ಶಿಕ್ಷಣ ಕ್ಷೇತ್ರಕ್ಕೂ ಕೋವಿಡ್ ಮಂಕು!
Team Udayavani, May 22, 2021, 11:04 AM IST
ಚಿಕ್ಕಮಗಳೂರು: ಲವಲವಿಕೆಯಿಂದ ಇದ್ದ ಎಲ್ಲಾ ಕ್ಷೇತ್ರಗಳನ್ನು ಕೋವಿಡ್ ಮಹಾಮಾರಿ ನುಂಗಿ ಹಾಕಿದೆ. ಲಕ್ಷಾಂತರ ರೂ. ಬಂಡವಾಳ ಹಾಕಿ ಕೈ ಸುಟ್ಟುಕೊಂಡಿದ್ದಾರೆ. ಸಣ್ಣ ವ್ಯಾಪಾರಸ್ಥರ ಬದುಕು ಬೀದಿ ಪಾಲಾಗಿದೆ. ಜೊತೆಗೆಇಡೀ ಶಿಕ್ಷಣ ಕ್ಷೇತ್ರವೇ ಮಂಕಾಗಿದ್ದು ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.
ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಪ್ರೌಢಶಿಕ್ಷಣ ಅತ್ಯಂತ ಮಹತ್ವಘಟ್ಟ. ಈ ಹಂತದಲ್ಲಿ ಉತ್ತಮ ಸಾಧನೆ ಮಾಡಿದಲ್ಲಿ ಮುಂದೆ ಉತ್ತಮ ಶಿಕ್ಷಣ ಪಡೆದುಕೊಳ್ಳಲು ಸಾಧ್ಯ. ಆದರೆ, ಈ ಕೋವಿಡ್ ಮಕ್ಕಳ ಬೌದ್ಧಿಕ ಮಟ್ಟವನ್ನೇ ಹಾಳು ಮಾಡುತ್ತಿದೆ. ಸರ್ಕಾರ ಸದ್ಯ 1ನೇ ತರಗತಿಯಿಂದ 9ನೇತರಗತಿ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ತೇರ್ಗಡೆಗೊಳಿಸಿದೆ.
ಜಿಲ್ಲೆಯಲ್ಲಿ ಕಳೆದ ಬಾರಿ 8ನೇತರಗತಿ ತೇರ್ಗಡೆಗೊಂಡು 9ನೇ ತರಗತಿಗೆ ಬಂದ13,500 ವಿದ್ಯಾರ್ಥಿಗಳಿದ್ದಾರೆ. ಈ ಬಾರಿ 14,080 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಕಳೆದಎರಡು ವರ್ಷದಿಂದ ಸರಿಯಾದ ಶಿಕ್ಷಣ ಸಿಗದೆ ಕೇವಲ ಆನ್‌ಲೈನ್ ಶಿಕ್ಷಣದ ಮೂಲಕವೇ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಅನಿವಾರ್ಯತೆ ಎದುರಾಗಿದೆ.
ಮಕ್ಕಳಿಗೆ ಬೌದ್ಧಿಕ ತರಗತಿಗಳಿಗಿಂತ ಆನ್‌ಲೈನ್ ಶಿಕ್ಷಣ ಅವರ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವುದಿಲ್ಲ, ಅವರಅಂತರಂಗದಲ್ಲಿ ಸುಪ್ತವಾಗಿರುವ ಪ್ರತಿಭೆಯೂ ಆನ್‌ಲೈನ್ ಶಿಕ್ಷಣದಿಂದ ಕಮರಿ ಹೋಗುತ್ತಿದೆ. ಕಲಿಕೆಯಿಂದಹಿಂದುಳಿದ ವಿದ್ಯಾರ್ಥಿಗಳನ್ನು ಈ ಆನ್‌ಲೈನ್ ಶಿಕ್ಷಣದಲ್ಲಿಗುರುತಿಸಿ ಅವರ ಬೌದ್ಧಿಕ ಮಟ್ಟಕ್ಕೆ ತಕ್ಕಂತೆ ಪಾಠ- ಪ್ರವಚನ ಮಾಡಲು ಸಾಧ್ಯವಿಲ್ಲ. ಈಗಾಗಲೇ ಒಂದು ವರ್ಷ ಆನ್‌ಲೈನ್‌ನಲ್ಲೇ ಮಕ್ಕಳ ಶಿಕ್ಷಣ ಪೂರೈಸಿದ್ದು,ಎರಡನೇ ವರ್ಷವು ಕೋವಿಡ್‌ನಿಂದ ಮಕ್ಕಳು ಆನ್‌ಲೈನ್ ಶಿಕ್ಷಣಕ್ಕೆ ಮೊರೆ ಹೋಗಬೇಕಾಗಿದೆ. ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಬೌದ್ಧಿಕ ಮಟ್ಟ ಕುಸಿತದಿಂದ ಮುಂದೆ ಉನ್ನತ ಶಿಕ್ಷಣದ ಮೇಲೆ ಬಾರೀ ಪರಿಣಾಮ ಬೀರುವ ಆತಂಕವನ್ನು ಪೋಷಕರಲ್ಲಿ ಮೂಡಿಸಿದೆ.
ಪ್ರೌಢಶಿಕ್ಷಣಕ್ಕೆ ಹಾಜರಾಗಿರುವ ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರ ಆನ್‌ಲೈನ್ ಶಿಕ್ಷಣ,ವಿದ್ಯಾಗಮ ಹೀಗೆ ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದ್ದರೂ ಅದು ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಪರಿಣಾಮಕಾರಿ ಆಗಿಲ್ಲ ಎಂಬುದು ಕೆಲ ಶಿಕ್ಷಕರ ಅಭಿಪ್ರಾಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ, ಮೊಬೈಲ್ ಇಲ್ಲದ ಪರಿಣಾಮ ಆನ್ ಲೈನ್ ಶಿಕ್ಷಣದಿಂದಲೂ ಮಕ್ಕಳು ವಂಚಿತರಾಗಿದ್ದಾರೆ.ಇದು ಅವರ ಮುಂದಿನ ಭವಿಷ್ಯಕ್ಕೆ ಮಾರಕವಾಗುವ ಸಾಧ್ಯತೆಗಳು ಹೆಚ್ಚಿದೆ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ಕೋವಿಡ್ ಮಹಾಮಾರಿಶಿಕ್ಷಣ ಕ್ಷೇತ್ರವನ್ನು ತಲ್ಲಣಗೊಳಿಸಿ ಮಕ್ಕಳ ಭವಿಷ್ಯದಮೇಲೆ ಕರಿನೆರಳು ಬೀರಿದ್ದು ಕೋವಿಡ್ ನಡುವೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಿರುವುದು ವಿದ್ಯಾರ್ಥಿಗಳಿಗೆದೊಡ್ಡ ಚಾಲೆಂಜ್ ಆಗಿದೆ. ಇದು ವಿದ್ಯಾರ್ಥಿಗಳ ಕಥೆಯಾದರೆ ಶಿಕ್ಷಕರದ್ದು ಮತ್ತೂಂದು ಕಥೆಯಾಗಿದೆ. ಸರ್ಕಾರಿ ಶಿಕ್ಷಕರ ಬದುಕಿನಲ್ಲಿ ಅಷ್ಟೊಂದು ಪರಿಣಾಮಬೀರದಿದ್ದರೂ ಖಾಸಗಿ ಶಾಲೆಯ ಶಿಕ್ಷಕರ ಬದುಕುದೇವರಿಗೆ ಪ್ರೀತಿ ಎನ್ನುವಂತಾಗಿದೆ. ಕೆಲವು ಶಾಲೆಗಳುಅಲ್ಪಸ್ವಲ್ಪ ಸಂಬಳ ನೀಡುತ್ತಿದ್ದರೆ, ಕೆಲವು ಶಾಲೆಗಳುಬಿಡಿಗಾಸು ನೀಡುತ್ತಿಲ್ಲ, ಕಳೆದೆರೆಡು ವರ್ಷಗಳಿಂದ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಸಂಸಾರನಿರ್ವಹಣೆ ಸಾಧ್ಯವಾಗದೆ ಏನು ಮಾಡಬೇಕೆಂಬ ಚಿಂತೆ ಕಾಡುತ್ತಿದೆ.
ಬೇರೆ ಉದ್ಯೋಗ ಗೊತ್ತಿಲ್ಲ, ಶಿಕ್ಷಕ ವೃತ್ತಿಯಲ್ಲಿ ಸಂಬಳ ಸಿಗುತ್ತಿಲ್ಲ. ಸಂಸಾರ ಸಾಗಿಸುವುದು ಹೇಗೆ ಎಂದು ಗೊತ್ತಾಗುತ್ತಿಲ್ಲ ಎಂದು ಖಾಸಗಿ ಶಾಲಾ ಶಿಕ್ಷಕ ರಘು ತಮ್ಮ ನೋವು ತೋಡಿಕೊಳ್ಳುತ್ತಾರೆ
ಮಕ್ಕಳ ಬೌದ್ಧಿಕಮಟ್ಟ ಕುಸಿಯುತ್ತಿದೆ. ಸರ್ಕಾರ ಆನ್‌ಲೈನ್ ಶಿಕ್ಷಣ ಸೇರಿದಂತೆ ಏನೆಲ್ಲಾ ಯೋಜನೆಗಳ ಮೂಲಕ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿದ್ದರೂ ತರಗತಿ ಶಿಕ್ಷಣದಷ್ಟುಪರಿಣಾಮಕಾರಿಯಾಗುತ್ತಿಲ್ಲ, ಜೀವನಕ್ಕಿಂತ ಜೀವ ಮುಖ್ಯ ಅನ್ನುವುದನ್ನು ಮನಗಂಡರೆ ಕೊರೊನಾ ಹಿನ್ನೆಲೆ ಇದು ಅನಿವಾರ್ಯ ಕೂಡ.-ಅನಿತಾ, ಶಿಕ್ಷಕಿ
ಮನೆಯಲ್ಲಿ ಆನ್‌ಲೈನ್ ಶಿಕ್ಷಣದಿಂದ ಪಾಠವನ್ನು ಮಾತ್ರ ಕಲಿಯಬಹುದು. ಆದರೆ, ತರಗತಿಯಲ್ಲಿ ಮನನವಾದಷ್ಟುಪರಿಣಾಮಕಾರಿಯಾಗಿ ಅರ್ಥವಾಗುವುದು ಕಷ್ಟ. ಎರಡು ವರ್ಷ ಪ್ರೌಢಶಿಕ್ಷಣ ಅಭ್ಯಾಸ ಮಾಡಿದ್ದೇವೆ ಎಂಬ ಅನುಭವವೇ ಆಗಲಿಲ್ಲ. ಮುಂದಿನ ಭವಿಷ್ಯದ ಬಗ್ಗೆ ದೊಡ್ಡ ಪ್ರಶ್ನೆಯೂ ಕಾಡುತ್ತಿದೆ.- ಚೈತ್ರಾ, ವಿದ್ಯಾರ್ಥಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.