ಅಭಿವೃದ್ಧಿ ಪೂರಕ ಬಜೆಟ್: ಸಿ.ಟಿ.ರವಿ
Team Udayavani, Feb 2, 2019, 8:03 AM IST
ಚಿಕ್ಕಮಗಳೂರು: ಎಲ್ಲ ವರ್ಗದವರು ಸಮತೋಲನದಲ್ಲಿರುವ ರೀತಿಯಲ್ಲಿ ಕೇಂದ್ರದ ಬಜೆಟ್ ಮಂಡಿಸಲಾಗಿದ್ದು, ಬಜೆಟ್‌ನಲ್ಲಿ ಮಂಡಿಸಿರುವ ಎಲ್ಲ ಜನಪರ ಅಂಶಗಳೂ ಅಭಿವೃದ್ಧಿಗೆ ಪೂರಕವಾಗಿ ದೇಶವನ್ನು ಮತ್ತಷ್ಟು ಬಲಶಾಲಿಯನ್ನಾಗಿಸಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ಈ ಬಾರಿಯ ಬಹು ನಿರೀಕ್ಷಿತ 2019-20ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈತರು, ಸೈನಿಕರು, ಮದ್ಯಮ ವರ್ಗ, ತೆರಿಗೆ ಪಾವತಿದಾರರು ಎಲ್ಲ ವರ್ಗದವರು ಸಮತೋಲನಲ್ಲಿರುವಂತೆ ಬಜೆಟ್ ಮಂಡಿಸಲಾಗಿದೆ. ರೈತರ ಕಾಳಜಿ ಗಮನದಲ್ಲಿಟ್ಟುಕೊಂಡು ಸಣ್ಣ ಸಣ್ಣ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಎರಡು ಹೆಕ್ಟೆರ್‌ಗಿಂತಲೂ ಕಡಿಮೆ ಭೂಮಿ ಇರುವ ರೈತರಿಗೆ ವಾರ್ಷಿಕ ಆರು ಸಾವಿರ ರೂ.ಗಳನ್ನು ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ನೇರ ವರ್ಗಾವಣೆಯಾಗಲಿದೆ. ಅಸಂಘಂಟಿತ ವಲಯದಲ್ಲಿ ಕೆಲಸ ಮಾಡುವ ಜನರ ಕಲ್ಯಾಣಕ್ಕಾಗಿಯೇ ಪಿ.ಎಂ. ಶ್ರಮ ಯೋಗಿ ಮಂಡನ್ ಯೋಜನೆಯ ಮೂಲಕ 60 ವರ್ಷ ವಯಸ್ಸಿನ ನಂತರ ತಿಂಗಳಿಗೆ ಮೂರು ಸಾವಿರ ಪಿಂಚಣಿ ದೊರೆಯಲಿದೆ. ಉಜ್ವಲಾ ಯೋಜನೆಯಡಿಯಲ್ಲಿ 6.29 ಕೋಟಿ ಜನರಿಗೆ ಗ್ಯಾಸ್ ಸಿಲಿಂಡರ್ ವಿತರಣೆ, 34 ಕೋಟಿ ಜನಧನ ಖಾತೆ ತೆರೆದಿರುವುದು, ಆಯುಷ್ಮಾನ್ ಭಾರತ ಯೋಜನೆಯಡಿ 50 ಕೋಟಿ ಜನರಿಗೆ ಅನುಕೂಲವಾಗಿರುವುದು, ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚಿಸಿರೋದು ಉತ್ತಮ ಬೆಳವಣಿಗೆ ಎಂದರು.
ರಕ್ಷಣಾ ಇಲಾಖೆಗೆ 3 ಲಕ್ಷ ಕೋಟಿಗಳನ್ನು ಈ ಬಜೆಟ್‌ನಲ್ಲಿ ಘೋಷಿಸಿರುವುದು ಅಭಿನಂದನೀಯ. ಆದಾಯ ತೆರಿಗೆ ಮಿತಿ 5 ಲಕ್ಷಕ್ಕೆ ಏರಿಕೆ, 1.5 ಲಕ್ಷದವರೆಗೆ ಉಳಿತಾಯಕ್ಕೆ ತೆರಿಗೆ ವಿನಾಯಿತಿ, 2 ಲಕ್ಷ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ, 40 ಸಾವಿರದವರೆಗೆ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ, 2.4 ಲಕ್ಷದವರೆಗಿನ ಮನೆ ಬಾಡಿಗೆ ಮೇಲೆ ತೆರಿಗೆ ಇಲ್ಲ. ಈ ಮೂಲಕ ಸುಮಾರು 3 ಕೋಟಿ ಮಧ್ಯಮ ವರ್ಗದ ಕುಟುಂಬದವರಿಗೆ ಅನುಕೂಲವಾಗಲಿದೆ. ಇದೊಂದು ಅತ್ಯುತ್ತಮ ಬಜೆಟ್ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.