ಕಲೆ-ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದು : ಶೈಲಜಾ


Team Udayavani, Jan 11, 2019, 11:27 AM IST

chikk-1.jpg

ಶೃಂಗೇರಿ: ಕಲೆ ಮತ್ತು ಸಂಸ್ಕೃತಿಯು ಸ್ವಾಸ್ಥ್ಯ ಸಮಾಜದ ಕುರುಹುಗಳಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ ಹೇಳಿದರು. ಪಟ್ಟಣದ ಗೌರಿಶಂಕರ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್‌, ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಮಲೆನಾಡು ಉತ್ಸವವನ್ನು ಭತ್ತ ಕೇರುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಲೆನಾಡು ಸಾಂಸ್ಕೃತಿಕವಾಗಿ ಅಪಾರವಾದ ಜಾನಪದ ಸಂಪತ್ತನ್ನು ಹೊಂದಿದೆ. ರಂಗಭೂಮಿ ಶತಮಾನಗಳ ಇತಿಹಾಸದ ಹಿರಿಮೆ ಪಡೆದಿದೆ ಎಂದರು.

ಸಮಾಜ ಸೇವಕಿ ಶ್ಯಾಮಲಾ ರಂಗನಾಥ್‌ ಮಾತನಾಡಿ, ಉತ್ಸವ ಸಂಚಾಲಕ ಎಸ್‌.ಎನ್‌. ವಿಶ್ವನಾಥ್‌, ಕೊಟ್ಟು ಶ್ಯಾಮಲ ಅವರ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆ ಇಂದಿನ ಸ್ವಾರ್ಥಪರ ಪ್ರಪಂಚದಲ್ಲಿ ಒಂದು ವಿಶೇಷವಾದ ಸ್ಥಾನ ಪಡೆದಿದೆ. ಮಲೆನಾಡಿನ ಗೃಹಿಣಿಯರನ್ನು ಅವರು ಸೃಜನಶೀಲತೆಯ ಕಡೆಗೆ ಸೆಳೆದೊಯ್ಯುತ್ತಿದ್ದ ಪರಿ ಅವರ ವ್ಯಕ್ತಿತ್ವದ ಕನ್ನಡಿಯಾಗಿದೆ ಎಂದರು.

ಮಹಿಳೆಯರಿಗೆ ಸಮಾಜಮುಖೀ ಕಾರ್ಯಕ್ಕೆ ಪ್ರೇರಣೆ ಒದಗಿಸುತ್ತಿದ್ದ ಅಪರೂಪದ ವ್ಯಕ್ತಿ ಶ್ಯಾಮಲಾ. ಇಂತಹ ಕ್ರಿಯಾಶೀಲ ಮಹಿಳೆಯನ್ನು ಸ್ಮರಿಸುವ ಮೂಲಕ ಮಲೆನಾಡು ಉತ್ಸವ ಮಹಿಳೆಯರಿಗೂ ಪ್ರಾಮುಖ್ಯ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲ್ಕುಳಿ ವೆಂಕಟೇಶ್‌, ಮಲೆನಾಡಿನ ಕಲೆ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಮಲೆನಾಡು ಉತ್ಸವ ವರ್ಷದಿಂದ ವರ್ಷಕ್ಕೆ ವಿನೂತನ ಚಿಂತನೆಯನ್ನು ಅಳವಡಿಸಿಕೊಳ್ಳುತ್ತಾ ಮೈಲಿಗಲ್ಲು ನಿರ್ಮಿಸುತ್ತಿದೆ. ಈ ಉತ್ಸವವನ್ನು ಪೋತ್ಸಾಹಿಸುವುದು ಕಲಾಭಿಮಾನಿಗಳ ಕರ್ತವ್ಯ ಎಂದರು. ಶ್ಯಾಮಲಾ ರಂಗನಾಥ್‌ ಸ್ಮರಣಾರ್ಥ ನೀಡಲಾದ ವಿಶೇಷ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ಭಾರತೀಯ ಅನಿವಾಸಿ ಸಮಿತಿ ಮಾಜಿ ಉಪಾಧ್ಯಕ್ಷೆ ಆರತಿಕೃಷ್ಣ ಪರವಾಗಿ ಸೌಮ್ಯಾ ಸ್ವೀಕರಿಸಿದರು. ಉದ್ಯಮಿ ವಿ.ಆರ್‌ ರಾಜೇಶ್‌ ಮತ್ತು ಶೈಕ್ಷಣಿಕ ಕ್ಷೇತ್ರದ ಎನ್‌. ಲೋಕೇಶ್‌ ಅವರಿಗೆ ಮಲೆನಾಡು ಉತ್ಸವದ ಸಮರ್ಪಣಾ ಗೌರವವನ್ನು ಪ್ರದಾನ ಮಾಡಲಾಯಿತು.

ಉತ್ಸವ ಅಧ್ಯಕ್ಷ ರಂಗ ಕಲಾವಿದ ಬಿ.ಎಲ್‌. ರವಿಕುಮಾರ್‌, ಆಯೋಜಕ ರಮೇಶ್‌ ಬೇಗಾರ್‌ ಉಪಸ್ಥಿತರಿದ್ದರು. ಡಾ| ಬಿ.ಎನ್‌.ವಿ. ಸುಬ್ರಹ್ಮಣ್ಯಂ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.

ಭಾವಗೀತೆ: ಕೊಪ್ಪದ ಭಾವಯಾನ ತಂಡದಿಂದ ನಡೆದ ಭಾವತೀರಯಾನ ಮಧುರ ಅನುಭವವನ್ನು ಕೇಳುಗರಿಗೆ ನೀಡುವಲ್ಲಿ ಯಶಸ್ಸು ಪಡೆಯಿತು. ನಾಗರತ್ನ ನಟರಾಜ್‌ ಮತ್ತು ಇಮ್ತಿಯಾಜ್‌ ಸುಲ್ತಾನ್‌ ಕನ್ನಡದ ಗೀತೆಗೆ ಧ್ವನಿಯಾದರು.

ನಂತರ ಬೆಂಗಳೂರಿನ ಕ್ರಿಯೇಟೀವ್‌ ಥಿಯೇಟರ್‌ ತಂಡದವರು ಹೆಸರಾಂತ ಮಲೆಯಾಳಿ ಬರಹಗಾರ ವೈಕಂ ಬಷೀರ್‌ ಇವರ ಸಣ್ಣ ಕಥೆಯನ್ನು ಆಧರಿಸಿದ ಮೂಗು ಮಸಾಲ ಎಂಬ ವಿಡಂಬನಾತ್ಮಕ ನಾಟಕ ಪ್ರಸ್ತುತ ಪಡಿಸಿದರು.

ಟಾಪ್ ನ್ಯೂಸ್

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

Consumer-Court

Mangaluru: ಖಾಸಗಿ ಬಸ್‌ನಲ್ಲಿ ತಿಗಣೆ ಕಡಿತ: ಮಹಿಳೆಗೆ 1.29 ಲಕ್ಷ ರೂ. ಪರಿಹಾರ ನೀಡಿ

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ ನಿರ್ಬಂಧ, ಹೊಸ ವರ್ಷಾಚರಣೆಗೆ ಜಿಲ್ಲಾಡಳಿತದಿಂದ ಮಾರ್ಗಸೂಚಿ

Chikkamagaluru: ಪ್ರವಾಸಿ ತಾಣಗಳಿಗೆ ನಿರ್ಬಂಧ, ಇಲ್ಲಿದೆ ಹೊಸ ವರ್ಷಾಚರಣೆಗೆ ಮಾರ್ಗಸೂಚಿ

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

accident

Sringeri; ಪ್ರವಾಸಿ ವಾಹನಗಳ ಢಿಕ್ಕಿ: ವೃದ್ಧೆ ಸಾ*ವು

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

9-

CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

Kerala NCC Camp: ಸೇನಾಧಿಕಾರಿ ಮೇಲೆ ಹಲ್ಲೆ: ಕೇರಳದಲ್ಲಿ ಇಬ್ಬರ ಬಂಧನ

Consumer-Court

Mangaluru: ಖಾಸಗಿ ಬಸ್‌ನಲ್ಲಿ ತಿಗಣೆ ಕಡಿತ: ಮಹಿಳೆಗೆ 1.29 ಲಕ್ಷ ರೂ. ಪರಿಹಾರ ನೀಡಿ

Mumbai ಹೋರ್ಡಿಂಗ್‌ ಕುಸಿತ: ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ

Ghatkopar: ಮುಂಬಯಿ ಹೋರ್ಡಿಂಗ್‌ ಕುಸಿತ: ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ

1-katte

Kodagu; ದೇವಸ್ಥಾನ ಪ್ರವೇಶ ನಿರಾಕರಣೆ: ವಿವಿಧೆಡೆ ಕೊಡವರಿಂದ ರಸ್ತೆ ತಡೆ

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.