ಗೋ ಕಳವು:ಕಣ್ಮುಚ್ಚಿ ಕುಳಿತ ಆಡಳಿತ
Team Udayavani, Feb 18, 2019, 10:36 AM IST
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗೋಹತ್ಯೆ ಹಾಗೂ ಗೋವುಗಳ ಕಳ್ಳತನ ಹೆಚ್ಚಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಆರೋಪಿಸಿದರು.
ಭಾನುವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ಹಾಗೂ ಗೋವುಗಳ ಕಳ್ಳತನ ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವುದು ನಿಜ. ಯಾರು ಗೋಹತ್ಯೆ ಮಾಡುತ್ತಿದ್ದಾರೆ ಮತ್ತು ಗೋ ಕಳ್ಳತನ ಮಾಡುತ್ತಿದ್ದಾರೆ ಅವರಿಗೆ ಈಗ ಬಂದಿರುವ ಸರ್ಕಾರ ನಮ್ಮದು, ಶಾಸಕರು ನಮ್ಮವರು, ನಾವು ಏನು ಬೇಕಾದರೂ ಮಾಡಬಹುದು ಎಂಬ ಮನಃಸ್ಥಿತಿಗೆ ಬಂದಿರುವುದರಿಂದ ಮನೆ ಹಾಗೂ ದೇವಾಲಯದ ಸಮೀಪ, ಬಸ್ ನಿಲ್ದಾಣದ ಹತ್ತಿರವಿರುವ ಬೀಡಾಡಿ ಹಸುಗಳನ್ನು ಕದ್ದು, ಸಾಗಿಸುತ್ತಿರುವುದು ನೋಡುತ್ತಿದ್ದೇವೆ ಎಂದರು.
ತಾಲೂಕು ಆಡಳಿತದ ವಿರುದ್ಧ ಶೃಂಗೇರಿ ತಾಲೂಕು ಕಚೇರಿ ಎದರು ಪ್ರತಿಭಟನೆ ಮಾಡುತ್ತೇವೆಂದು ಪೊಲೀಸ್ ಇಲಾಖೆಯ ಅನುಮತಿ ಕೇಳಿದರೆ ತಾಲೂಕು ಕಚೇರಿಯಿಂದ ನೂರು ಮೀಟರ್ ದೂರದಲ್ಲಿ ಪ್ರತಿಭಟನೆ ಮಾಡುವಂತೆ ತಹಶೀಲ್ದಾರ್ ಹೇಳಿದ್ದಾರೆ ಎಂದು ಹಿಂಬರಹ ನೀಡುತ್ತಾರೆ.
ಪ್ರತಿಭಟನೆ ಹಮ್ಮಿಕೊಂಡಿರುವುದೇ ಶಾಸಕರು ಮತ್ತು ತಹಶೀಲ್ದಾರ್ ಲಂಚ ಪಡೆಯುತ್ತಿದ್ದಾರೆ ಎಂದು ಜನರು ಆರೋಪ ಮಾಡಿದ್ದರಿಂದ. ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಬೇಡಿ ಎಂದು ಹಿಂಬರಹ ನೀಡುತ್ತಾರೆ ಎಂದರೆ ಪಶ್ವಿಮ ಬಂಗಾಳದ ಪರಿಸ್ಥಿತಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರ ಹತ್ತಿರವಾಗಿದೆ ಎಂದು ಆರೋಪಿಸಿದರು.
ಗೋಕಳವು ಮಾಡುತ್ತಿರುವವರು ಮತ್ತು ಲಂಚದಲ್ಲಿ ತೊಡಗಿರುವವರು ಎಲ್ಲರೂ ಶಾಸಕರಿಗೆ ಹತ್ತಿರದವರು ಆಗಿರುವುದರಿಂದ ಈ ರೀತಿ ಘಟನೆ ನಡೆದಿದೆ. ಮೊನ್ನೆ ನಡೆದ ಘಟನೆಯಲ್ಲೂ ಬಹಳ ದೊಡ್ಡವರ ಪಾತ್ರ ಇರುವುದರಿಂದ ಪಾಪದ ಜನರ ಗೋವು ಕಳ್ಳತನ ಆಗಿದೆ. ಗೋ ಕಳ್ಳತನ
ಆಗಿದೆ ಎಂದು ದೂರು ನೀಡಿದವರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ.
ಈ ಎಲ್ಲದರ ವಿರುದ್ಧ ಫೆ.19ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪ್ರತಿಭಟನೆಗೆ ಪೊಲೀಸರು ಅನುಮತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಅನುಮತಿ ನೀಡುತ್ತೋ ಇಲ್ಲವೋ ನೋಡಬೇಕೆಂದರು.
ಮಂಗನ ಕಾಯಿಲೆ ತಾಲೂಕಿನಲ್ಲಿ ಇನ್ನೂ ತೀವ್ರತೆ ಪಡೆದುಕೊಂಡಿಲ್ಲ, ಸರ್ಕಾರ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಬೇಸಿಗೆ ಹೆಚ್ಚಾಗುವುದಿಂದ ಮಂಗನ ಕಾಯಿಲೆ ತಡೆಗೆ ಏನೇನು ಕ್ರಮ ಕೈಗೊಳ್ಳಬೇಕು ಆ ಕ್ರಮಗಳನ್ನು ತಗೆದುಕೊಳ್ಳುವಂತೆ ಒತ್ತಾಯಿಸಿದರು.
ಗೋವು ಕಳ್ಳತನ ಮಾಡುತ್ತಿರುವ ಸಿಸಿ ಕ್ಯಾಮೆರಾ ಫುಟೇಜ್‌ಗಳನ್ನು ತೆಗೆದುಕೊಂಡು ಹೋಗಿ ಪೊಲೀಸರಿಗೆ ಕೊಟ್ಟಾಗಲೂ ಯಾರು ಗೋ ಕಳ್ಳತನ ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳದ ಸ್ಥಿತಿ ನೋಡುತ್ತಿದ್ದೇವೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ಒಂದು ರೀತಿ ಪಶ್ಚಿಮ ಬಂಗಾಳದ ರೀತಿ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಯೋಗಿ ಆದಿತ್ಯನಾಥ್, ಶಿವರಾಜ್ ಚೌಹಾಣ್ ಅವರಿಗೆ ಇಳಿಯಲು ಹಾಗೂ ಕಾರ್ಯಕ್ರಮ ಮಾಡಲು ಅವಕಾಶ ಕೊಡದಿರುವುದು ನೋಡಿದ್ದೇವೆ. ಅದೇ ಸ್ಥಿತಿ ಶೃಂಗೇರಿ ಕ್ಷೇತ್ರದಲ್ಲಿಯೂ ನಿರ್ಮಾಣವಾಗಿದೆ ಎಂದು ಜೀವರಾಜ್ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.