ದತ್ತ ಜಯಂತಿ ಸಂಪನ್ನ
Team Udayavani, Dec 30, 2020, 6:40 PM IST
ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿ ಯಿಂದ ಜಿಲ್ಲೆಯಲ್ಲಿ ಮೂರುದಿನಗಳ ಕಾಲ ನಡೆದ ದತ್ತ ಜಯಂತಿಮಂಗಳವಾರ ಚಂದ್ರದ್ರೋಣ ಪರ್ವತದತಪ್ಪಲಿನಲ್ಲಿರುವ ದತ್ತಪೀಠದಲ್ಲಿ ಪೊಲೀಸರ ಸೊರ್ಪಗಾವಲಿನ ನಡುವೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ದತ್ತಮಾಲಾಧಾರಿಗಳು ಇರುಮುಡಿಯನ್ನು ಹೊತ್ತು ಪೀಠದತ್ತ ಸಾಗಿದರು.ಬೆಟ್ಟವನ್ನು ಸೀಳಿಕೊಂಡು ಸಾಗಿರುವಅಂಕುಡೊಂಕಾದ ರಸ್ತೆಯಲ್ಲಿ ವಾಹನಗಳಸಾಗಿದವು. ಭಗವಾಧ್ವಜಗಳನ್ನುಕಟ್ಟಿದ್ದ ವಾಹನಗಳು ಸಾಗುತ್ತಿದ್ದಂತೆಭಕ್ತರು ವಾದ್ಯಗಳನ್ನು ಬಡಿಯುತ್ತಾ,ದತ್ತಾತ್ರೇಯರಿಗೆ ಜಯಕಾರ ಹಾಕುತ್ತಾತೆರಳಿದರು.ದತ್ತಪೀಠಕ್ಕೆ ಸಾಗುವಾಗ ಯಾವುದೇ ಅಹಿತರಕರ ಘಟನೆಗಳುನಡೆಯದಂತೆ ಮುಂಜಾಗ್ರತಾ ಕ್ರಮವಾಗಿಜಿಲ್ಲಾಡಳಿತ ಪೀಠಕ್ಕೆ ತೆರಳುವ ಮಾರ್ಗದಎಲ್ಲಾ ಅಂಗಡಿ- ಮುಂಗಟ್ಟುಗಳಬಾಗಿಲು ಮುಚ್ಚಿಸಲಾಗಿತ್ತು. ಬೆಟ್ಟಕ್ಕೆಸಾಗುವ ವಾಹನಗಳನ್ನು ಚೆಕ್‌ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಿ ವಾಹನಗಳ ಮುಂಭಾಗದಲ್ಲಿ ಚೀಟಿ ಅಂಟಿಸಲಾಗಿತ್ತು.
ಪೀಠಕ್ಕೆ ಸಾಗುವ ದಾರಿಯ ಮಧ್ಯೆ ಸಿಗುವ ಹೊನ್ನಮ್ಮನಹಳ್ಳದಲ್ಲಿ ಮಿಂದಭಕ್ತರು ವಾಹನಗಳನ್ನೇರಿ ಪೀಠದಕಡೆ ಸಾಗಿದರು. ಪೀಠದ ಆವರಣ ತಲುಪುತ್ತಿದ್ದಂತೆ ಜಯಘೋಷಗಳುಮೊಳಗಿದವು. ನೋಡ ನೋಡುತ್ತಿದ್ದಂತೆಹಸಿರಿನಿಂದ ಕೂಡಿದ ಪೀಠದ ಆವರಣಕೇಸರಿ ರಂಗನ್ನು ಪಡೆದುಕೊಂಡಿತು. ದತ್ತಪೀಠಕ್ಕೆ ಬೆಳಗ್ಗೆಯಿಯಿಂದಸಂಜೆಯವರೆಗೆ ಸಹಸ್ರಾರು ದತ್ತಭಕ್ತರುಭೇಟಿ ನೀಡುವ ಮೂಲಕ ದತ್ತಪಾದುಕೆಗಳ ದರ್ಶನ ಪಡೆದರು. ವಿವಿಧ ಜಿಲ್ಲೆಗಳಲ್ಲಿದತ್ತಮಾಲೆ ಧರಿಸಿದ್ದ ಭಕ್ತರು ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಆಯಾ ಗ್ರಾಮದದೇವಸ್ಥಾನದಲ್ಲಿ ದತ್ತಮಾಲೆಯನ್ನು ವಿಸರ್ಜಿಸಿದ್ದಾರೆ.ಪೀಠದ ನಿಷೇಧಿತ ಪ್ರದೇಶದ ಹೊರಭಾಗದಲ್ಲಿ ಕಾರ್ಯಕ್ರಮ ಸಂಘಟಕರು ಧಾರ್ಮಿಕ ಸಭೆಯನ್ನು ಏರ್ಪಡಿಸಿದ್ದರು.
ಕಡೂರು ಯಳನಾಡುಮಠದ ಶ್ರೀಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಬೀರೂರು ಶಾಖಾಮಠದ ಶ್ರೀರುದ್ರಮುನಿ ಸ್ವಾಮೀಜಿ, ಅರಸೀಕೆರೆಯ ಶ್ರೀ ಜಯಪ್ರಕಾಶ ಸದ್ಗುರು ಸ್ವಾಮೀಜಿ, ಅರಸೀಕೆರೆ ದೊಡ್ಡಮೇಟಿ ಕುರ್ಕೆಯ ಶ್ರೀ ಸಿದ್ಧಬಸವಸ್ವಾಮೀಜಿ ಆಶೀರ್ವಚನ ನೀಡಿದರು. ವಿಶ್ವ ಹಿಂದೂ ಪರಿಷತ್‌ರಾಷ್ಟ್ರೀಯ ಸಹ ಸಂಯೋಜಕಸೂರ್ಯನಾರಾಯಣ, ಭಜ ರಂಗ ದಳದದಕ್ಷಿಣ ಪ್ರಾಂತ ಸಂಯೋಜಕ ಸಕಲೇಶಪುರರಘು, ರಾಜ್ಯ ಸಂಯೋಜಕ ಕೆ.ಆರ್. ಸುನೀಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್.ಡಿ. ಮಹೇಂದ್ರ, ಉಪಾಧ್ಯಕ್ಷ ಶ್ರೀಕಾಂತ್ ಪೈ, ಪ್ರೇಂಕಿರಣ್,ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ
ಹೆರೂರು, ನಗರ ಸಂಚಾಲಕ ಕೃಷ್ಣ,ಮುಖಂಡರಾದ ರಂಗನಾಥ್, ಯೋಗೀಶ್ ರಾಜ್ ಅರಸ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.