ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 22 ಸ್ಥಾನ
Team Udayavani, Dec 18, 2021, 7:35 PM IST
ಚಿಕ್ಕಮಗಳೂರು: ಬಿಜೆಪಿ ದುರಾಡಳಿತದಿಂದ ನಗರಸಭೆ ಆಡಳಿತಕಲುಷಿತಗೊಂಡಿದೆ. ಕಾಂಗ್ರೆಸ್ ನಗರಸಭೆಯನ್ನು ಸ್ವತ್ಛಗೊಳಿಸಲುಸಿದ್ಧವಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ 20ರಿಂದ 22ಸ್ಥಾನಗಳಲ್ಲಿ ಗೆಲುವು ಸಾಧಿ ಸಲಿದೆಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಮೂರುವರ್ಷಗಳಿಂದ ನಗರಸಭೆ ಚುನಾವಣೆಯಾವಾಗ ನಡೆಯುತ್ತದೆ ಎಂದು ಜನತೆಕಾತುರದಿಂದ ಕಾಯುತ್ತಿದ್ದರು. ಅದರಂತೆಡಿ.27ರಂದು ನಡೆಯುವ ನಗರಸಭೆಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಸರ್ವ ಸನ್ನದ್ಧವಾಗಿದೆಎಂದರು. 2011ರಿಂದ ಇಲ್ಲಿಯವರೆಗೆ ಯುಜಿಡಿ ಕಾಮಗಾರಿಗೆ140 ಕೋಟಿ ರೂ. ಬಿಡುಗಡೆಯಾಗಿದೆ. 10 ವರ್ಷ ಕಳೆದರೂಯುಜಿಡಿ ಕಾಮಗಾರಿ ಮುಕ್ತಾಯವಾಗಿಲ್ಲ,
102 ಕೋಟಿ ರೂ.ವೆಚ್ಚದ ಅಮೃತ್ ಕುಡಿಯುವ ನೀರು ಯೋಜನೆ 2019ಕ್ಕೆಮುಕ್ತಾಯವಾಗಬೇಕಿತ್ತು. ಇನ್ನೂ ಮುಕ್ತಾಯಗೊಂಡಿಲ್ಲ. ರಾಜ್ಯಸರ್ಕಾರ, ನಗರಸಭೆ ಮತ್ತು ಶಾಸಕ ಸಿ.ಟಿ. ರವಿ ಇದರ ಹೊಣೆಹೊರಬೇಕು ಎಂದು ಹೇಳಿದರು. ಬಸವನಹಳ್ಳಿಕೆರೆ ಮತ್ತುಕೋಟೆಕೆರೆ 6 ವರ್ಷಗಳಿಂದ ಅಭಿವೃದ್ಧಿಗೊಂಡಿಲ್ಲ, ವಿರೂಪಗೊಂಡಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಕೆಡವಿ ಹಾಕಿದ್ದು,ಪ್ರತಿಮೆಯ ಮರುಸ್ಥಾಪನೆ, ಕೆಡವಿ ದ್ದು ಯಾರು ಎಂದು ತನಿಖೆನಡೆಸಿಲ್ಲ.
ಎಐಟಿ ವೃತ್ತದಿಂದ ಹಿರೇಮಗಳೂರು ವೃತ್ತದವರೆಗಿನಬೈಪಾಸ್ ರಸ್ತೆ ಕಾಮಗಾರಿ ಆರಂಭಗೊಂಡು 6 ತಿಂಗಳು ಕಳೆದರೂಪೂರ್ಣಗೊಂಡಿಲ್ಲ, ಕೆ.ಎಂ. ರಸ್ತೆಗೆ ಅವೈಜ್ಞಾನಿಕ ರಸ್ತೆ ವಿಭಜಕಅಳವಡಿಸಿದ್ದು, ನಿತ್ಯ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದುಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಬಿಜೆಪಿದುರಾಡಳಿತದಿಂದ ಬೇಸತ್ತಿರುವ ನಗರದ ಜನತೆ ಬದಲಾವಣೆಬಯಸಿದ್ದಾರೆ. ಈ ಬಾರಿಯ ನಗರಸಭೆ ಚುನಾವಣೆಯಲ್ಲಿಕಾಂಗ್ರೆಸ್ 20ರಿಂದ 22 ಸ್ಥಾನಗಳಲ್ಲಿ ಗೆಲುವು ಸಾ ಧಿಸಲಿದೆ. ಜನರುಸಹಕರಿಸುವಂತೆ ಮನವಿ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಎಚ್.ಪಿ.ಮಂಜೇಗೌಡ ಮಾತನಾಡಿ, ನಗರಸಭೆ 35 ವಾಡ್ìಗಳಲ್ಲಿ 33 ವಾರ್ಡ್‌ಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗಿದೆ.
2 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಸೂಚಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆಯನ್ನು ಪಾರದರ್ಶಕವಾಗಿಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ತನೋಜ್‌ಕುಮಾರ್‌ನಾಯ್ಡು, ಎಂ.ಡಿ. ರಮೇಶ್, ವಿನಾಯಕ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.