Chikkamagaluru: ಶ್ರೀರಾಮಸೇನೆಯಿಂದ ನಾಳೆ 21ನೇ ವರ್ಷದ ದತ್ತಮಾಲಾ ಅಭಿಯಾನ

1700 ಕ್ಕೂ ಹೆಚ್ಚಿನ ಪೊಲೀಸರ ನಿಯೋಜನೆ.. ಸೂಕ್ಷ್ಮ ಪ್ರದೇಶಗಳಲ್ಲಿ ವ್ಯಾಪಕ ಕಟ್ಟೆಚ್ಚರ

Team Udayavani, Nov 9, 2024, 5:45 PM IST

mutalik (2)

ಚಿಕ್ಕಮಗಳೂರು: ಶ್ರೀರಾಮಸೇನೆಯಿಂದ ಹಮ್ಮಿಕೊಂಡಿರುವ 21ನೇ ವರ್ಷದ ದತ್ತಮಾಲಾ ಅಭಿಯಾನ ಭಾನುವಾರ(ನ10) ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆದುಕೊಳ್ಳಲಿದ್ದಾರೆ.

ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ದತ್ತದೀಪೋತ್ಸವ, ಪಡಿ ಸಂಗ್ರಹ ಕಾರ್ಯಗಳು ನಡೆದಿದ್ದು, ಭಾನುವಾರ ಬೆಳಗ್ಗೆ ನಗರದ ಶಂಕರಮಠ ಸಮೀಪದ ವೇದಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ಸ್ವಾಮೀಜಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಸಭೆಯ ನಂತರ ಶಂಕರಮಠ ಸಮೀಪದಿಂದ ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ಎಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದ ವರೆಗೂ ಶೋಭಾಯಾತ್ರೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ದತ್ತಭಕ್ತರು ವಾಹನಗಳಲ್ಲಿ ದತ್ತಪೀಠಕ್ಕೆ ತೆಳುವರು.

ದತ್ತಪೀಠದಲ್ಲಿ ಸಮಾವೇಶಗೊಳ್ಳುವ ದತ್ತಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ ಅಲ್ಲಿಂದ ಕೆಲವರು ಕಾಲ್ನಡಿಗೆಯಲ್ಲಿ ಇನ್ನೂ ಕೆಲವರು ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ಅಲ್ಲಿ ಜರಗುವ ಹೋಮ ಹವನಗಳಲ್ಲಿ ಪಾಲ್ಗೊಂಡು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಇದರೊಂದಿಗೆ ಶ್ರೀರಾಮ ಸೇನೆಯಿಂದ ಹಮ್ಮಿಕೊಂಡಿರುವ 21 ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ತೆರೆ ಬೀಳಲಿದೆ.

ಪೊಲೀಸ್ ಇಲಾಖೆಯಿಂದ ಬೀಗಿ ಬಂದೋಬಸ್ತ್

ಶ್ರೀರಾಮಸೇನೆಯಿಂದ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ದತ್ತಭಕ್ತರು ಆಗಮಿಸುವ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ನಿಯೋಜಿಸಲಾಗಿದೆ. ದತ್ತಪೀಠ ಹಾಗೂ ಚಿಕ್ಕಮಗಳೂರು ನಗರದಲ್ಲಿ1700 ಕ್ಕೂ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ಎಸ್.ಪಿ. ಅಡಿಷನಲ್ ಎಸ್‌ಪಿ, 6 ಜನ ಡಿವೈಎಸ್‌ಪಿ, 15 ಜನ ಸಿಪಿಐ, 100 ಜನ ಪಿಎಸ್‌ಐ, 1500 ಜನ ಪೊಲೀಸ್ ಸಿಬ್ಬಂದಿ 8 ಕೆಎಸ್‌ಆರ್‌ಪಿ ತುಕಡಿ ಹಾಗೂ 11 ಡಿಎಆರ್ ತುಕಡಿ, ಕ್ಯೂಆರ್‌ಟಿ ಟೀಮ್ ಮತ್ತು 2 ಎಸಿ ಟೀಮ್ ನಿಯೋಜನೆ ಮಾಡ ಲಾಗಿದೆ. ದತ್ತಪೀಠದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಜತೆಗೆ ದ್ರೋಣ್ ಕೆಮರಾಗಳ ಬಳಕೆ ಮಾಡಲಾಗುತ್ತಿದೆ.

ಪ್ರತಿವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರ, ದ್ರೋಣ್ ಕ್ಯಾಮರ ಬಳಸಲಾಗುತ್ತಿದೆ. ಬಾಟಲಿಗಳಲ್ಲಿ ಪೆಟ್ರೋಲ್ ನೀಡದಂತೆ ಪೆಟ್ರೋಲ್ ಬಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಸಂಘಟನೆಗಳೊಂದಿಗೆ ಚರ್ಚಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
-ಡಾ|ವಿಕ್ರಮ ಅಮಟೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಟಾಪ್ ನ್ಯೂಸ್

Delhi Election Results: BJP takes early lead, AAP faces tough competition

Delhi Election Results: ಬಿಜೆಪಿಗೆ ಆರಂಭಿಕ ಮುನ್ನಡೆ, ತೀವ್ರ ಸ್ಪರ್ಧೆಯತ್ತ ಆಪ್

Unlock Raghava Review

Unlock Raghava Review: ಅನ್‌ಲಾಕ್‌ ಮಾಡಿ ಮಜಾ ನೋಡಿ

Delhi Assembly Election: ದೆಹಲಿ ಮತ ಎಣಿಕೆ ಆರಂಭ; ಯಾರ ಪಾಲಾಗಲಿದೆ ದಿಲ್ಲಿಯ ಗದ್ದುಗೆ?

Delhi Assembly Election: ದೆಹಲಿ ಮತ ಎಣಿಕೆ ಆರಂಭ; ಯಾರ ಪಾಲಾಗಲಿದೆ ದಿಲ್ಲಿಯ ಗದ್ದುಗೆ?

Alwar: Google Maps misguides causes 7-hour traffic jam! What happened?

Alwar: ಗೂಗಲ್‌ ಮ್ಯಾಪ್‌ ಎಡವಟ್ಟಿನಿಂದ 7 ಗಂಟೆ ಟ್ರಾಫಿಕ್‌ ಜಾಮ್‌ ಉಂಟಾಯಿತು! ಆಗಿದ್ದೇನು?

prahlad-joshji

Achieve: 100 ಗಿಗಾ ವ್ಯಾಟ್‌ ಸೌರ ವಿದ್ಯುತ್‌: ಭಾರತದಿಂದ ಹೊಸ ಮೈಲುಗಲ್ಲು

RBI-Gov–malhotra

Introduce: ಸೈಬರ್‌ ವಂಚನೆ ತಡೆಗೆ ಬ್ಯಾಂಕ್‌ಗಳಿಗೆ ಹೊಸ ಡೊಮೈನ್‌

Maha-vikas-Agadi-Press

Allege: ಮಹಾರಾಷ್ಟ್ರ ಮತಪಟ್ಟಿಯಲ್ಲೇ ಭಾರೀ ಅವ್ಯವಹಾರ: ವಿಪಕ್ಷ ಮಹಾ ವಿಕಾಸ ಅಘಾಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫೆ. 15: ಶೃಂಗೇರಿ ಶಾರದಾಂಬಾ ಮಹಾರಥೋತ್ಸವ

Sringeri: ಫೆ. 15: ಶೃಂಗೇರಿ ಶಾರದಾಂಬಾ ಮಹಾರಥೋತ್ಸವ

Chikkamagaluru: ಕಾಡುಕೋಣ ದಾಳಿಗೆ ರೈತ ಸಾವು ಖಂಡಿಸಿ ಕಳಸ ಬಂದ್

Chikkamagaluru: ಕಾಡುಕೋಣ ದಾಳಿಗೆ ರೈತ ಸಾವು ಖಂಡಿಸಿ ಕಳಸ ಬಂದ್

Kalasa: ಕಾಫಿತೋಟದಲ್ಲಿ ಕಾಡುಕೋಣ ದಾಳಿ; ಕೃಷಿಕ ಸಾವು

Kalasa: ಕಾಫಿತೋಟದಲ್ಲಿ ಕಾಡುಕೋಣ ದಾಳಿ; ಕೃಷಿಕ ಸಾವು

Sringeri: Gun found in Hulagarubailu forest; suspected to have been thrown by Naxalites

Sringeri: ಹುಲಗಾರುಬೈಲು ಅರಣ್ಯದೊಳಗೆ ಬಂದೂಕು ಪತ್ತೆ; ನಕ್ಸಲರು ಎಸೆದಿರುವ ಶಂಕೆ

4-wedding

Kottigehara: ಮಂತ್ರ ಮಾಂಗಲ್ಯ ವಿವಾಹ ಪ್ರೋತ್ಸಾಹಿಸೋಣ: ನಟಿ ಪೂಜಾ ಗಾಂಧಿ

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

Delhi Election Results: BJP takes early lead, AAP faces tough competition

Delhi Election Results: ಬಿಜೆಪಿಗೆ ಆರಂಭಿಕ ಮುನ್ನಡೆ, ತೀವ್ರ ಸ್ಪರ್ಧೆಯತ್ತ ಆಪ್

Unlock Raghava Review

Unlock Raghava Review: ಅನ್‌ಲಾಕ್‌ ಮಾಡಿ ಮಜಾ ನೋಡಿ

Udupi: ರಾತ್ರಿ ಊಟ ಮಾಡಿ ಮಲಗಿದ್ದ ಮಹಿಳೆ ಬೆಳಗಾಗುತ್ತಲೆ ನಾಪತ್ತೆ

Udupi: ರಾತ್ರಿ ಊಟ ಮಾಡಿ ಮಲಗಿದ್ದ ಮಹಿಳೆ ಬೆಳಗಾಗುತ್ತಲೆ ನಾಪತ್ತೆ

Delhi Assembly Election: ದೆಹಲಿ ಮತ ಎಣಿಕೆ ಆರಂಭ; ಯಾರ ಪಾಲಾಗಲಿದೆ ದಿಲ್ಲಿಯ ಗದ್ದುಗೆ?

Delhi Assembly Election: ದೆಹಲಿ ಮತ ಎಣಿಕೆ ಆರಂಭ; ಯಾರ ಪಾಲಾಗಲಿದೆ ದಿಲ್ಲಿಯ ಗದ್ದುಗೆ?

Alwar: Google Maps misguides causes 7-hour traffic jam! What happened?

Alwar: ಗೂಗಲ್‌ ಮ್ಯಾಪ್‌ ಎಡವಟ್ಟಿನಿಂದ 7 ಗಂಟೆ ಟ್ರಾಫಿಕ್‌ ಜಾಮ್‌ ಉಂಟಾಯಿತು! ಆಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.