ಈರುಳ್ಳಿಗೆ ಮಜ್ಜಿಗೆ ರೋಗ ಬಾಧೆ: ಕಂಗಾಲಾದ ರೈತ
Team Udayavani, Aug 29, 2020, 8:33 PM IST
ಬೀರೂರು: ಸತತ 15 ದಿನಗಳಿಂದ ಮಳೆಯಿಲ್ಲದ ಕಾರಣ ಬೀರೂರು ಹೋಬಳಿ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ಇತ್ತೀಚೆಗೆ ಸುರಿದ ಮುಂಜಾನೆಯ ಕವಳ ಈರುಳ್ಳಿ ಬೆಳೆಗೆ ಮಜ್ಜಿಗೆ ರೋಗವನ್ನು ತಂದೊಡ್ಡಿದೆ. ಪಟ್ಟಣದ ಸಮೀಪದ ಎರೆ ಬಯಲಿನಲ್ಲಿ ಈ ರೋಗ ಕಂಡುಬಂದಿದ್ದು, ಬೆಳೆಯ ತೊಂಡೆ ಮುರಿದು ಬೀಳುತ್ತಿದೆ.
ತೊಂಡೆಗಳ ಮಧ್ಯ ಭಾಗದಲ್ಲಿ ಹುಳುಗಳು ಗೂಡು ಮಾಡಿಕೊಂಡಿದ್ದು, ಅವು ಗಡ್ಡೆಗಳ ಬೆಳೆವಣಿಗೆಯಲ್ಲಿ ಕುಂಠಿತ ಮಾಡುತ್ತಿವೆ ಹಾಗೂ ಇಳುವರಿ ಕೂಡ ಕಡಿಮೆಯಾಗುವ ಸಾಧ್ಯತೆಗಳಿವೆ.ರೈತ ಗಿರೀಶ್ ಈ ಬಗ್ಗೆ ಮಾತನಾಡಿ, ಪ್ರತಿ ವರ್ಷವೂ ಈ ರೋಗಗಳು ಈರುಳ್ಳಿ ಬೆಳೆಗೆ ಅಂಟುತ್ತಿರುತ್ತವೆ. ಉತ್ತರೆ ಮಳೆಯ ಸಂದರ್ಭದಲ್ಲಿ ಬೆಳೆಗೆ ಕವಳ ಆವರಿಸಿದಾಗ ಈ ಮಜ್ಜಿಗೆ ರೋಗ ಹರಡುತ್ತದೆ. ಕವಳ ಆವರಿಸಿದ ಕೆಲವೇ ಗಂಟೆಗಳಲ್ಲಿ ಈ ರೋಗ ತಗಲುತ್ತದೆ. ಈ ರೋಗಕ್ಕೆ 2 ರಿಂದ 3 ಸಾವಿರ ವೆಚ್ಚದ ಕೀಟ ನಾಶಕಗಳಾದ ರೆಡ್‌ಎಂಎಲ್, ಬ್ಲೂಕೊಪ್, ಕ್ರಕ್ಸ್, ಕರಾಟೆ ಎನ್ನುವ ವಿವಿಧ ಔಷಧಗಳ ಸಿಂಪಡಣೆಯಿಂದ ರೋಗ ನಿವಾರಣೆಯಾಗಿ ಗಡ್ಡೆಗಳ ಬೆಳವಣಿಗೆ ಆಗುತ್ತದೆ. ಹಾಗೂ ಕೀಟನಾಶಕಗಳ ನಾಶಕ್ಕೆ ಕರಾಟೆ, ಕ್ವಾರೆಜಿನ್ ಔಷಧಗಳನ್ನು ಸಿಂಪಡಿಸಿದ್ದೇವೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ತೋಟಗಾರಿಕಾ ಅಧಿಕಾರಿ ರಶೀದ್ ಮಾತನಾಡಿ, ಈರುಳ್ಳಿ ಬೆಳೆಗೆ ಅಂಟಿರುವ ರೋಗದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ರೈತರು ಈ ಬಗ್ಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.