Chikmagalur; ‘ನಾನು ಕರಸೇವಕ, ನನ್ನನ್ನೂ ಬಂಧಿಸಿ..’: ಪೊಲೀಸ್ ಠಾಣೆ ಎದುರು ಸಿ.ಟಿ ರವಿ ಧರಣಿ
Team Udayavani, Jan 4, 2024, 12:03 PM IST
ಚಿಕ್ಕಮಗಳೂರು: ನಾನು ಕರಸೇವಕ ನನ್ನನ್ನು ಬಂಧಿಸುವಂತೆ ಆಗ್ರಹಿಸಿ ಮಾಜಿ ಸಚಿವ ಸಿ.ಟಿ.ರವಿ ಗುರುವಾರ ಚಿಕ್ಕಮಗಳೂರು ನಗರ ಠಾಣೆಗೆ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿ ಆಗ್ರಹಿಸಿದರು.
ಕಾರ್ಯಕರ್ತರೊಂದಿಗೆ ಆಗಮಿಸಿದ ಅವರು ಪೊಲೀಸ್ ಠಾಣೆ ಮುಂಭಾಗ ನಾನು ಕ್ರಿ.ಶ.1992 ಡಿ.6ರ ಅಯೋಧ್ಯೆ ಶ್ರೀರಾಮ ಮಂದಿರದ ಕರಸೇವಕ ನನ್ನನ್ನೂ ಬಂಧಿಸಿ ಎಂಬ ಬಿತ್ತಿಪತ್ರವನ್ನು ಕೈಯಲ್ಲಿ ಹಿಡಿದು ನಗರ ಪೊಲೀಸ್ ಠಾಣೆ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಕಾರ್ಯಕರ್ತರು ಇದ್ದು ಸಿ.ಟಿ.ರವಿ ಅವರ ಪ್ರತಿಭಟನೆಗೆ ಸಾಥ್ ನೀಡಿದರು. ಈ ವೇಳೆ ರಾಮನ ಭಜನೆ ಜಪಿಸಿದರು. ಜೈ ಶ್ರೀರಾಮ್ ಘೋಷಣೆಗಳನ್ನು ಮೊಳಗಿಸಿದರು.
ಹುಬ್ಬಳಿಯಲ್ಲಿ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿದ್ದು, ನಾನು ಕರಸೇವೆಯಲ್ಲಿ ಪಾಲ್ಗೊಂಡಿದ್ದೆ ನನ್ನನ್ನೂ ಬಂಧಿಸುವಂತೆ ಆಗ್ರಹಿಸಿದರು.
ಈ ವೇಳೆ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಹೆಚ್ಚುವರಿ ಎಸ್ಪಿ ಕೃಷ್ಣ ಮೂರ್ತಿ ಸಿ.ಟಿ.ರವಿ ಅವರನ್ನು ಪೋಲಿಸ್ ಠಾಣೆ ಒಳಗೆ ಕರೆದುಕೊಂಡು ಹೋದ ರು. ಈ ವೇಳೆ ಬಿಜೆಪಿ ಕಾರ್ಯಕ ರ್ತರು ನಾವು ಕರಸೇವಕರು ನಮ್ಮನ್ನು ಬಂಧಿಸಿ ಎಂದು ಠಾಣೆಗೆ ಮುತ್ತಿಗೆ ಹಾಕಲು ಮುಂದಾದರು.
ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು. ನಂತರ ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್ ಠಾಣೆ ಆವರಣದಿಂದ ಹೊರಗೆ ಕಳಿಸಿದರು.
ನಂತರ ಗೃಹ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದರು.
ಒಂದು ಕಾಲದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಖಂಡ ಭಾರತದ ಭಾಗವಾಗಿತ್ತು. ಅಲ್ಲಿ ನೂರಾರು ಹಿಂದೂಗಳು ಇದ್ದರು. ಗಾಂಧಾರಿಯ ತವರು ಮನೆ ಅಫ್ಘಾನಿಸ್ತಾನ ಭಾರತದಲ್ಲಿ ಹಿಂದೂಗಳು ಕಡಿಮೆ ಆದಾಗ ಮೊಘಲ್ ಸ್ಥಾನ ಅಥವಾ ಪಾಕಿಸ್ತಾನ ಆಗುತ್ತದೆ. ಹಿಂದೂಗಳನ್ನು ದುರ್ಬಲಗೊಳಿಸುವುದು ಕಾಂಗ್ರೆಸ್ ನೀತಿ, ಪಾಕಿಸ್ತಾನದ ನಿರ್ಮಾಣಕ್ಕೆ ಕಾರಣವಾಗಿತ್ತದೆ. ಹಿಂದೂಗಳನ್ನು ಒಡೆದಾಳುವ ನೀತಿ ಅಫ್ಘಾನಿಸ್ತಾನ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದರು.
ಹಿಂದೂಗಳು ಒಗ್ಗಟ್ಟಾಗಿದ್ದರೆ ಪಾಕಿಸ್ತಾನ ಎನ್ನುವ ವಿಚಾರವೇ ತಲೆ ಎತ್ತುತ್ತಿರಲಿಲ್ಲ. ಕಾಂಗ್ರೆಸ್ ನದ್ದು ಎಸ್ ಡಿಪಿಐ, ಪಿಎಫ್ಐ ಬೆಂಬಲಿಸುವ ನೀತಿ, ನೀವು ಮತ್ತು ನಿಮ್ಮ ಮಕ್ಕಳು ಸುರಕ್ಷಿತವಾಗಿರವೇಕಾದರೇ ಕಾಂಗ್ರೆಸ್ ಕೆಟ್ಟ ನೀತಿ ಮಾಡಬಾರದು, ಹಿಂದೂ ಬಹುಸಂಖ್ಯಾತನಾಗಿದ್ದರೇ ಭಾರತ ಸಂವಿಧಾನ ಉಳಿಯುತ್ತದೆ. ಹಿಂದೂ ಅಲ್ಪ ಸಂಖ್ಯಾತನಾದರೇ ಭಾರತ, ಸಂವಿಧಾನ ಉಳಿಯುವುದಿಲ್ಲ ಎಂದರು.
ಹಿಂದೂ ರಾಷ್ಟ್ರವಾದರೇ ಅಫ್ಘಾನಿಸ್ತಾನ ಆಗಲು ಜಾಗವೇ ಇರಲಿಲ್ಲ. ನಿಮ್ಮ ಮನಸ್ಸಿನಿಂದ ತಾಲಿಬಾನ್ ಚಿಂತನೆ ತೆಗೆದು ಹಾಕಿ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.