ಕೇರಳ ಟು ಮೂಡಿಗೆರೆ: 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು!
Team Udayavani, Jan 4, 2022, 2:37 PM IST
ಚಿಕ್ಕಮಗಳೂರು: ತನ್ನ 9ನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದ ಮಗಳು 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಘಟನೆ ಚಿಕ್ಕಮಗಳೂರಿನ ಮುದ್ರೆಮನೆ ಗ್ರಾಮದಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದ ಅಂಜಲಿ 9ನೇ ವಯಸ್ಸಲ್ಲಿ ನಾಪತ್ತೆಯಾಗಿದ್ದರು. ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಅಲ್ಲಿಯೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಬಳಿಕ ಕೇರಳದ ನೆಲ್ಲಮಣಿಯ ಸಾಜಿ ಎಂಬವರೊಂದಿಗೆ ವಿವಾಹವಾಗಿದ್ದರು.
ಇದನ್ನೂ ಓದಿ:ಕೃಷಿ ಸಾಧಕಿ ಸುಮಂಗಲಮ್ಮ; ಹೆಂಗಸರು ಟ್ರ್ಯಾಕ್ಟರ್ ಓಡಿಸುತ್ತಾರಾ?
ಕಳೆದ 3 ವರ್ಷದಿಂದ ಅಂಜಲಿ ಅವರು ಪತಿಯೊಂದಿಗೆ ಸೇರಿ ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದರು. ಮಂಗಳೂರಿನ ಫಿಶ್ ಮೋಣು, ಮುಸ್ತಾಫರ ಬಳಿ ಈ ಬಗ್ಗೆ ವಿಚಾರಿಸಿದ್ದರು.
ಮೂಡಿಗೆರೆ ಸುತ್ತಮುತ್ತ ಅಂಜಲಿ ತಾಯಿಗಾಗಿ ಹುಡಕಾಟ ನಡೆಸಲಾಗಿದ್ದು, ಕೊನೆಗೂ ಮೂಡಿಗೆರೆಯ ಮುದ್ರೆ ಮನೆಯಲ್ಲಿ ಅಂಜಲಿ ತಾಯಿ ಪತ್ತೆಯಾಗಿದ್ದರು. ಇಂದು 22 ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಅಂಜಲಿ ತಬ್ಬಿ ಕಣ್ಣೀರಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.