ಶೃಂಗೇರಿ ಶ್ರೀಗಳ ದಿವ್ಯ ಸಪ್ತತಿಪೂರ್ತಿ ಸಮಾರಂಭ
Team Udayavani, Apr 19, 2021, 6:50 PM IST
ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ದಿವ್ಯ ಸಪ್ತತಿಪೂರ್ತಿ ಸಮಾರಂಭವನ್ನು ಶ್ರೀಮಠದಲ್ಲಿ ಭಾನುವಾರ ಸರಳವಾಗಿ ಆಚರಿಸಲಾಗಿದೆ.
ವರ್ಧಂತಿ ಅಂಗವಾಗಿ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಬೆಳಗ್ಗೆ ಗುರುಭವನದಲ್ಲಿ ಶ್ರೀಚಕ್ರ ಪೂಜೆ ನೆರವೇರಿಸಿ, ನಂತರ ಅ ಷ್ಠಾನ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಶ್ರೀ ಶಾರದಾಂಬಾ ಸನ್ನಿ ಧಿಗೆ ಆಗಮಿಸಿ ಶ್ರೀಮಠದ ಹೊರ ಆವರಣ ಮತ್ತು ಶ್ರೀ ಶಾರದಾಂಬಾ ದೇಗುಲದ ಒಳ ಪ್ರಾಂಗಣದ ಶ್ರೀ ಶಕ್ತಿಗಣಪತಿ ಹಾಗೂ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.
ಗುರುಭವನದಲ್ಲಿ ಆಯುಷ್ ಹೋಮ, ಮೃತ್ಯುಂಜಯ ಹೋಮ ಹಾಗೂ ರಾತ್ರಿ ಗುರುಭವನದಲ್ಲಿ ಶ್ರೀ ಚಂದ್ರಮೌಳೇಶ್ವರ ಪೂಜೆ ನಡೆಯಿತು. ಜಗದ್ಗುರುಗಳ ವರ್ಧಂತಿ ಅಂಗವಾಗಿ ಶ್ರೀಮಠದ ಗುರುಭವನದ ಸಮೀಪ ನಿರ್ಮಿಸಲಾಗಿರುವ ಪೆಂಡಾಲ್ ನಲ್ಲಿ ಆಯುತ ಚಂಡಿಕಾ ಯಾಗ, ಅತಿರುದ್ರ ಮಹಾಯಾಗ ಹಾಗೂ ಶ್ರೀಮಠದಲ್ಲಿ ಕೋಟಿ ಕುಂಕುಮಾರ್ಚನೆ ನಡೆಯುತ್ತಿದೆ. ಇದರೊಂದಿಗೆ ಶ್ರೀ ಭಾರತೀತೀರ್ಥ ಪುರಸ್ಕಾರ 70 ಪಂಡಿತರಿಗೆ ಸೋಮವಾರ ನೀಡಲು ನಿರ್ಧರಿಸಲಾಗಿತ್ತು. ಇದೀಗ ಸೋಮವಾರದಿಂದ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ. ವರ್ಧಂತಿ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಶಾಸಕ ಡಿ.ಎನ್. ಜೀವರಾಜ್ ಜಗದ್ಗುರುಗಳ ದರ್ಶನ ಪಡೆದರು.
ಶ್ರೀಮಠದ ಗುರುಭವನದ ಸಮೀಪ ನಡೆಯುತ್ತಿರುವ ಆಯುತಚಂಡಿಕಾ ಯಾಗ ಮತ್ತು ಅತಿರುದ್ರಮಹಾಯಾಗ ಮುಂದುವರಿದಿದ್ದು,ಯಾಗ ಶಾಲೆಗೆ ಪ್ರವೇಶ ನಿರ್ಬಂಧಿ ಸಲಾಗಿದೆ. ಏ.27 ರವರೆಗೂ ವರ್ಧಂತಿ ಕಾರ್ಯಕ್ರಮದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಶ್ರೀಮಠಕ್ಕೆ ಭಕ್ತರ ಪ್ರವೇಶಕ್ಕೆ ಕೋವಿಡ್ ನಿಯಮದಂತೆ ನಿಗದಿತ ಭಕ್ತರನ್ನು ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಜಿಲ್ಲಾ ಧಿಕಾರಿ ರಮೇಶ್, ಉಪ ವಿಭಾಗಾ ಧಿಕಾರಿ ನಾಗರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
Chikkamagaluru: ರೋಬೋಟಿಕ್ ಆನೆಯನ್ನು ಅರಣ್ಯ ಇಲಾಖೆಗೆ ಕೊಡುಗೆ ನೀಡಿದ ಬಾಲಿವುಡ್ ನಟಿ
Mundugaru:ನಕ್ಸಲ್ ಪೀಡಿತ ಪ್ರದೇಶದಲ್ಲಿ ಪೇಜಾವರ ಶ್ರೀಗಳ ಸಂಚಾರ; ಕಾಡಿನಲ್ಲಿ ರಾಮಮಂತ್ರ ಘೋಷ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.