Shivamogga ಗಲಭೆ ಎಬ್ಬಿಸಿ ಮತ್ತೊಂದು ಪಾಕ್ ಮಾಡುವ ಸಂಚು: ಸಿ.ಟಿ.ರವಿ
Team Udayavani, Oct 2, 2023, 9:04 PM IST
ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ದುರದೃಷ್ಟಕರ. ಅಮಾಯಕರನ್ನು ಗುರಿಯಾಗಿಸಿ ಗಲಭೆ ಹುಟ್ಟು ಹಾಕುವ ಉದ್ದೇಶವಾಗಿದ್ದು, ಇದು ಪೂರ್ವ ನಿಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.
ಸೋಮವಾರ ವಿಡಿಯೋ ಹೇಳಿಕೆ ನೀಡಿರುವ ಅವರು, ಹಿಂದೂಗಳ ಮಾರಣಹೋಮ ನಡೆಸಿದ ವ್ಯಕ್ತಿಗಳ ಪ್ರತಿಕೃತಿ ನಿರ್ಮಾಣಕ್ಕೆ ಏಕೆ ಅವಕಾಶ ನೀಡಿದ್ದು ಎಂದು ಅಲ್ಲಿನ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಉತ್ತರಿಸಬೇಕು. ಇಲ್ಲಿ ನಡೆದಿದ್ದು ಈದ್-ಮಿಲಾದ್ ಮೆರವಣಿಗೆಯೋ ಅಥವಾ ಟಿಪ್ಪು ಜಯಂತಿ- ಔರಂಗಜೇಬ್ ಜಯಂತಿಯೋ ಗೊತ್ತಾಗಲಿಲ್ಲ. ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಲಕ್ಷಾಂತರ ಹಿಂದೂಗಳ ಮಾರಣಹೋಮ ನಡೆಸಿದವರು.
ಶಿವಮೊಗ್ಗ ಜಿಲ್ಲಾಡಳಿತದವರು ಅವರನ್ನು ವಿಜೃಂಭಿಸಲು ಏಕೆ ಬಿಟ್ಟರು. ಹಾಡಹಗಲೇ ಕೈಯಲ್ಲಿ ತಲ್ವಾರ್ ಹಿಡಿದು ಬೆದರಿಸುವ ಕೆಲಸ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ. ಜಿಹಾದಿ ಪೋಷಣೆ ಮಾಡುವ ಬರವಣಿಗೆಗಳನ್ನು ಹಾಕಿದ್ದಾರೆ. ಈ ಎಲ್ಲಾ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿತ್ತು. ತೆರವು ಮಾಡದಿದ್ದ ಕಾರಣದಿಂದ ಗಲಭೆ ನಡೆದಿರುವುದು ಸ್ಪಷ್ಟವಾಗಿದೆ. ಈ ಮೂಲಕ ಮತ್ತೊಂದು ಪಾಕಿಸ್ತಾನ ಮಾಡುವ ಸಂಚು ನಡೆಯುತ್ತಿದೆ. ಕೋಮು ಶಕ್ತಿಗಳನ್ನು ರಾಜಕೀಯ ದಾಳಕ್ಕೆ ಬಳಕೆ ಮಾಡಿ ಮತ್ತೂಮ್ಮೆ ವಿಭಜನೆ ಮಾಡುವ ಭಯ ನಮ್ಮನ್ನು ಕಾಡುತ್ತಿದೆ. ದೇಶದ್ರೋಹಿ ಕೋಮುಶಕ್ತಿಗಳ ವಿರುದ್ಧ ನಾವೆಲ್ಲ ಒಂದಾಗಿ ನಿಲ್ಲಬೇಕಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
MUST WATCH
ಹೊಸ ಸೇರ್ಪಡೆ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.