Chikkamagaluru; ವಿಹಿಂಪ, ಬಜರಂಗದಳ ಪ್ರತಿಭಟನೆ; ಪೊಲೀಸರ ಜತೆ ಮಾತಿನ ಚಕಮಕಿ


Team Udayavani, Jan 22, 2024, 1:18 PM IST

Chikkamagaluru; ವಿಹಿಂಪ, ಬಜರಂಗದಳ ಪ್ರತಿಭಟನೆ; ಪೊಲೀಸರ ಜತೆ ಮಾತಿನ ಚಕಮಕಿ

ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದತ್ತಪೀಠದಲ್ಲಿ ಶ್ರೀರಾಮ ತಾರಕ ಹೋಮ ನಡೆಸಲು ಅವಕಾಶ ನೀಡಿಲ್ಲವೆಂದು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ‌ ಆವರಣದಲ್ಲಿ ಹೋಮಕುಂಡವಿಟ್ಟು ಪ್ರತಿಭಟನೆ ನಡೆಸಿದರು.

ಈ ವೇಳೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ನಡೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಕೋಪಕ್ಕೆ ತಿರುಗಿದ ಕಾರ್ಯಕರ್ತರು ದತ್ತಪೀಠಕ್ಕೆ ತೆರಳಿ ಹೋಮ ಹವನ ನಡೆಸುವುದಾಗಿ ಜಿಲ್ಲಾಧಿಕಾರಿ ಆವರಣದಿಂದ ನಡೆದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ.ವಿಕ್ರಮ್ ಅಮಟೆ ಕಾರ್ಯಕರ್ತರ ಮನವೊಲಿಸಲು ಮುಂದಾದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಅಲ್ಲಿಂದ ಹಿಂತಿರುಗಿ ಕೆಲ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ನುಗ್ಗಲು ಯತ್ನಿಸಿದರು. ಎಚ್ಚೆತ್ತುಕೊಂಡ ಪೊಲೀಸ್ ಸಿಬ್ಬಂದಿ ಕಾರ್ಯಕರ್ತರನ್ನು ಬಂಧಿಸಲು ಮುಂದಾದರು. ಬಂಧನಕ್ಕೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕರ್ತರು ಹೈಡ್ರಾಮಾ ನಡೆಸಿದರು. ಆಟೋ ಶಿವಣ್ಣ ಎಂಬುವರು ರಸ್ತೆಯಲ್ಲೆ ಮಲಗಿ ಬಂಧನವನ್ನು ವಿರೋಧಿಸಿದರು.  ಒತ್ತಾಯ ಪೂರ್ವಕವಾಗಿ ಬಂಧಿಸಿದರು.

ದತ್ತಪೀಠ ಸಂವರ್ಧನ ಸಮಿತಿ ಸದಸ್ಯರನ್ನು ಈ ವೇಳೆ ಬಂಧಿಸಿದರು. ಜಿಲ್ಲಾಧಿಕಾರಿ ಆವರಣದಿಂದ ಬಂಧಿಸಿದ ಕಾರ್ಯಕರ್ತರನ್ನು ವಾಹನ ದಲ್ಲಿ ಕರೆದೊಯ್ಯುವ ವೇಳೆ ತೊಗರಿ ಹಂಕಲ್ ಸರ್ಕಲ್ ಬಳಿ ಬಂಧಿಸಿದ ಕಾರ್ಯಕರ್ತರ ವಾಹನವನ್ನು ಉಳಿದ ಹಿಂದೂ ಪರ ಸಂಘಟನೆ ಕಾರ್ಯ ಕರ್ತರು ತಡೆದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಲ್ಲಿಂದ ಕಾರ್ಯಕರ್ತರನ್ನು ಬಂಧಿಸಿದರು. ಹಿಂದೂ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ಯಿಂದ ಸ್ಥಳದಲ್ಲಿ ಆತಂಕದ ವಾತವರಣ ನಿರ್ಮಾಣವಾಯಿತು.

ಟಾಪ್ ನ್ಯೂಸ್

1-sdsa-dasd

Rain; ಜು.6 ರಂದು ಉಡುಪಿಯ 2 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

Sudhamurthy

Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?

1-asdsdasdas

Maharashtra ವಿಧಾನಸಭೆಯಲ್ಲಿ ನಾಲ್ವರು ವಿಶ್ವಕಪ್ ಹೀರೋಗಳಿಗೆ ಗೌರವ ಸಮ್ಮಾನ

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ: ಪತ್ರಿಕೆ ವಿತರಕ ಸಾವು

RadhaMohan-das

BJP Incharge: ರಾಜ್ಯ ಬಿಜೆಪಿಗೆ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

RJD: ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

Bajaj

Bajaj Freedom: ಬಜಾಜ್‌ ಫ್ರೀಡಂ 125 CNG ಬೈಕ್‌ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ

3-chikkamagaluru

ಮಹಿಳೆಯರೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು

Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು

ಸಿ.ಟಿ ರವಿ

Chikkamagaluru; ರಾಹುಲ್ ಗಾಂಧಿ ತನ್ನ ಅಯೋಗ್ಯತನ ಪ್ರದರ್ಶಿಸಿದ್ದಾರೆ: ಸಿ.ಟಿ ರವಿ

Chikkamagaluru: ಬಸ್ ಹತ್ತುವ ವೇಳೆ ತುಂಡಾದ ಡೋರ್ ಲಾಕ್… ಮಹಿಳೆಗೆ ಗಾಯ

Chikkamagaluru: ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ…

MUST WATCH

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

ಹೊಸ ಸೇರ್ಪಡೆ

1-sdsa-dasd

Rain; ಜು.6 ರಂದು ಉಡುಪಿಯ 2 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

Sudhamurthy

Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?

1-asdsdasdas

Maharashtra ವಿಧಾನಸಭೆಯಲ್ಲಿ ನಾಲ್ವರು ವಿಶ್ವಕಪ್ ಹೀರೋಗಳಿಗೆ ಗೌರವ ಸಮ್ಮಾನ

1-qewewq

Yakshagana ರಂಗದಿಂದ ಮರೆಯಾದ ಮೃದು ಮಧುರ ಮಾತುಗಳ ಕುಂಬಳೆ ಶ್ರೀಧರ್ ರಾವ್

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ: ಪತ್ರಿಕೆ ವಿತರಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.