕಚೇರಿಗೆ ಬಂದಿದ್ದರು.
ಆನ್‌ಲೈನ್ ಸ್ಥಗಿತದಿಂದ ಅವರು ಕೂಡ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ದಿಕ್ಕು ಕಾಣದಂತಾಗಿದ್ದರು. ವಿಷಯ ತಿಳಿದ ಜಿಲ್ಲಾಡಳಿತ ಅವರಿಗೆ ನಿರಾಶ್ರಿತ ಕೇಂದ್ರದಲ್ಲಿ ವಾಸ್ತವ್ಯ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ವಿಜಯಪುರ ಜಿಲ್ಲೆಯ ಹೂವಿನಹಡಗಲಿಗೆ ತೆರಳಲು ಬಂದಿದ್ದ ಸುಮಾರು 30ಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರನ್ನು ತಾಲೂಕು ಕಚೇರಿ ಆವರಣದಿಂದ ಬಸ್‌ಗಳ ಮೂಲಕ ಅವರ ಜಿಲ್ಲೆಗೆ ಕಳಿಸಿಕೊಟ್ಟಿದೆ.
ಸೇವಾ ಸಿಂಧೂ ಆನ್ ಲೈನ್ ವೆಬ್‌ಸೈಟ್ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದು ಮರು ಚಾಲನೆ ಪಡೆಯಲು ಎರಡು ದಿನಗಳ ಬೇಕಾಗುತ್ತದೆ. ಕಾರ್ಮಿಕರು ಮರಳಿ ತೋಟಕ್ಕೆ ಹೋಗಲು ಕಷ್ಟವಾಗುವುದರಿಂದ ಅವರಿಗೆ ನಿರಾಶ್ರಿತ ಕೇಂದ್ರದಲ್ಲಿ ನೆಲೆ ಕಲ್ಪಿಸಿ ವೆಬ್‌ಸೈಟ್ ಆರಂಭಗೊಂಡ ನಂತರ ಅವರನ್ನು ಅವರ ರಾಜ್ಯಕ್ಕೆ ಕಳಿಸಿಕೊಡಲಾಗುವುದು.?
ಹರೀಶ್ ಪಾಂಡೆ,
ಪೊಲೀಸ್ ವರಿಷ್ಠಾಧಿಕಾರಿ
ತಾಂತ್ರಿಕ ದೋಷದಿಂದ ವೆಬ್‌ಸೈಟ್ ಸ್ಥಗಿತಗೊಂಡಿದ್ದು ತಮಿಳುನಾಡಿನ ವಲಸೆ ಕಾರ್ಮಿಕರ ಹೆಸರು ವಿಳಾಸಗಳನ್ನು ಪರಿಶೀಲನೆ ನಡೆಸಿ ಪಟ್ಟಿ ತಯಾರಿಸಿಕೊಳ್ಳಲಾಗುತ್ತಿದ್ದು ಅಗತ್ಯ ಕ್ರಮಗಳಿಗಾಗಿ ಜಿಲ್ಲಾಡಳಿತಕ್ಕೆ ಕೋರಲಾಗುವುದು.
ನಂದಕುಮಾರ್,
ತಹಶೀಲ್ದಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.