ಇ-ಸ್ವತ್ತು ಖಾತೆ ಅನುಮಾನಾಸ್ಪದ- ಆರೋಪ
Team Udayavani, Aug 8, 2020, 3:23 PM IST
ಕಡೂರು: ಪಟ್ಟಣದ ವಿವಾದಿತ ಸ್ಥಳವನ್ನು ಲಾರಿ ಮಾಲೀಕರೊಂದಿಗೆ ಕೆ.ಎಸ್. ಆನಂದ್ ವೀಕ್ಷಿಸಿದರು.
ಕಡೂರು: ಪಟ್ಟಣದ ಸುಭಾಷ್‌ನಗರದ ಒಳಗಿರುವ ಪ್ರಮುಖ ಸ್ಥಳವನ್ನು ಕಡೂರು ಪುರಸಭೆಯು ಕೆಲವು ವ್ಯಕ್ತಿಗಳಿಗೆ ಇ-ಸ್ವತ್ತು ಖಾತೆಯನ್ನು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್. ಆನಂದ್ ಆರೋಪಿಸಿದರು.
ಅವರು ಶುಕ್ರವಾರ ಸುಭಾಷ್ ನಗರದ ವಿವಾದಿತ ಸ್ಥಳದಲ್ಲಿಯೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ವರ್ಷದಿಂದ ಬಂಡಿಮೋಟ್ ಮೈದಾನ ಎಂದು
ಕರೆಸಿಕೊಳ್ಳುತ್ತಿದ್ದ ಈ ಜಾಗವು ಪ್ರತಿವರ್ಷ ಗಣಪತಿ ಪ್ರತಿಷ್ಠಾಪನೆಯೂ ಸೇರಿದಂತೆ ಶಾಲಾ ಮಕ್ಕಳ ಸಾಂಸ್ಕೃತಿಕ ಚಟುವಟಿಕೆ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಬಳಕೆಯಾಗುತ್ತಿತ್ತು. ಈ ಜಾಗ ಸಾರ್ವಜನಿಕರ ಸ್ವಾ ಧೀನದಲ್ಲಿ ಇದೆ ಎಂಬುದಕ್ಕೆ ಬಹುದೊಡ್ಡ ಇತಿಹಾಸವೇ ಇದೆ ಎಂದರು. ಪ್ರತಿವರ್ಷವು ಇಲ್ಲಿ ಗಣಪತಿ ಪ್ರತಿಷ್ಠಾಪಿಸುವ ಜತೆಗೆ ಇದೇ ಜಾಗದಲ್ಲಿರುವ ಐತಿಹಾಸಿಕ ನಾಗರಕಲ್ಲಿಗೆ ಭಕ್ತರು ಹಬ್ಬ ಹರಿದಿನಗಳಲ್ಲಿ ಪೂಜಿಸುತ್ತಾ ಬಂದಿದ್ದಾರೆ. ಇಂತಹ ಜಾಗವನ್ನು ಪುರಸಭೆಯು ದುರುದ್ದೇಶಪೂರಿತವಾಗಿ ಕೆಲವು ವ್ಯಕ್ತಿಗಳಿಗೆ ಇ-ಸ್ವತ್ತು ಖಾತೆ ಇಟ್ಟಿರುವುದು ಪರೋಕ್ಷವಾಗಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಎಂದು ಹೇಳಿದರು.
ಈಗಾಗಲೆ ನಡೆದಿರುವ ಕಾಂಪೌಂಡ್ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳಬೇಕು ಜಾಗದಲ್ಲಿದ್ದ ಗಣಪತಿ ಮಂಟಪವನ್ನು ಕೆಡವಲಾಗಿದ್ದು ಅದನ್ನು ಪುನರ್‌ನಿರ್ಮಿಸಬೇಕು. ಜೊತೆಗೆ
ಈ ಜಾಗವನ್ನು ಸಾರ್ವಜನಿಕವಾಗಿ ಉಳಿಸಬೇಕು ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟಕ್ಕೆ ಸಿದ್ದ ಎಂದು ಆನಂದ್ ತಿಳಿಸಿದರು. ಪುರಸಭೆ ಸದಸ್ಯ ತೋಟದ ಮನೆ ಮೋಹನ್(ಮುದ್ದು), ಕದಂಬ ವೆಂಕಟೇಶ್, ಪಂಗಲಿ ಮಂಜುನಾಥ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
MUST WATCH
ಹೊಸ ಸೇರ್ಪಡೆ
Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.