ಕರಗಡ ಕುಡಿಯುವ ನೀರು ಯೋಜನೆ ರಾಜಕೀಯ ಬಳಕೆಗೆ ಸಲ್ಲ
Team Udayavani, Jul 17, 2021, 4:52 PM IST
ಚಿಕ್ಕಮಗಳೂರು: ಕರಗಡ ಕುಡಿಯುವನೀರು ಯೋಜನೆ ಕಾಮಗಾರಿ ನಿಂತಾಗ, ಅತ್ತ ಸುಳಿಯದ ಹೋರಾಟಗಾರರು ಕೆಲಸ ಆರಂಭವಾಗುತ್ತಿದ್ದಂತೆ ಹೋರಾಟ ಆರಂಭವಾಗುತ್ತದೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಗ್ರಾಪಂ ಮಾಜಿ ಸದಸ್ಯ ಹಾಗೂ ರೈತ ಕೆ.ಎಂ. ಸತ್ಯನಾರಾಯಣ ಕರಗಡ ಹೋರಾಟ ಸಮಿತಿ ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಕರಗಡ, ಬೈರಾಪುರ, ದಾಸರಹಳ್ಳಿ, ಗೋಂಧಿ ನೀರಾವರಿ ಯೋಜನೆಗಳು ರೈತರಿಗೆ ಪೂರಕವಾಗಿದೆ.ಕರಗಡ ಹೋರಾಟ ಸಮಿತಿ ಸದಸ್ಯರಆರೋಪದಲ್ಲಿ ಹುರುಳಿಲ್ಲ, ಏತ ನೀರಾವರಿ ಮೂಲಕ ಕರಗಡ ನಾಲೆಯಲ್ಲಿ ನೀರು ಹರಿಸಲಾಗುತ್ತಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿದೆ. ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ ಎಂದರು.
ಯೋಜನೆಯಡಿ ಗುರುತ್ವಕರ್ಷಣೆ ಮೂಲಕ ಲಕ್ಯಾ, ಬೆಳವಾಡಿ, ಕಳಸಾಪುರ, ದೇವನೂರು ಭಾಗಗಳ ಕೆರೆ ತುಂಬಿಸುವ ಯೋಜನೆಯಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಗುರುತ್ವಕ ರ್ಷಣೆ ಮೂಲಕ ನೀರುಹರಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತುನೀರಾವರಿ ತಜ್ಞರ ಸಲಹೆ ಪಡೆದು ಏತ ನೀರಾವರಿ ಕಾಮಗಾರಿ ಕೈಗೊಂಡಿದ್ದು ಮುಕ್ತಾಯದ ಹಂತದಲ್ಲಿದೆ. ಶಾಸಕ ಸಿ.ಟಿ. ರವಿ ಅವರ ಪರಿಶ್ರಮದಿಂದ ಮೋಟಾರ್ ಅಳವಡಿಸಿ ನೀರು ಹರಿಸುತ್ತಿದ್ದು ಕಳಸಾಪುರ 2 ಕೆರೆ ಹಾಗೂ ಈಶ್ವರಹಳ್ಳಿ ಕೆರೆ ತಂಬಿದ್ದು ಈ ಭಾಗದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕರಗಡ ಯೋಜನೆಗೆ 9 ಕೋಟಿ ರೂ. ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ 3.5 ಕೋಟಿ ಮೊತ್ತದ ಟೆಂಡರ್ ಕರೆದು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಶಾಸಕ ಸಿ.ಟಿ. ರವಿ 1,281 ಕೋಟಿ ರೂ. ವೆಚ್ಚದ ಗೋಂದಿ ಯೋಜನೆಗೆ ಅನುದಾನ ಮೀಸಲಿರಿಸಿ ಮೊದಲ ಹಂತದ 406 ಕೋಟಿ ರೂ. ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.
ಭೈರಾಪುರ ಮತ್ತು ದಾಸರಹಳ್ಳಿ ಯೋಜನೆಗಳು ಈಗಾಗಲೇ ಮಂಜೂರಾಗಿದ್ದು, ಕಾಮಗಾರಿಪ್ರಗತಿಯಲ್ಲಿದೆ. ಈ ಯೋಜನೆಗೆ ನೀರಿನ ಲಭ್ಯತೆಯನ್ನು ತಜ್ಞರ ವರದಿ ಪಡೆದೇ ಶಾಸಕರು ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಿದರು. ಶಾಸಕ ಸಿ.ಟಿ. ರವಿ ಅವರಿಗೆ ಕೆಟ್ಟ ಹೆಸರು ತರುವ ದೃಷ್ಟಿಯಿಂದ ಈ ಯೋಜನೆ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರನಡೆಸುತ್ತಿದ್ದು, ಕರಗಡ ಹೋರಾಟ ಸಮಿತಿ ಹೆಸರಿನಲ್ಲಿ ಇಲ್ಲಸಲ್ಲದ ಆರೋಪಮಾಡುತ್ತಿರುವರು ನೈಜವಾಗಿ ಈ ಭಾಗದ ರೈತರೇ ಅಲ್ಲ. ಸುಮ್ಮನೆ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಇಲ್ಲಸಲ್ಲದಆರೋಪ ಮಾಡುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬೆಳವಾಡಿ ಗ್ರಾಪಂ ಮಾಜಿ ಅಧ್ಯಕ್ಷಚಂದ್ರಶೇಖರ್, ಸಿಂದಿಗೆರೆ ರಘು, ಈಶ್ವರಪ್ಪ, ಯತೀಶ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
MUST WATCH
ಹೊಸ ಸೇರ್ಪಡೆ
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.