ಚಿಕ್ಕಮಗಳೂರು: ಮೇ 24ರವರೆಗೆ ಕಂಪ್ಲೀಟ್ ಲಾಕ್; ಅಗತ್ಯ ವಸ್ತು ಕೊಳ್ಳಲು ಮುಗಿಬಿದ್ದ ಜನ
Team Udayavani, May 20, 2021, 9:35 AM IST
ಚಿಕ್ಕಮಗಳೂರು: ಕಾಫಿನಾಡಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದಿನಿಂದ( ಮೇ 20) ಮೇ 24ರವರೆಗೆ ಚಿಕ್ಕಮಗಳೂರು ಕಂಪ್ಲೀಟ್ ಬಂದ್ ಮಾಡಲಾಗಿದೆ.
ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶ ನೀಡಲಾಗಿದ್ದು, ಅದರೆ ನಗರದ ಮಾರುಕಟ್ಟೆ ರಸ್ತೆಯಲ್ಲಿ ಜನಜಂಗುಳಿ ಕಂಡು ಬಂದಿದೆ.
ತರಕಾರಿ, ಮೀನು-ಮಾಂಸ ಕೊಳ್ಳಲು ಜನರು ಮುಗಿಬಿದ್ದಿದ್ದು, ಖರೀದಿ ಭರಾಟೆಯಲ್ಲಿ ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ್ ಮಾಜಿ ಸಿಎಂ ಜಗನ್ನಾಥ್ ಪಹಾಡಿಯಾ ಕೋವಿಡ್ ನಿಂದ ನಿಧನ
ಇದನ್ನೂ ಓದಿ: ಜುಲೈ ಅಂತ್ಯಕ್ಕೆ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ; 6-8 ತಿಂಗಳಲ್ಲಿ ಮೂರನೇ ಅಲೆ
ರಾಜ್ಯದಲ್ಲಿ ಸತತ ಎರಡನೆ ದಿನವೂ ಹೊಸ ಪ್ರಕರಣಗಳಿಗಿಂತ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಮೇ.19ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ (ದಿನಾಂಕ :18.05.2021,00:00 ರಿಂದ 23.59 ರವರೆಗೆ) 49953 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ಅವಧಿಯಲ್ಲಿ 34281 ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಇನ್ನು 468 ಜನರು ಸೋಂಕಿನಿಂದ ಮೃತ ಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.