Chikkamagaluru; ಯುವಕನ್ನು ರಾತ್ರೋರಾತ್ರಿ ಕಾರಿನಲ್ಲಿ ಕರೆದೊಯ್ದು ಕೊಲೆ ಮಾಡಿದ ಸ್ನೇಹಿತರು!
Team Udayavani, Feb 16, 2024, 5:20 PM IST
ಚಿಕ್ಕಮಗಳೂರು: ರಾತ್ರೋರಾತ್ರಿ ಕಾರಿನಲ್ಲಿ ಕರೆದೊಯ್ದ ಮೂವರು ಯುವಕರು ತಮ್ಮ ಸ್ನೇಹಿತನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಕಡೂರು ತಾಲೂಕಿನ ಹೊಸೂರು ಸಮೀಪ ನಡೆದಿದೆ.
ಬೆಂಗಳೂರಿಂದ ಅಜ್ಜಿಯ ಮನೆಗೆ ಬಂದಿದ್ದ ಯುವಕನನ್ನು ಕರೆ ಮಾಡಿ ಕರೆಸಿಕೊಂಡ ಸ್ನೇಹಿತರು ಕತ್ತು ಕೊಯ್ದು ಮರ್ಡರ್ ಮಾಡಿರುವ ಘಟನೆ ಕಡೂರಿನ ಮಾಡಾಳು ಹೊಸೂರು ಸಮೀಪ ನಡೆದಿದೆ.
ಡ್ರೈವರ್ ಕೆಲಸ ಮಾಡುತ್ತಿದ್ದ ದರ್ಶನ್ ಕೊಲೆಯಾದ ಯುವಕ. ಕಳೆದ ರಾತ್ರಿ ಬೆಂಗಳೂರಿನಿಂದ ಮೂರ್ನಾಲ್ಕು ಜನ ಸ್ನೇಹಿತರು ಅಜ್ಜಿಯ ಮನೆಯಲ್ಲಿದ್ದ ದರ್ಶನ್ ನನ್ನು ಕರೆಸಿಕೊಂಡು ಮಧ್ಯರಾತ್ರಿ ಕೊಲೆ ಮಾಡಿದ್ದಾರೆ.
ಮೂಲತಃ ಮಧುಗಿರಿಯವನಾಗಿದ್ದ ದರ್ಶನ್ ಬೆಂಗಳೂರಿನ ಆರ್.ಆರ್ ನಗರದಲ್ಲಿ ವಾಸವಿದ್ದ ಎನ್ನಲಾಗಿದ್ದು, ಮೊನ್ನೆ ಕಡೂರಿನ ಅಜ್ಜಿ ಮನೆಗೆ ಬಂದಿದ್ದಾನೆ. ಇದನ್ನು ತಿಳಿದ ಆತನ ಮೂವರು ಸ್ನೇಹಿತರು ಕಡೂರಿಗೆ ಬರುತ್ತಿದ್ದೇವೆ ಬಾ ಎಂದು ಕರೆಸಿಕೊಂಡು ದರ್ಶನ್ ಮಾವ ಸೋಮಶೇಖರ್ ಗೆ ವಿಡಿಯೋ ಕಾಲ್ ಮಾಡಿದ್ದಾರೆ.
ಸ್ನೇಹಿತರ ಜೊತೆ ಹೋಗಿ ಬರುತ್ತೇನೆಂದು ಹೋದವನು ಶವವಾಗಿ ಬಂದಿದ್ದಾನೆ, ಹಣಕಾಸಿನ ವಿಚಾರ ಅಥವಾ ಹುಡುಗಿ ವಿಷಯಕ್ಕೆ ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಇತ್ತೀಚೆಗೆ ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿ ಕೆಲವು ದಿನಗಳ ಹಿಂದೆ ದರ್ಶನ್ ಬಿಡುಗಡೆಯಾಗಿದ್ದ.
ಕಡೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.