ಮೋಜಣಿ ಇಲಾಖೆ ಸಹಾಯಕ ನಿರ್ದೇಶಕ ವಜಾ
Team Udayavani, Aug 31, 2017, 2:29 PM IST
ಚಿಕ್ಕಮಗಳೂರು: ಜಿಲ್ಲೆಯ ಕೆಲಸದಿಂದ ಇಂದೇ ಭೂ ದಾಖಲೆ ಹಾಗೂ ಮೋಜಣಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಆದೇಶಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರೊಬ್ಬರು ಕಡೂರು ತಾಲೂಕಿನಲ್ಲಿರುವ ತಮ್ಮ ಜಮೀನಿನ ಸರ್ವೆ ವಿಚಾರಕ್ಕೆ ಸಂಬಂಧಿಸಿದ ಮನವಿ ಸಲ್ಲಿಸಿದರು. ಆಗ ಸಭೆಗೆ ಕಡೂರು ತಾಲೂಕು ಎಡಿಎಲ್ ಆರ್ ಬಾರದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಡಿಡಿಎಲ್‌ಆರ್ ಅವರನ್ನು ಪ್ರಶ್ನಿಸಿದರು. ಆಗ ಅವರು ಕಡೂರು ಎಡಿಎಲ್‌ಆರ್ ಅವರು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಪ್ರಭಾರವನ್ನೂ ಹೊಂದಿದ್ದು, ಇಂದು ಅಲ್ಲಿಗೆ ಕರ್ತವ್ಯಕ್ಕೆ ಹೋಗಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಮೊದಲು ನಮ್ಮ ಜಿಲ್ಲೆಯ ಕೆಲಸ. ಆಮೇಲೆ ಬೇರೆಯದು. ಇಲ್ಲಿಯೇ ಸಾಕಷ್ಟು ಸಮಸ್ಯೆ ಇದೆ. ಇಂದು ಸಭೆಗೆ ಬರುವಂತೆ ನೋಟಿಸ್
ಕೊಟ್ಟಿದ್ದರೂ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.
ದೂರವಾಣಿ ಮೂಲಕ ಕಡೂರು ಎಡಿಎಲ್‌ಆರ್ ವೀರೇಂದ್ರ ಅವರನ್ನು ಸಂಪರ್ಕಿಸಿದ ಜಿಲ್ಲಾಧಿಕಾರಿ ಸಭೆಗೆ ಬಾರದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು. ಆ ನಂತರ ಅವರು ಕಡೂರಿಗೆ ಪ್ರತಿನಿತ್ಯ ಅರಸೀಕೆರೆಯಿಂದ ಹೋಗಿ ಬಂದು ಮಾಡುತ್ತಿರುವುದನ್ನು ಅರಿತುಕೊಂಡರು. ಕೂಡಲೇ ಈತ ನಮ್ಮ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ಬೇಡ. ಇವರನ್ನು ಇಂದಿನಿಂದಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ. ಭೂ ದಾಖಲೆ ಹಾಗೂ ಮೋಜಣಿ ಇಲಾಖೆಯ ಆಯುಕ್ತರಿಗೆ ಈ ಬಗ್ಗೆ ಪತ್ರ ಬರೆಯಿರಿ. ಇವರು ತಮ್ಮ ಪ್ರವಾಸದ ಪಟ್ಟಿಯನ್ನೂ ನೀಡುತ್ತಿಲ್ಲ. ಕೇಂದ್ರ ಸ್ಥಾನದಲ್ಲಿ ವಾಸವಿಲ್ಲ. ಯಾವುದೇ ಕೆಲಸವನ್ನೂ ಸರಿಯಾಗಿ ಮಾಡುತ್ತಿಲ್ಲ ಎಂಬುದನ್ನು ವಿವರವಾಗಿ ತಿಳಿಸಿ ಇಲ್ಲಿಗೆ ಬೇರೆ ಅಧಿಕಾರಿಯನ್ನು ನೇಮಿಸುವಂತೆ ತಿಳಿಸಿ ಎಂದು ಆದೇಶಿಸಿದರು.
ದಯಾಮರಣ ಕೊಡಿ: ಬೆಳೆವಿಮೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ, ಕಚೇರಿಗೆ ಅಲೆಯುವುದು ತಪ್ಪಿಲ್ಲ. ಬೆಳೆ ವಿಮೆ ಕೊಡಿ ಇಲ್ಲವೆ ದಯಾಮರಣ ಕಲ್ಪಿಸಿ ಎಂದು ಬೀಕನಹಳ್ಳಿ ಗ್ರಾಮದ ರೈತರು ಮನವಿ ಮಾಡಿಕೊಂಡರು. ಬೆಳೆಸಾಲ ಬೇಕು ಸಿಗುತ್ತಿಲ್ಲ, ಬೆಳೆವಿಮೆಗೆ ಸಂಬಂಧಿಸಿದಂತೆ ಸಂಸದರು ಮತ್ತು ಶಾಸಕರ ಗಮನಕ್ಕೆ ತರಲಾಗಿದೆ ಪ್ರಯೋಜವಾಗಿಲ್ಲ, ಸರಿಯಾದ ಬೆಳೆ ಸಮೀಕ್ಷೆ ನಡೆಸಿಲ್ಲ, ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಸರಿಯಾದ ಅಂಕಿಅಂಶವನ್ನು ಸರ್ಕಾರಕ್ಕೆ ತಿಳಿಸಿಲ್ಲ ಎಂದು ಹೇಳಿದಾಗ, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಈಗಾಗಲೇ ನಡೆಸಿರುವ ರ್‍ಯಾಂಡಮ್ ಸರ್ವೆಯನ್ನು ಏಕೆ ಪರಿಶೀಲನೆ ನಡೆಸಿಲ್ಲ ಎಂದು ಪ್ರಶ್ನಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್, ಬೀಕನಹಳ್ಳಿಯಲ್ಲಿ ಆಲೂಗೆಡ್ಡೆ ಬೆಳೆಯಲಾಗಿದೆ. ಬೆಳೆಕಾಲಂನಲ್ಲಿ ನಮೂದಿಸಿಲ್ಲ ಮಳೆಯಿಲ್ಲದೆ ಬೆಳೆ ಸರಿಯಾಗಿ ಬಂದಿಲ್ಲ ಬೆಳೆ ವಿಫಲದ ಪ್ರಯೋಜನ ರೈತರಿಗೆ ಸಿಕ್ಕಿಲ್ಲ ಎಂದು ಹೇಳಿದರು.
ಕಳೆದ 30 ವರ್ಷದಿಂದ ಬೆಳೆವಿಮೆ ಕಟ್ಟಿದ್ದೀನಿ ಎರಡು ವರ್ಷದಿಂದ ವಿಮೆ ಕೈಗೆ ಸಿಗುತ್ತಿಲ್ಲ. ಕೆರೆಕಟ್ಟೆ ಒಣಗಿ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಕಸಬಾ ಹೋಬಳಿಗೆ ಬೆಳೆ ವಿಮೆ ಕಡ್ಡಾಯಗೊಳಿಸುವುದು ಸರಿಯಲ್ಲ. ನಾವು ಬೆಳೆವಿಮೆ ಕಟ್ಟುವುದಿಲ್ಲ. ಪಹಣಿಯಲ್ಲಿ ಎಸ್.ಶಿವಪ್ಪ ಎಂದಾಗಬೇಕಿದ್ದು, ಬಿ.ಶಿವಪ್ಪ ಎಂದಾಗಿದೆ. ಬಿ. ಅಕ್ಷರ ತೆಗೆಯಲು ಎಷ್ಟು ದಿನ ಬೇಕು ಎಂದು ಜಿಲ್ಲಾಧಿಕಾರಿಗಳನ್ನೆ ಪ್ರಶ್ನಿಸಿದರು.
ನರಿಗುಡ್ಡನಹಳ್ಳಿಯಲ್ಲಿ ಖಾಸಗಿ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಪಾತ್ರೆ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡಿ ಹಲವು ವರ್ಷಗಳಿಂದ ಜೀವನ ಸಾಗಿಸುತ್ತಿರುವ ಅಲೆಮಾರಿಗಳಿಗೆ ನಿವೇಶನ ನೀಡುವಂತೆ ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ತರೀಕೆರೆ ವೆಂಕಟೇಶ್ ಕೋರಿದರು. ಈ ಜನಾಂಗದ ಮಕ್ಕಳು ದಂಟರಮಕ್ಕಿ ಶಾಲೆಗೆ ಹೋಗುತ್ತಿದ್ದಾರೆ. ಮತ್ತೆ ಕೆಲವರ ಮಕ್ಕಳು ಅಂಗನವಾಡಿಗೆ ತೆರಳುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ 15 ಕುಟುಂಬಗಳು ಜೀವನ ನಡೆಸುತ್ತಿವೆ. ಇವರು ಎಳವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆಂದು ಮಾಹಿತಿ ನೀಡಿದರು.
ನಿವೇಶನ ಪಡೆದುಕೊಂಡಮೇಲೆ ಸಾವಿರಾರು ರೂ. ಗಳಿಗೆ ಮಾರಾಟ ಮಾಡಿ ಹೋಗಬೇಡಿ ಎಂದು ಸಲಹೆ ನೀಡಿದ ಜಿಲ್ಲಾಧಿಕಾರಿಗಳು ಮಲ್ಲೇದೇವಿಹಳ್ಳಿಯಲ್ಲಿ ಗ್ರಾಮಠಾಣಾ ಜಾಗ ಗುರುತಿಸಿ ಫಲಾನುಭವಿಗಳ ಪಟ್ಟಿ ತಯಾರಿಸಿಕೊಂಡು ಬರುವಂತೆ ರಾಜಸ್ವ ನಿರೀಕ್ಷ
ಸತ್ಯನಾರಾಯಣ ಅವರಿಗೆ ಸೂಚಿಸಿದರು.
50 ಜನರಿಗೆ ಮಾಸಾಶನವಿಲ್ಲ: ಅಂಗವಿಕಲ ಮತ್ತು ಸಂಧ್ಯಾ ಸುರಕ್ಷೆ ಯೋಜನೆಯಡಿ ಮಾಸಾಸನ ನೀಡುವಂತೆ ಆವತಿಯ ದಂಪತಿ ಬಿಳಿಗಮ್ಮ ಮತ್ತು
ಬಸಪ್ಪಶೆಟ್ಟಿ ಜಿಲ್ಲಾಧಿಕಾರಿಗಳನ್ನು ಕೋರಿದರು. ಜಿಲ್ಲಾ ಖಜಾನೆಯ ಸಹಾಯಕ ಖಜಾನಾಧಿಕಾರಿ ಮೋಹನ್ ದಾಸ್ ಮಾತನಾಡಿ, ಚಿಕ್ಕಮಗಳೂರು ತಾಲೂಕಿನ 50 ಜನರಿಗೆ ಜನವರಿ ತಿಂಗಳಿನಿಂದ ವಿವಿಧ ಮಾಸಾಶನಗಳು ಬರುತ್ತಿಲ್ಲ ಎಂಬ ಉತ್ತರ ನೀಡಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಈ ಕುರಿತು ತಮ್ಮ ಅಥವಾ ಅಪರ ಜಿಲ್ಲಾಧಿಕಾರಿಯ ಗಮನಕ್ಕೆ ತಾರದಿರುವ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಆಗಿರುವ ಸಮಸ್ಯೆ ಏನೆಂಬುದನ್ನು ತಮ್ಮ ಗಮನಕ್ಕೆ ತರುವಂತೆ ಸೂಚಿಸಿದರು.
ನಿವೇಶನ ನೀಡುವುದಾಗಿ ಸಾವಿರಾರು ರೂಪಾಯಿ ಹಣಪಡೆದು ಸ್ಥಳೀಯ ಪಕ್ಷವೊಂದರ ಮುಖಂಡರೊಬ್ಬರು ವಂಚಿಸಿದ್ದಾರೆ. ಹಣ ಮರಳಿ ನೀಡುವಂತೆ ಕೇಳಿದರೆ ಗಲಾಟೆ ಮಾಡುತ್ತಾರೆಂದು ಇಂದಾವರ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ತಿಳಿಸಿದರು. ಹಣ ನೀಡದಿದ್ದರೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗೆ ದೂರು ನೀಡುವಂತೆ ಸಲಹೆ ನೀಡಿದರು. ಅಪರ ಜಿಲ್ಲಾಧಿಕಾರಿ ವೈಶಾಲಿ, ಉಪವಿಭಾಗಾಧಿಕಾರಿ ಸಂಗಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.