ಚಿಕ್ಕಮಗಳೂರಲ್ಲಿ ಜೀಪು ಮಾರಾಟ ಜಾಲ ಪತ್ತೆ


Team Udayavani, Jul 31, 2017, 1:54 PM IST

31-CHIKKA-3.jpg

ಚಿಕ್ಕಮಗಳೂರು: ನಗರದಲ್ಲಿ ಜೀಪುಗಳ ಮಾರಾಟ ಜಾಲವೊಂದು ಕಾರ್ಯನಿರ್ವಹಿಸುತ್ತಿದ್ದು, ಮಾಲೀಕರಿಂದ ಜೀಪುಗಳನ್ನು ಖರೀದಿಸಿ ಅವುಗಳ ಚಾರ್ಸಿ ಮತ್ತು ಇಂಜಿನ್‌ಗಳನ್ನು ಬೇರೆ ವಾಹನಗಳಿಗೆ ಅಳವಡಿಸಿ ಅವುಗಳ ಸಂಖ್ಯೆಯನ್ನು ಬದಲಿಸಲಾಗುತ್ತಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿ 4 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಇಂಜಿನ್‌ ಮತ್ತು ಚಾರ್ಸಿ ನಂಬರ್‌ ಬದಲಾಯಿಸಿ ನಕಲಿ ದಾಖಲೆ ಸೃಷ್ಟಿಸಿ, ಹಲವಾರು ವಾಹನಗಳನ್ನು ಮಾರಾಟ ಮಾಡಲಾಗಿದೆ. ಇದಕ್ಕೆ ಸ್ಥಳೀಯ ಕೆಲವು ಗ್ಯಾರೇಜ್‌ಗಳ ಸಹಕಾರವೂ ಇರುವುದು ತನಿಖೆಯಲ್ಲಿ ತಿಳಿದುಬಂದಿದೆ. ನಗರದ 60 ಅಡಿ ರಸ್ತೆಯಲ್ಲಿ ಬಿಳಿಬಣ್ಣದ ಜೀಪ್‌ವೊಂದು ಪತ್ತೆಯಾಗಿದ್ದು, ಅದನ್ನು ಅತ್ತಿಗುಂಡಿ ವಾಸಿ ಮಕ್ಸೂದ್‌ ಬೇರೆ ಎಲ್ಲಿಂದಲೋ ತಂದು ಇಂಜಿನ್‌ ಮತ್ತು ಚಾರ್ಸಿಗಳನ್ನು ಬದಲಿಸಿ ಮಾರಾಟ ಮಾಡಲು ಪ್ರಯತ್ನಿಸಿದ ಪ್ರಕರಣದ ಮೂಲಕ ಈ ಸಂಗತಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಳಿಬಣ್ಣದ ಜೀಪೊಂದನ್ನು ಪರಿಶೀಲಿಸಲು ಪೊಲೀಸರು ಹೋದಾಗ ಆ ವ್ಯಕ್ತಿ ಅಲ್ಲಿಂದ ಹೋಗಲು ಪ್ರಯತ್ನಿಸಿದ್ದು, ತಕ್ಷಣ ಆತನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಮಕ್ಸೂದ್‌ ಅಹಮದ್‌ ಎಂದು ಜೀಪ್‌ ಮಾರುವ ಕೆಲಸ ಮಾಡುತ್ತಿದ್ದು, ಅತ್ತಿಗುಂಡಿ ವಾಸಿ ಎಂದು ತಿಳಿಸಿದ್ದಾನೆ. ಆ
ತಕ್ಷಣ ಪೊಲೀಸರು ಜೀಪನ್ನು ಪರಿಶೀಲಿಸಿದಾಗ ದಾಖಲೆಗಳು ಸಿಗದೆ ನೆಪಗಳನ್ನು ಹೇಳಿದ್ದು, ನಂತರ ಈ ಜೀಪನ್ನು ಎರಡು ತಿಂಗಳ ಹಿಂದೆ ಕಲುºರ್ಗಿಯ ಆಳಂದದ ಸುಶೀಲ್‌ಕುಮಾರ್‌ ಅವರಿಂದ ಖರೀದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆಯನ್ನು ತೀವ್ರಗೊಳಿಸಿದಾಗ ಮಹೀಂದ್ರ ಪಿಕಪ್‌ ವಾಹನದ ಚಾರ್ಸಿಯನ್ನು ಕಳವು ಮಾಡಿ ಈ ಜೀಪಿಗೆ ಜೋಡಿಸಲಾಗಿತ್ತು. ನಂತರ 1.30 ಲಕ್ಷ ರೂ. ನೀಡಿ, ಈ ವಾಹನ ಖರೀದಿಸಿ, ರಾಮನಹಳ್ಳಿಯ ಅಪ್ಸರ್‌ ಅವರ ಮೂಲಕ ರಿಪೇರಿ ಮಾಡಿಸಿ ಅಜ್ಜು ಅವರಿಂದ ನಂಬರ್‌ ಬದಲಾವಣೆ ಮಾಡಿಸಲಾಗಿದೆ ಎಂದು ತಿಳಿದುಬಂತೆಂದು ಪೊಲೀಸರು ವಿವರಿಸಿ, ಇದೇ ರೀತಿ ನಾಲ್ಕೈದು ವಾಹನಗಳನ್ನು ಮಾರಾಟ ಮಾಡಿರುವುದು ಪತ್ತೆಯಾಯಿತೆಂದು ಹೇಳಿದ್ದಾರೆ. 

ಈ ಪ್ರಕರಣವನ್ನು ದಾಖಲಿಸಿಕೊಂಡು ಮಕ್ಸೂದ್‌, ಅಹಮದ್‌, ಸುಶೀಲ್‌ಕುಮಾರ್‌, ಫೈರೋಜ್‌, ಕರುಅಣ್ಣ, ಅಪ್ಸರ್‌ ಮತ್ತು ಅಜ್ಜು ಅವರು ಆರೋಪಿಗಳೆಂದು ತೀರ್ಮಾನಿಸಿ ಅವರಲ್ಲಿ ಮಕ್ಸೂದ್‌, ಅಹಮದ್‌, ಅಪ್ಸರ್‌ ಮತ್ತು ಅಜ್ಜು ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?

19-naxalite

Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ

17-2

ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್‌ ಓಡಾಟ ಶಂಕೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.