ಇನ್ನೂ ಆರಂಭವಾಗದ ಪಡಿತರ ವಿತರಣೆ
Team Udayavani, Apr 3, 2020, 6:43 PM IST
ಸಾಂದರ್ಭಿಕ ಚಿತ್ರ
ಎನ್.ಆರ್. ಪುರ: ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಆಹಾರ ಕೊರತೆಯಾಗಬಾರದೆಂಬ ಕಾರಣಕ್ಕೆ ಸರ್ಕಾರದಿಂದ ಪಡಿತರದಾರರಿಗೆ ವಿತರಿಸಲು ಬೇಕಾಗಿರುವ ಅಕ್ಕಿ ಇದುವರೆಗೂ ಸರಬರಾಜಾಗದೆ ಇರುವುದರಿಂದ ತಾಲೂಕಿನ ವ್ಯಾಪ್ತಿಯಲ್ಲಿ ಪಡಿತರ ವಿತರಣೆ ಕಾರ್ಯ ಆರಂಭವಾಗಿಲ್ಲ.
ತಾಲೂಕು ಕೇಂದ್ರ ಹಾಗೂ 14 ಗ್ರಾಪಂ ಸೇರಿ ಒಟ್ಟು 31 ನ್ಯಾಯಬೆಲೆ ಅಂಗಡಿಗಳ ಮೂಲಕ ಸರ್ಕಾರದಿಂದ ಪಡಿತರ ವಿತರಿಸುವ ಕಾರ್ಯ ನಡೆಯುತ್ತಿದೆ. ಬಿಪಿಎಲ್ ಕಾರ್ಡ್ 12,345, ಅಂತ್ಯೋದಯ ಕಾರ್ಡ್ 2,054 ಒಟ್ಟು 14,399 ಕಾರ್ಡುಗಳಿವೆ. ಇದರಲ್ಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಪಿಎಲ್ ಫಲಾನುಭವಿಗಳು 34,864, ಪಟ್ಟಣ ವ್ಯಾಪ್ತಿಯಲ್ಲಿ 3,571, ಅಂತ್ಯೋದಯ ಫಲಾನುಭವಿಗಳು ಗ್ರಾಮೀಣ ಭಾಗದಲ್ಲಿ 9,168, ಪಟ್ಟಣ ವ್ಯಾಪ್ತಿಯಲ್ಲಿ 1,087 ಫಲಾನುಭವಿಗಳಿದ್ದಾರೆ.
ಸರ್ಕಾರ ಏ.1ರಿಂದಲೇ 2 ತಿಂಗಳ ಪಡಿತರ ಒಟ್ಟಿಗೆ ನೀಡುವುದಾಗಿ ತಿಳಿಸಿದ್ದರೂ ಸಹ ತಾಲೂಕಿಗೆ ಇದುವರೆಗೆ ಒಂದು ತಿಂಗಳ ಅಕ್ಕಿ ಮಾತ್ರ ಪೂರೈಕೆಯಾಗಿದೆ. ಒಂದು ತಿಂಗಳ ಅಕ್ಕಿ , ಎರಡು ತಿಂಗಳ ಗೋಧಿ ಪೂರೈಕೆಯಾಗದಿರುವುದರಿಂದ ಗೋದಾಮಿನಿಂದ ನ್ಯಾಯ ಬೆಲೆ ಅಂಗಡಿಯವರು ಎತ್ತುವಳಿ ಮಾಡಿಲ್ಲ. ಬೆರಳಚ್ಚು ಅಥವಾ ಒಟಿಪಿ ಮೂಲಕ ಪಡಿತರ ವಿತರಣೆ ಮಾಡಲು ಸೂಚಿಸಿದ್ದಾರೆ. ಒಂದು ವೇಳೆ ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ ಇಲ್ಲದಿದ್ದರೂ ಸಹ ಫಲಾನುಭವಿ ಹೊಸ ಮೊಬೈಲ್ ನಂಬರ್ ನೀಡಿದರೂ ಅದಕ್ಕೆ ಒಟಿಪಿ ಸೌಲಭ್ಯ ಲಭ್ಯವಾಗಲಿದೆ. ಅಕ್ಕಿ ಮತ್ತು ಗೋಧಿ ಗೋದಾಮಿಗೆ ಬಂದಿಲ್ಲ. ಹಾಗಾಗಿ ಪಡಿತರ ವಿತರಣೆ ಮಾಡಲು ಆರಂಭಿಸಿಲ್ಲ. ಗ್ರಾಮೀಣ ಭಾಗಕ್ಕೆ ಪಡಿತರ ತೆಗೆದುಕೊಂಡು ಹೋಗಲು ವಾಹನದ ಸೌಲಭ್ಯ ಇಲ್ಲವಾಗಿದೆ. ಪಡಿತರ ವಿತರಣೆಗೆ ನ್ಯಾಯಬೆಲೆ ಅಂಗಡಿಯಲ್ಲಿ ಸಿಬ್ಬಂದಿ ಕೊರತೆಯೂ ಇದೆ ಎಂದು ಸಹಕಾರ ಸಂಸ್ಥೆಯ ಸಿಬ್ಬಂದಿಯೊಬ್ಬರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.