ಬೆಳಕಿನ ಹಬ್ಬ ಆಚರಣೆಗೆ ಭರದ ಸಿದ್ಧತೆ
Team Udayavani, Nov 4, 2021, 6:33 PM IST
ಚಿಕ್ಕಮಗಳೂರು: ಬೆಳಕಿನ ಹಬ್ಬ ದೀಪಾವಳಿಆಚರಣೆಗೆ ಜಿಲ್ಲೆಯ ಜನತೆ ಸಕಲ ಸಿದ್ಧತೆಯಲ್ಲಿತೊಡಗಿದ್ದು, ಹಬ್ಬಕ್ಕೆ ಬೇಕಾಗುವ ಅಗತ್ಯ ವಸ್ತುಗಳಖರೀದಿಯಲ್ಲಿ ಮಗ್ನರಾಗಿದ್ದರು. ಜಿಲ್ಲಾದ್ಯಂತವ್ಯಾಪಾರ ವಹಿವಾಟು ಭಾರೀ ಜೋರಾಗಿದ್ದು, ಜನರಸಂಚಾರ ಹೆಚ್ಚಿನ ಪ್ರಮಾಣದಲ್ಲಿತ್ತು.ನರಕ ಚತುದರ್ಶಿ, ಅಮಾವಾಸ್ಯೆ ಹಾಗೂಶುಕ್ರವಾರದ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ಹಬ್ಬಕ್ಕೆಬೇಕಾದ ಹೂವು, ಹಣ್ಣು, ತರಕಾರಿ, ಬಾಳೆಕಂದು,ಮಾವಿನ ಸೊಪ್ಪು, ಪೂಜಾ ಸಾಮಗ್ರಿಗಳನ್ನುಖರೀದಿಸಿದರು.
ಚಿಕ್ಕಮಗಳೂರು ನಗರದಲ್ಲಿ ಬುಧವಾರ ಸಂತೆಯದಿನವಾಗಿದ್ದು, ಗ್ರಾ ಮೀಣ ಮತ್ತು ನಗರ ಪ್ರದೇಶದಜನರು ಒಮ್ಮೆಲೇ ಖರೀದಿಗೆ ಧಾವಿಸಿದ್ದರಿಂದನಗರದ ಸಂತೆ ಮಾರುಕಟ್ಟೆ, ಹೂವಿನ ಮಾರುಕಟ್ಟೆ,ಎಂ.ಜಿ.ರಸ್ತೆ, ಐ.ಜಿ.ರಸ್ತೆ ಹಾಗೂ ಮಾರ್ಕೆಟ್ ರಸ್ತೆಗಳಲ್ಲಿಜನಸಂಚಾರ ಎಂದಿಗಿಂತ ಜಾಸ್ತಿಯಾಗಿತ್ತು.ನಗರದ ಸಂತೆ ಮಾರುಕಟ್ಟೆ ಮತ್ತು ಹೂವಿನಮಾರುಕಟ್ಟೆ, ಹನುಮಂತಪ್ಪ ವೃತ್ತದಲ್ಲಿರುವ ಹೂವಿನಮಾರುಕಟ್ಟೆಗಳಲ್ಲಿ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಚೆಂಡು ಹೂವು ಮಾರಿಗೆ 30 ರಿಂದ 50ರೂ., ಸೇವಂತಿಗೆ ಮಾರಿಗೆ 50 ರೂ., ತುಳಸಿ ಹಾರಮಾರಿಗೆ 70 ರೂ., ಸುಗಂಧರಾಜ ಹಾರ 150ರಿಂದ 500, 1,000 ವರೆಗೂ ಮಾರಾಟ ಮಾಡಲಾಗುತ್ತಿತ್ತು. ಕಮಲ ಹೂವಿ ಒಂದಕ್ಕೆ 20 ರೂ. ನಂತೆಮಾರಾಟ ಮಾಡಲಾಗುತ್ತಿತ್ತು. ಮಾವಿನ ಎಲೆ ಕಟ್ಟಿಗೆ 20 ರೂ.ನಂತೆ ಮಾರಾಟಮಾಡುತ್ತಿದ್ದರೆ, ಬಾಳೆಕಂದು ಜೊತೆಗೆ 30 ರೂ.ನಂತೆಮಾರಾಟ ಮಾಡಲಾಗುತ್ತಿತ್ತು.
ದ್ರಾಕ್ಷಿ ಕೆಜಿಗೆ 120ರೂ., ಸೇಬು 120 ರೂ., ಬಾಳೆಹಣ್ಣು ಕೆ.ಜಿ.ಗೆ 50ರೂ., ಸಪೋಟ 70 ರೂ., ಮೂಸುಂಬೆ 70, ಕಿತ್ತಳೆ50 ರೂ.ಕೆಜಿಗೆ ಮಾರಾಟ ಮಾಡಲಾಗುತ್ತಿತ್ತು.ದೀಪಾವಳಿ ಹಬ್ಬದ ಆಕರ್ಷಕವಾದ ಬಣ್ಣ ಬಣ್ಣದಆಕಾಶ ಬುಟ್ಟಿಗಳನ್ನು ಅಂಗಡಿಗಳ ಮುಂಭಾಗದಲ್ಲಿನೇತು ಹಾಕಿದ್ದು, 150 ರಿಂದ 450 ರೂ. ವರೆಗೂಆಕಾಶ ಬುಟ್ಟಿಗಳ ಮಾರಾಟ ಮಾಡಲಾಗುತ್ತಿತ್ತು.ಹಬ್ಬದ ಹಿನ್ನೆಲೆಯಲ್ಲಿ ಅಗ್ಗದ ಆಫರ್‌ಗಳನ್ನುನೀಡಿರುವ ಹಿನ್ನೆಲೆಯಲ್ಲಿ ಗೃಹೋಪಯೋಗಿ ಅಂಗಡಿ,ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು.
ಅಂಗಡಿ ಮುಂಗಟ್ಟುಗಳ ಮುಂದೆಜನಜಂಗುಳಿ ನೆರೆದಿತ್ತು. ಹಬ್ಬದ ಹಿನ್ನೆಲೆಯಲ್ಲಿಬೇರೆ ಬೇರೆ ಊರುಗಳಲ್ಲಿ ನೆಲೆಸಿರುವವರು ತಮ್ಮಊರುಗಳಿಗೆ ಆಗಮಿಸುತ್ತಿದ್ದು, ಬಸ್ ನಿಲ್ದಾಣವೂಜನಜಂಗುಳಿಯಿಂದ ಕೂಡಿತ್ತು. ಒಟ್ಟಾರೆ ದೀಪಾವಳಿಹಬ್ಬಕ್ಕೆ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿನಡೆಯಿತು.
ಪಟಾಕಿ ಖರೀದಿಗೆ ಮುಗಿಬಿದ್ದ ಜನತೆ: ನಗರದಬೈಪಾಸ್ ರಸ್ತೆಯ ಪಟಾಕಿ ಮೈದಾನದಲ್ಲಿ 30ಕ್ಕೂಹೆಚ್ಚು ಪಟಾಕಿ ಅಂಗಡಿಗಳನ್ನು ತೆರೆದಿದ್ದು, ಕಳೆದೆರಡುದಿನಗಳಿಂದ ನಗರ ಪ್ರದೇಶದಲ್ಲಿ ಮಳೆಯಿಂದಬಹುತೇಕ ಜನರು ಪಟಾಕಿ ಅಂಗಡಿಗಳತ್ತ ಮುಖ ಮಾಡಿರಲಿಲ್ಲ. ಬುಧವಾರ ಒಮ್ಮೆಲೆ ಪಟಾಕಿಅಂಗಡಿಗಳಿಗೆ ಜನರು ಮುಗಿಬಿದ್ದು ಖರೀದಿಮಾಡಿದರು.
ಭಾರೀ ಪ್ರಮಾಣದಲ್ಲಿ ಜನರು ಪಟಾಕಿಖರೀದಿಗೆ ಮುಗಿಬಿದ್ದಿದ್ದರಿಂದ ಈ ರಸ್ತೆಯಲ್ಲಿಟ್ರಾμಕ್ ಸಮಸ್ಯೆ ಎದುರಿಸುವಂತಾಗಿತ್ತು.ಸರ್ಕಾರ ಹಸಿರು ಪಟಾಕಿ ಮಾರಾಟ ಮಾಡುವಂತೆನಿರ್ದೇಶಿಸಿದ್ದು, ಹಸಿರು ಪಟಾಕಿಗೆ ಹೆಚ್ಚಿನ ಬೇಡಿಕೆಕಂಡುಬಂತು. 150, 200 ರಿಂದ 1,200 ರೂ.,ಬೆಲೆಯ ಪಟಾಕಿಗಳನ್ನು ಖರೀದಿಸುತ್ತಿದ್ದ ದೃಶ್ಯಕಂಡುಬಂತು. ಪೋಷಕರೊಂದಿಗೆ ಆಗಮಿಸಿದಮಕ್ಕಳು ಪಟಾಕಿ ಖರೀದಿಸಿ ಮನೆ ಕಡೆಗೆಸಾಗುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.