ಭಾರತದಲ್ಲಿ ಇಸ್ಲಾಮಿಕ್ ರಾಜ್ಯ ಸ್ಥಾಪನೆ ಮಾಡುವುದೇ ಪಿಎಫ್ಐ ನ ಮೂಲ ಉದ್ದೇಶ : ಸಿ.ಟಿ.ರವಿ
Team Udayavani, Oct 4, 2022, 5:01 PM IST
ಚಿಕ್ಕಮಗಳೂರು : ಪಿಎಫ್ಐ ಕೇವಲ ನೆಪಕ್ಕಷ್ಟೇ ಆರ್ ಎಸ್ಎಸ್ ಅನ್ನು ಟಾರ್ಗೆಟ್ ಮಾಡುತ್ತಿದೆ ನಿಜವಾಗಿ ಅವರ ಉದ್ದೇಶ ಇರುವುದು ಭಾರತದಲ್ಲಿ ಇಸ್ಲಾಮಿಕ್ ರಾಜ್ಯವನ್ನ ಸ್ಥಾಪನೆ ಮಾಡೋದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಕಿಡಿ ಕಾರಿದ್ದಾರೆ.
ಬಂಟ್ವಾಳದಲ್ಲಿ ರಸ್ತೆ ಮೇಲೆ ಪಿಎಫ್ಐ ಬರಹಕ್ಕೆ ಪ್ರತಿಕ್ರಿಯಿಸಿದ ಅವರು ಪಿಎಫ್ಐ ಅವರ ಮೂಲನಂಬಿಕೆಗಳಲ್ಲೇ ಅಸಹಿಷ್ಣತೆ, ದೋಷವಿದೆ ಮತ್ತೊಂದು ಮತ, ಧರ್ಮ, ದೇವರನ್ನ ಒಪ್ಪದ ಮಾನಸಿಕತೆಯಿದೆ ಪ್ರತಿಯೊಬ್ಬರು ರಾಷ್ಟ್ರೀಯತೆಯನ್ನ ಮೈಗೂಡಿಸಿಕೊಳ್ಳುವ ಮೂಲಕ ಅವರನ್ನ ಎದುರಿಸಬೇಕು, ನಿಮ್ಮ ದುಷ್ಟತನದ ಮೂಲಕ ಭಾರತೀಯರನ್ನ ನಾಶ ಮಾಡಿದ ಕಾಲ ಹೋಯ್ತು ಈಗ ಅಂತಹ ಸಂದರ್ಭ ಬಂದರೆ ನಿಮ್ಮನ್ನ ನಾಶ ಮಾಡಿ ಭಾರತವನ್ನ ಉಳಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಪರೇಶ್ ಮೇಸ್ತಾ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೇಲ್ಮನವಿ, ಮರು ತನಿಖೆಗೆ ಪರೇಶ್ ಮೇಸ್ತಾ ಕುಟುಂಬ ಬಯಸಿದ್ರೆ ಅವರ ಜೊತೆ ನಾವು ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಗಣಪತಿ ಲೈವ್ ಸ್ಟೇಟ್ಮೆಂಟ್ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ರು ,ಲೈವ್ ಸ್ಪೇಟ್ಮೆಂಟನ್ನು ಡೆತ್ ಸ್ಟೇಟ್ಮೆಂಟ್ ಎಂದು ಪರಿಗಣನೆ ಮಾಡ್ತಾರೆ ಆದರೆ ಆ ಸ್ಟೇಟ್ಮೆಂಟ್ ಗೂ ಸಿಬಿಐ ಬಿ ರಿಪೋರ್ಟ್ ಕೊಟ್ಟಿದೆ, 55-60 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಪಕ್ಷದ ಬೇರು-ಬಾಹು ಎಲ್ಲೆಲ್ಲಿ ಇದೆಯೋ..? ಎಂದು ಕಿಡಿಕಾರಿದರು.
ಕಾಂಗ್ರೆಸ್ ನ ಪ್ರಭಾವ ವಲಯ ಎಲ್ಲೆಲ್ಲಿದೆಯೋ ಹೇಳಕ್ಕಾಗಲ್ಲ, ಅಷ್ಟನ್ನ ಹೇಳ್ತೀನಿ ಎಷ್ಟೋ ಪ್ರಕರಣಗಳು ರೀ ಓಪನ್ ಆಗಿ ಹತ್ತಾರು ವರ್ಷಗಳ ಬಳಿಕ ಶಿಕ್ಷೆಯಾಗಿದೆ ಸಿದ್ದರಾಮಯ್ಯ ವಕೀಲರು, ಇದೆಲ್ಲಾ ಅವರಿಗೆ ಗೊತ್ತಿದೆ ಎಂದು ಭಾವಿಸುತ್ತೇನೆ, ಸಿದ್ದರಾಮಯ್ಯ ತನ್ನೆಲ್ಲಾ ಪಾಪದಿಂದ ಮುಕ್ತನಾಗಿದ್ದೇನೆ ಎಂದು ಭಾವಿಸುವುದು ಬೇಡ, ಸುಳ್ಳನ್ನೇ ಮನೆದೇವರು ಮಾಡಿಕೊಂಡಿರುವವರಿಗೆ ಸುಳ್ಳಿನ ತಲೆ ಮೇಲೆ ಹೊಡೆದಂಗೆ ಹೇಳೋಕೆ ಬರುತ್ತೆ ಎಂದು ಗುಡುಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.