ಚಿಕ್ಕಮಗಳೂರು: ಹೊಸ ಬೋರ್ ಕೊರೆಯುವಾಗ ಬತ್ತಿದ ಹಳೆ ಬೋರ್ ನಲ್ಲಿ ಚಿಮ್ಮಿದ ನೀರು
Team Udayavani, Dec 16, 2022, 11:52 AM IST
ಚಿಕ್ಕಮಗಳೂರು: ಸತತ ಬರಗಾಲದಿಂದಾಗಿ ಒಣಗಿದ್ದ ಕೊಳವೆ ಬಾವಿಯೊಂದರ ಪಕ್ಕದಲ್ಲಿ ಹೊಸ ಬೋರ್ ಕೊರೆಸುವಾಗ ಹಳೇ ಬೋರ್ ನಲ್ಲಿ ಮುಗಿಲೆತ್ತರಕ್ಕೆ ನೀರು ಚಿಮ್ಮಿರುವ ಆಶ್ಚರ್ಯಕರ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದೆ.
ನೀರು ಬತ್ತಿದ್ದ ಹಳೆ ಬೋರ್ ನಲ್ಲಿ ಇದ್ದಕ್ಕಿದ್ದಂತೆ ನೀರು ಚಿಮ್ಮುತ್ತಿರುವುದನ್ನು ಕಂಡ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಡೂರು ತಾಲ್ಲೂಕಿನ ಚಿಕ್ಕದೇವನೂರು ಗ್ರಾಮದ ಶೇಖರಪ್ಪ ಎಂಬುವವರ ಜಮೀನಿನಲ್ಲಿದ್ದ ಹಳೆಯ 150 ಅಡಿ ಆಳದ ಕೊಳವೆ ಬಾವಿಯು ಬಹಳ ವರ್ಷಗಳಿಂದ ಬರಗಾಲದಿಂದಾಗಿ ಬತ್ತಿ ಹೋಗಿತ್ತು. ಈ ವರ್ಷ ಸಮೃದ್ಧ ಮಳೆಯಾದ ಹಿನ್ನೆಲೆ ತೆಂಗಿನ ತೋಟ ಉಳಿಸಿಕೊಳ್ಳುವ ಸಲುವಾಗಿ ಹಳೆಯ ಕೊಳವೆ ಬಾವಿ ಪಕ್ಕ ಹೊಸದಾಗಿ ಮತ್ತೊಂದು ಕೊಳವೆ ಬಾವಿ ಕೊರೆಸಲು ಮುಂದಾದಾಗ ಕೇವಲ 50 ಅಡಿಗೆ ನೀರು ಕಾಣಿಸಿಕೊಂಡಿದೆ. ಹೊಸ ಬೋರ್ ಪಕ್ಕದಲ್ಲಿದ್ದ ಹಳೆಯ ಕೊಳವೆ ಬಾವಿಯಲ್ಲಿ ನೀರು ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದು ನೋಡುಗರಲ್ಲಿ ಆಶ್ಚರ್ಯ ಮೂಡಿದೆ.
ಇದರಿಂದಾಗಿ ಕೇವಲ 200 ಅಡಿ ಕೊರೆಯುವಷ್ಟರಲ್ಲಿ ಬೋರ್‍ವೆಲ್ ಲಾರಿಯವರು ಹರ ಸಾಹಸಪಟ್ಟಿದ್ದರು. ನೀರು ಬೋರ್‍ವೆಲ್ ಲಾರಿಗಿಂತ ಎತ್ತರಕ್ಕೆ ಚಿಮ್ಮುತ್ತಿದ್ದನ್ನು ಕಂಡು ಜಮೀನು ಮಾಲೀಕ ಶೇಖರಪ್ಪ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಬಂದು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನೀರಿನ ವೇಗ ಜಾಸ್ತಿ ಆದ ಕಾರಣ ಹಳೆ ಬೋರ್‌ವೆಲ್ ನ ಕೇಸಿಂಗ್ ಪೈಪ್‍ಗಳನ್ನು ಬಂದ್ ಮಾಡಿ ನಂತರ ಹೊಸ ಬೋರ್ ಕೊರೆದಿದ್ದಾರೆ. ಕಡೂರಿನಲ್ಲಿ ಸತತ ಬರಗಾಲದಿಂದಾಗಿ ತೋಟದಲ್ಲಿದ್ದ ಬೋರ್ ಗಳು ನೀರಿಲ್ಲದೆ ಬತ್ತಿದ್ದವು.
2-3 ವರ್ಷಗಳ ಹಿಂದೆ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಆದರೆ, ಕಳೆದ ಹಾಗೂ ಈ ವರ್ಷ ಅರಕೆರೆ ಹಾಗೂ ದೇವನೂರು ಕೆರೆ ತುಂಬಿರುವುದರಿಂದ ಕೇವಲ 50 ಅಡಿಗೆ ನೀರು ಸಿಗುತ್ತಿರುವುದರಿಂದ ರೈತರು ಕೂಡ ಖುಷಿಯಾಗಿದ್ದಾರೆ. ಹಳೆಯ ಕೊಳವೆ ಬಾವಿಯಲ್ಲಿ ಲಾರಿಗಿಂತಲೂ ಎತ್ತರಕ್ಕೆ ನೀರು ಚಿಮ್ಮುತ್ತಿದ್ದು, ಅದನ್ನು ನೋಡಲು ತೋಟಕ್ಕೆ ಜನಸಾಗರವೇ ಹರಿದು ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ
Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.