ಕ್ಷೇತ್ರ ಪುನರ್ವಿಂಗಡಣೆ ಅವೈಜ್ಞಾನಿಕ: ದತ್ತ
Team Udayavani, Mar 30, 2021, 2:55 PM IST
ಚಿಕ್ಕಮಗಳೂರು: ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ ಅವೈಜ್ಞಾನಿಕವಾಗಿದ್ದು ಚುನಾವಣಾ ಆಯೋಗಮತ್ತು ಜಿಲ್ಲಾಡಳಿತ ತಕ್ಷಣ ಸರಿ ಪಡಿಸಬೇಕೆಂದು ಕಡೂರುಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ. ಎಸ್.ವಿ. ದತ್ತ ಆಗ್ರಹಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಚುನಾವಣಾಆಯೋಗ ಕ್ಷೇತ್ರ ವಿಂಗಡಣೆ 10 ವರ್ಷಗಳಿಗೊಮ್ಮೆನಡೆಸುತ್ತಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆಬಂದ ಮೇಲೆ ಚುನಾವಣಾ ಆಯೋಗದ ಮೇಲೆ ತನ್ನ ಪ್ರಭಾವ ಬಳಸಿ 5 ವರ್ಷಕ್ಕೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು, ಯಾವುದೇ ಸರ್ಕಾರ ಚುನಾವಣಾ ಆಯೋಗದಲ್ಲಿ ಹಸ್ತಕ್ಷೇಪ ನಡೆಸಬಾರದು ಎಂದ ಅವರು, ಚುನಾವಣಾ ಆಯೋಗ ಈಗ ಹೊರಡಿಸಿರುವ ಕ್ಷೇತ್ರ ಪುನರ್ ವಿಂಗಡಣೆ ಅನೇಕ ಲೋಪದೋಷಗಳಿಂದ ಕೂಡಿದೆ. ಆಕ್ಷೇಪಣೆಯನ್ನು ಸಲ್ಲಿಸಲಾಗಿದೆ.
ಲೋಪದೋಷಗಳನ್ನು ಸರಿಪಡಿಸಬೇಕು. ದೋಷಪೂರಿತ ಜಿಪಂ ಮತ್ತುತಾಪಂ ಕ್ಷೇತ್ರ ಪುನರ್ ವಿಂಗಡಣೆಯಿಂದ ತಳಸಮುದಾಯದವರಿಗೆ ಅನ್ಯಾಯವಾಗಲಿದೆ. ಬಲಾಡ್ಯರಿಗೆಅನುಕೂಲವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 49 ಗ್ರಾಪಂ ಹೊಂದಿದ್ದು, ಗ್ರಾಪಂ ಮತ್ತು ಭೌಗೋಳಿಕ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಆದರೆ, ತಾಪಂ23ರಿಂದ 24 ಸಾವಿರ ಜನಸಂಖ್ಯೆ ಹಾಗೂ ಜಿಪಂ 30ಸಾವಿರ ಜನಸಂಖ್ಯೆ ಆಧಾರದ ಮೇಲೆ ವಿಂಗಡಣೆ ಮಾಡುವ ಮೂಲಕ ತಾರತಮ್ಯ ನೀತಿ ಅನುಸರಿಸಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಜೆಡಿಎಸ್‌ಮುಖಂಡರಾದ ಚಂದ್ರಪ್ಪ, ಯಗಟಿ ತಮ್ಮಯಣ್ಣ,ರಾಜಪ್ಪ, ಪ್ರೇಮ್‌ಕುಮಾರ್, ಗಂಗಾಧರಯ್ಯ, ಷಣ್ಮುಖಪ್ಪ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
Chikkamagaluru: ರೋಬೋಟಿಕ್ ಆನೆಯನ್ನು ಅರಣ್ಯ ಇಲಾಖೆಗೆ ಕೊಡುಗೆ ನೀಡಿದ ಬಾಲಿವುಡ್ ನಟಿ
Mundugaru:ನಕ್ಸಲ್ ಪೀಡಿತ ಪ್ರದೇಶದಲ್ಲಿ ಪೇಜಾವರ ಶ್ರೀಗಳ ಸಂಚಾರ; ಕಾಡಿನಲ್ಲಿ ರಾಮಮಂತ್ರ ಘೋಷ
Chikkamagaluru: ದತ್ತ ಜಯಂತಿ ಶೋಭಾಯಾತ್ರೆ ಆರಂಭ
MUST WATCH
ಹೊಸ ಸೇರ್ಪಡೆ
UK ಚೆವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ
Kaup: ಸಹಕಾರಿ ಧುರೀಣ ಬಾಲಂ ವಿಶ್ವನಾಥ್ ರಾವ್ ಪಣಿಯೂರು ನಿಧನ
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.