ಕೋವಿಡ್ ತಡೆಗೆ ಮಾರ್ಗಸೂಚಿ ಪಾಲಿಸಿ
Team Udayavani, Jul 17, 2020, 10:57 AM IST
ಅಜ್ಜಂಪುರ: ಕೋವಿಡ್-19 ತಡೆಗೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಪಪಂ ಮುಖ್ಯಾಧಿಕಾರಿ ಮಹಾಂತೇಶ್ ಮನವಿ ಮಾಡಿದ್ದಾರೆ. ಕೋವಿಡ್-19 ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಿಗದಿತ ಅಂತರ ಕಾಯ್ದುಕೊಳ್ಳಬೇಕು. ಅಂಗಡಿ, ಕಚೇರಿಗಳಲ್ಲಿ ಸ್ಯಾನಿಟೈಸರ್ ಬಳಸಬೇಕು ಎಂದು ತಿಳಿಸಿದರು.
ಮಾಸ್ಕ್ ಧರಿಸದೇ ನಿರ್ಲಕ್ಷಿದವರಿಗೆ ಹಾಗೂ ಅಂಗಡಿಗಳಲ್ಲಿ ಅಂತರ ಕಾಯ್ದುಕೊಳ್ಳದವರಿಗೆ ಪಪಂನವರು ತಲಾ 100 ರೂ. ದಂಡ ವಿಧಿಸಿದರು. ಪಂಚಾಯತ್‌ನ ಎರಡು ತಂಡಗಳು ಕೋವಿಡ್-19 ನಿಯಮ ಪಾಲಿಸದ ನೂರಕ್ಕೂ ಹೆಚ್ಚು ಜನರಿಂದ ದಂಡ ವಸೂಲಿ ಮಾಡಿದರು. 100 ಕಿಟ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೋವಿಡ್-19 ಪರೀಕ್ಷೆಗೆ ಬಳಸುವ 100 ಕಿಟ್ ನೀಡಲಾಗಿದೆ. ಅವಶ್ಯವೆನಿಸಿದರೆ ಮತ್ತಷ್ಟು ಕಿಟ್ ಕೊಡುವುದಾಗಿ ತರೀಕೆರೆ ಆರೋಗ್ಯಾಧಿಕಾರಿ ಡಾ| ಚಂದ್ರಶೇಖರ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.