Chikkamagaluru; ಮಸೀದಿ ಸಮೀಪ ಕೇಸರಿ ಬಂಟಿಂಗ್ಸ್ ವಿಚಾರ; ಮಾತಿನ ಚಕಮಕಿ; ದೂರು ದಾಖಲು
Team Udayavani, Dec 22, 2023, 5:52 PM IST
ಚಿಕ್ಕಮಗಳೂರು: ದತ್ತಜಯಂತಿ ಹಿನ್ನಲೆ ಸಂಘಪರಿವಾರದ ಸದಸ್ಯರು ಮಸೀದಿ ಸಮೀಪ ಕೇಸರಿ ಬಂಟಿಂಗ್ಸ್ ಕಟ್ಟಲು ಮುಂದಾಗಿದ್ದು, ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಸ್ಥಳದಲ್ಲಿ ಕೆಲ ಹೊತ್ತು ಎರಡು ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಗುರುವಾರ ರಾತ್ರಿ ಆಲ್ದೂರು ಸಮೀಪದ ಹಾಂದಿ ಗ್ರಾಮದಲ್ಲಿ ನಡೆದಿದ್ದು ಆಲ್ದೂರು ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಾಗಿದೆ.
ಸಂಘ ಪರಿವಾರದ ಸದಸ್ಯರು ಆಲ್ದೂರು ಹಾಂದಿ ಸಂಪರ್ಕ ರಸ್ತೆಯಲ್ಲಿರುವ ತುಂಬಾ ಮಸೀದಿ ಸಮೀಪ ಕೇಸರಿ ಬಂಟಿಂಗ್ಸ್ ಗಳನ್ನು ಕಟ್ಟಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಅನ್ಯಕೋಮಿನ ಸ್ಥಳೀಯ ಮುಖಂಡರು ಮಸೀದಿ ಸಮೀಪದಲ್ಲಿ ಕೇಸರಿ ಬಂಟಿಂಗ್ಸ್ ಕಟ್ಟುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡು ಸಮುದಾಯದವರ ನಡುವೆ ಮಾತಿಕ ಚಕಮಕಿ ನಡೆದಿದ್ದು ಸ್ಥಳದಲ್ಲಿ ಕೆಲಹೊತ್ತು ಆತಂಕದ ವಾತವಾರಣ ನಿರ್ಮಾಣವಾಗಿತ್ತು ಎನ್ನಲಾಗುತ್ತಿದೆ.
ಮಸೀದಿಯಿಂದ ನಿರ್ದಿಷ್ಟ ದೂರದಲ್ಲಿ ಬಂಟಿಂಗ್ಸ್, ಬ್ಯಾನರ್ ಕಟ್ಟಬೇಕೆಂದು ನಿಯಮವೇ ಇದೆ. ನಿಯಮದ ಪ್ರಕಾರ ಬಂಟಿಂಗ್ಸ್ ಕಟ್ಟಬೇಕು ಎಂದು ಅನ್ಯಕೋಮಿನ ಮುಖಂಡರು ಪಟ್ಟು ಹಿಡಿದ್ದಾರೆ. ಈ ವೇಳೆ ಎರಡೂ ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯ ಮುಖಂಡರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಸೀದಿ ಸಮೀಪದಲ್ಲಿ ಬಂಟಿಂಗ್ಸ್ ಕಟ್ಟುವ ವಿಚಾರದಲ್ಲಿ ಎರಡು ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ
Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.