ಕಾಫಿ ಬೆಳೆಗಾರರ ನೆರವಿಗೆ ಧಾವಿಸಿ
Team Udayavani, May 2, 2020, 2:42 PM IST
ಚಿಕ್ಕಮಗಳೂರು: ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಡಿ.ಎಂ.ವಿಜಯ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಚಿಕ್ಕಮಗಳೂರು: ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತದಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಕಾಫಿ ಬೆಳೆಗಾರರ ನೆರವಿಗೆ ಬರಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಡಿ.ಎಂ.ವಿಜಯ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ಕಾಫಿ ಇಳವರಿ ಕುಂಠಿತ, 7-8 ವರ್ಷಗಳಿಂದ ಕಾಫಿ ಬೆಲೆಕುಸಿತ ಹಾಗೂ ಕಾಫಿ ಉಪಬೆಳೆಯಾದ ಕಾಳು ಮೆಣಸು ಬೆಲೆ ಕುಸಿತದಿಂದ ಬೆಳೆಗಾರರು ಕಾಫಿ ತೋಟ ನಿರ್ವಹಣೆ ಅಸಾಧ್ಯ ಎಂದರು. ಕಾಫಿ ಉದ್ಯಮ ಹೆಚ್ಚಿನ ಪ್ರಮಾಣದ ಕಾರ್ಮಿಕರನ್ನು ಅವಲಂಬಿಸಿದ್ದು, ಕಾರ್ಮಿಕರ ವೇತನ, ತೋಟ ನಿರ್ವಹಣೆ, ಬ್ಯಾಂಕ್‌ಸಾಲ ಎಲ್ಲಾ ಸಮಸ್ಯೆಯಿಂದ ಕಾಫಿ ಉದ್ಯಮ ನಿರ್ವಹಣೆ ಅಸಾಧ್ಯವಾಗಿದ್ದು, ಈಗ ಕೊರೊನಾ ಹೊಡೆತಕ್ಕೆ ಕಾಫಿ ಉದ್ಯಮವು ಸಿಲುಕಿದ್ದು ಉದ್ಯಮ ನಿರ್ವಹಣೆ ಮತಷ್ಟು ಕಷ್ಟವಾಗಿದೆ ಎಂದರು.
ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಅನೇಕ ಬಾರಿ ಕೇಂದ್ರ ಸರ್ಕಾರ ಮತ್ತು ವಾಣಿಜ್ಯ ಸಚಿವಾಲಯದ ಗಮನಕ್ಕೆ ತಂದರು ಸರ್ಕಾರ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದ ಅವರು, ಕಾಫಿ ಬೆಳೆಗಾರರು ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ತೀರಿಸಲು ಸಾಧ್ಯವಾಗದೆ ಕಾಫಿ ಬೆಳೆಯನ್ನೇ ಕೈಬಿಡುವ ಹಂತಕ್ಕೆ ಬಂದಿದ್ದಾರೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಕಾಫಿ ಉದ್ಯಮವನ್ನುಉಳಿಸುವುದರೊಂದಿಗೆ, ಬೆಳೆಗಾರರ ನೆರವಿಗೆ ಬರಬೇಕು. ಬೆಳೆಗಾರರ 10,500 ಕೋಟಿ ರೂ. ಬೆಳೆಗಾರರ ಸಾಲಮನ್ನಾ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್, ವಸ್ತಾರೆ ಹೋಬಳಿ ಕಾμ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್, ಒಕ್ಕೂಟದ ಪದಾಧಿ ಕಾರಿಗಳಾದ ಲವ, ಪ್ರಭು, ಸುರೇಂದ್ರ, ಪುಟ್ಟಣ್ಣ ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು
Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ
Threat letter: ಚಿಕ್ಕಮಗಳೂರು ಅಂಚೆ ಕಚೇರಿಯಿಂದ ಸಿ.ಟಿ.ರವಿಗೆ ಬೆದರಿಕೆಗೆ ಪತ್ರ ರವಾನೆ!
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
MUST WATCH
ಹೊಸ ಸೇರ್ಪಡೆ
UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ
Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು
Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್
Kaup: 9.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಬಸ್ ಕದ್ದೊಯ್ದ ಮಾಲಕರು
Puttur:ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣ:”ಬಿ’ ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.