ರೈತರಿಗೆ ನೀರು ಕೊಡಿ; ಇಲ್ಲವೇ ರಾಜೀನಾಮೆ ನೀಡಿ: ರವೀಶ್
Team Udayavani, Aug 18, 2020, 6:45 PM IST
ಚಿಕ್ಕಮಗಳೂರು: ನೀವು ಜಿಲ್ಲೆಯ ಉಸ್ತುವಾರಿ ಮಂತ್ರಿ. ರೈತರಿಗೆ ನೀರು ಕೊಡಿ ಎಂದು ಹೋರಾಟ ಮಾಡಿದ್ದೇವೆ. ಹೊಟ್ಟೆಪಾಡಿಗೆ ನಾವು ಹೋರಾಟ ಮಾಡುತ್ತಿಲ್ಲ. ರೈತರಿಗೆ ನೀರು ಕೊಡಿ ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕರಗಡ ಹೋರಾಟ ಸಮಿತಿ ರವೀಶ್ ಕ್ಯಾತನಬೀಡು ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಸಂಬಂಧ ಯಾರೂ ಮನವಿ ನೀಡಿಲ್ಲ ಎಂಬ ಸಚಿವ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈ ಹಿಂದೆಕರಗಡ ಯೋಜನೆ ಪೂರ್ಣಗೊಳಿಸುವಂತೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವರು ಯಾರು? ಅವರಿಗೆ ಯಾವ ರೀತಿ ಮನವಿ ನೀಡಬೇಕು. ನೀವೇಸ ರ್ಕಾರಕ್ಕೆ ಮನವಿ ನೀಡಿದ ಅರಿವಿಲ್ಲವೇ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಸಹಿಸದೆ ಹೊಟ್ಟೆಕಿಚ್ಚಿಗೆ ಹೋರಾಟಕ್ಕೆ ಮುಂದಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ರವೀಶ್, ನಿಮ್ಮ ಅಭಿವೃದ್ಧಿ ಗೊತ್ತಿದೆ. ನಗರದ ಕೋಟೆಕೆರೆ, ಬಸವನಹಳ್ಳಿಕೆರೆ ನೋಡಿದರೇ ಗೊತ್ತಾಗುತ್ತದೆ. ಎಂ.ಜಿ. ರಸ್ತೆ, ಅಗಲೀಕರಣ ಸಂದರ್ಭದಲ್ಲಿ ನೀವೆಷ್ಟು ಅಭಿವೃದ್ಧಿ ಪರ ಎಂಬುದು ನಮಗೆ ಗೊತ್ತಿದೆ. ಜೆಸಿಬಿ ಅಡಿ ಮಲಗಿ ಪ್ರತಿಭಟನೆ ಮಾಡಿದವರು ಯಾರು ಎಂಬುದು ತಿಳಿದಿದೆ ಎಂದರು.
ಕರಗಡ ಹೋರಾಟ ಸಮಿತಿಯ ಎಚ್. ಎಂ. ರೇಣುಕಾರಾಧ್ಯ ಮಾತನಾಡಿ, ಕರಗಡ ಯೋಜನೆ ಸಂಬಂಧ ರಾಜ್ಯದಲ್ಲಿ ಮೂರು ಪಕ್ಷ ಅಧಿಕಾರದಲ್ಲಿ ಇದ್ದಾಗಲೂ ಹೋರಾಟ ಮಾಡಿದ್ದೇವೆ. ರೈತರ, ಬಡವರ ಪರ ಹೋರಾಟ ಮಾಡಿದರೆ ತಪ್ಪೇ? ಅವರು ಹೋರಾಟ ಮಾಡಿದರೆ ಮಾತ್ರ ಸರಿಯೇ ಎಂದು ಪ್ರಶ್ನಿಸಿದರು. ಸೋಕಾಲ್ಡ್ ಹೋರಾಟಗಾರರು ಎಂದು ಅವಹೇಳನ ಮಾಡಿದ್ದಾರೆ. ಅಧಿಕಾರ ಶಾಶ್ವತವಲ್ಲ, ನಿಮ್ಮ ಕುತಂತ್ರ ರಾಜಕಾರಣವನ್ನು ನಿಮ್ಮೊಳಗೆ ಇಟ್ಟುಕೊಂಡು ಕರಗಡ ಯೋಜನೆ ಬಗ್ಗೆ ಸರ್ಕಾರ ಮೇಲೆ ಒತ್ತಡ ತಂದು ಯೋಜನೆ ಪೂರ್ಣಗೊಳಿಸಿ ಎಂದರು.
ಹೋರಾಟ ಸಮಿತಿಯ ನಟರಾಜ್ ಎಸ್. ಕೊಪ್ಪಲು ಮಾತನಾಡಿ, ರೈತರು ನೀರು ಕೇಳುವುದು ಹೊಟ್ಟೆಕಿಚ್ಚೇ? ಯೋಜನೆ ಪೂರ್ಣಗೊಳಿಸುವಂತೆ ಚಿಕ್ಕದೇವನೂರಿನಿಂದ ಚಿಕ್ಕಮಗಳೂರಿಗೆ ಬೈಕ್ ಜಾಥಾ ನಡೆಸಿದಾಗ ಸಿ.ಟಿ. ರವಿಅವರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಹೋರಾಟಗಾರರು ಈಗ ಹೇಗೆ ಸೋಕಾಲ್ಡ್ ಹೋರಾಟಗಾರರಾದರು ಎಂದರು.
ಹೋರಾಟವನ್ನು ಹತ್ತಿಕ್ಕಲು ಆ.12ರ ರಾತ್ರಿಯಿಂದ ಮೋಟಾರ್‌ನಲ್ಲಿ ನಾಲೆಗೆ ನೀರು ಹಾಯಿಸುವ ಕೆಲಸ ಮಾಡಿದರು. ನಮಗೆ ಶಾಶ್ವತವಾಗಿ ನೀರು ಹರಿಯುವಂತೆ ಮಾಡಬೇಕು ಎಂದರು. ಪಂಪ್‌ಸೆಟ್ ಇಟ್ಟು ಕಾಲುವೆಯಲ್ಲಿ ನೀರು ಹರಿಸುವುದನ್ನು ಕೈಬಿಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.