ಪ.ಘಟ್ಟದಲ್ಲಿ ನಕ್ಸಲ್‌ ಚಟುವಟಿಕೆ ಹತೋಟಿಗೆ


Team Udayavani, Aug 18, 2017, 2:44 PM IST

18-CHIK-4.jpg

ಚಿಕ್ಕಮಗಳೂರು: ರಾಜ್ಯದ ಪಶ್ಚಿಮ ಘಟ್ಟದಲ್ಲಿ ನಕ್ಸಲರ ಚಟುವಟಿಕೆ ಕ್ಷೀಣಿಸುತ್ತಾ ಬರುತ್ತಿದೆ. ಕೆಲವು ಸಂದರ್ಭಗಳಲ್ಲಿ ಮಾತ್ರ ಅವರು ಕರಪತ್ರ ಹಂಚುವುದು ಅಥವಾ ಬ್ಯಾನರ್‌ ಕಟ್ಟುವುದನ್ನು ಮಾಡುತ್ತಿದ್ದಾರೆ. ಈ ಚಟುವಟಿಕೆಗಳ ಹೊರತು ಗುಂಪಾಗಿ ಕಾರ್ಯನಿರ್ವಹಿಸುವುದು ಕಂಡು ಬಂದಿಲ್ಲ ಎಂದು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಕ್ಸಲ್‌ ಚಟುವಟಿಕೆ ಇದ್ದ ಪ್ರದೇಶಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಪೊಲೀಸ್‌ ಇಲಾಖೆಯೂ ಸೇರಿದಂತೆ ಕಂದಾಯ, ವಿದ್ಯುತ್ಛಕ್ತಿ ಹಾಗೂ ಕಲ್ಯಾಣ ಕಾರ್ಯಕ್ರಮಗಳು ಆ ಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆಯನ್ನು ಕುಗ್ಗಿಸಲು ಕಾರಣವಾಗಿರುವ ಅಂಶ. ಇದರ ಜೊತೆಗೆ ಪ್ರಜಾಸತ್ತಾತ್ಮಕವಾಗಿ ಸೃಷ್ಟಿಯಾಗಿರುವ ಸಂಸ್ಥೆಗಳ ಕೊಡುಗೆಯೂ ಇದೆ. ಗ್ರಾಮ ಪಂಚಾಯತ್‌ನಿಂದ ಜಿಲ್ಲಾ ಪಂಚಾಯತ್‌ವರೆಗೆ ಹಲವು ರೀತಿಯಲ್ಲಿ ಆ ಪ್ರದೇಶದ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ಸಮಸ್ಯೆಗಳ ನಿವಾರಣೆ ಚುರುಕಾದಂತೆ ನಕ್ಸಲ್‌ ಚಟುವಟಿಕೆ ಕಡಿಮೆಯಾಗುತ್ತಾ ಬರುತ್ತಿದೆ. ಈ ಪ್ರದೇಶಗಳಲ್ಲಿ ಮೊದಲಿನಿಂದಲೂ ಅತ್ಯಂತ ಆಳವಾಗಿ ನಕ್ಸಲ್‌ ಚಟುವಟಿಕೆ ಬೇರೂರಿರಲಿಲ್ಲ. ಇತ್ತೀಚೆಗೆ ಕೇಂದ್ರಸರ್ಕಾರ ಸಹ ನಕ್ಸಲ್‌ ಚಟುವಟಿಕೆ ತೀವ್ರವಾಗಿರುವ ಪ್ರದೇಶಗಳಿಗೆ ಕೇಂದ್ರ ರಕ್ಷಣಾ
ಪಡೆಗಳನ್ನು ಕಳುಹಿಸಲು ಮುಂದಾಗಿದೆ. ಅಭಿವೃದ್ಧಿ, ಸಮಸ್ಯೆ ನಿವಾರಣೆಗಳಿಂದ ದೇಶದಲ್ಲೆ ನಕ್ಸಲ್‌ ಚಟುವಟಿಕೆ ಒಂದು ರೀತಿಯ ನಿಧಾನಗತಿಯ ಅವಸಾನವನ್ನು ಕಾಣುತ್ತಿದೆ ಎನ್ನಬಹುದೆಂದು ಹೇಳಿದರು. 

ಪೊಲೀಸ್‌ ಇಲಾಖೆಗೂ ಸಣ್ಣ ನಕ್ಸಲ್‌ ಗುಂಪಿನ ಕಾರ್ಯಕರ್ತರು ಅಲ್ಲಲ್ಲಿ ಓಡಾಡುತ್ತಿರುವ ಮಾಹಿತಿ ಬರುತ್ತದೆ. ಆ ತಕ್ಷಣವೇ ಆ ಬಗ್ಗೆ ಗಮನಹರಿಸಲಾಗುತ್ತಿದೆ. ನಕ್ಸಲ್‌ ಚಟುವಟಿಕೆ ಕ್ಷೀಣಗೊಂಡ ನಂತರವೂ ಅಷ್ಟೊಂದು ನಕ್ಸಲ್‌ ನಿಗ್ರಹಪಡೆ ಅಲ್ಲಿರುವುದು ಅಗತ್ಯವೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಇದು ಹೇಗೆಂದರೆ ಪೂರ್ಣ ನಕ್ಸಲ್‌ ನಿಗ್ರಹ ಪಡೆಯನ್ನು ಹಿಂದಕ್ಕೆ ತೆಗೆದುಕೊಂಡರೆ ಅಲ್ಲಿ ಮತ್ತೆ ನಕ್ಸಲರ ಚಟುವಟಿಕೆ ತೀವ್ರಗೊಳ್ಳಬಹುದು. ಹಾಗಾಗಿ ಕೆಲಸ ಕಡಿಮೆಯಾದಾಗ ಆ ನಕ್ಸಲ್‌ ನಿಗ್ರಹ ಪಡೆಗೆ ಬೇರೆ ಚಟುವಟಿಕೆಗಳನ್ನು ಅಲ್ಲೆ ನೀಡಿ ಅವರನ್ನು ಸದಾ ಕ್ರಿಯಾಶೀಲರಾಗಿರುವಂತೆ ಮಾಡಲಾಗುತ್ತಿದೆ ಎಂದರು. 

ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ  ಆಗಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಕಂದಾಯ, ಅರಣ್ಯ ಮತ್ತು ಮೆಸ್ಕಾಂ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿ ವರದಿಯನ್ನು ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಈಗಾಗಲೇ ವರದಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆಯಾಗಿದೆ. ವಿವರಗಳನ್ನು ಜಿಲ್ಲಾಧಿಕಾರಿಗಳಿಂದ ಪಡೆದುಕೊಳ್ಳಬಹುದೆಂದು ತಿಳಿಸಿದರು. ಜಿಲ್ಲೆಯಲ್ಲಿ ಕೆಲವು ಅಪರಾಧಗಳು ಇನ್ನೂ ಸಹ ತಾರ್ಕಿಕ ಅಂತ್ಯ ಕಂಡಿಲ್ಲವೆಂಬುದನ್ನು ಸುದ್ದಿಗಾರರು ಅವರ ಗಮನಕ್ಕೆ ತಂದಾಗ, ಮಣಪ್ಪುರಂ ಚಿನ್ನದ ಆಭರಣಗಳ ಕಳವು ಪ್ರಕರಣದಲ್ಲಿ ಸ್ವಲ್ಪ ಮಟ್ಟಿಗೆ ತನಿಖೆ ಇನ್ನೂ ಆಗಬೇಕಾಗಿದೆ. ಆದರೆ ಇದು ಅಷ್ಟು ಸುಲಭವಾಗಿಲ್ಲ. ಚಿನ್ನ ಕದ್ದವರು ಅದನ್ನು ಕರಗಿಸಿದ್ದಾರೆ. ಆ ಆಭರಣಗಳಲ್ಲಿ ಶೇ.60ರಷ್ಟು ಮಾತ್ರ ಚಿನ್ನವಿದೆ. ಅನೇಕ ಬಾರಿ ಇದೇ ಈ ಆರೋಪಿಗಳು ಕದ್ದ ಚಿನ್ನವೆಂದು ಸಾಬೀತು ಮಾಡಲು ಸಮಸ್ಯೆಯಾಗುತ್ತದೆ. ಆದರೂ ಸಹ ಇಲಾಖೆ ತನಿಖೆಯನ್ನು ಮುಂದುವರೆಸಿದೆ
ಎಂದು ನುಡಿದರು. ಶೃಂಗೇರಿ ವಿದ್ಯಾರ್ಥಿ ಅಭಿಜಿತ್‌ ಆತ್ಮಹತ್ಯೆ ಪ್ರಕರಣದಲ್ಲೂ ತನಿಖೆ ಮುಂದುವರೆದಿದೆ. ಬಹುಮುಖ್ಯವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಕೈಸೇರಿಲ್ಲ. ಇಡೀ ದೇಶಕ್ಕೆ ಹೈದರಾಬಾದ್‌ನ ಈ ಸಂಸ್ಥೆ ಮಾತ್ರ ಕೇಂದ್ರ ಸಂಸ್ಥೆಯಾಗಿದ್ದು, ಅಲ್ಲಿಂದ ಆದಷ್ಟು ಬೇಗ ವರದಿ ಪಡೆಯಲಾಗುತ್ತದೆ ಎಂದು ತಿಳಿಸಿದರು. ಹನಿಟ್ರಾಪ್‌ ಪ್ರಕರಣದಲ್ಲೂ ತನಿಖೆ ಮುಂದುವರೆದಿದ್ದರೆ, ಆನ್‌ ಲೈನ್‌ ವಂಚನೆ ಪ್ರಕರಣದಲ್ಲಿ ಪೊಲೀಸರು ಸಾಕಷ್ಟು ಶ್ರಮ ವಹಿಸಿ ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಬೇಕಾಗಿದೆ. ಈ
ಹಂತದಲ್ಲಿ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಚಿಕ್ಕಮಗಳೂರು ಬಂಧೀಖಾನೆ ಪರಿಸ್ಥಿತಿ ಬಗ್ಗೆ ಮಾತನಾಡಿ, ಈ ಜೈಲಿನಲ್ಲಿ ತೀರಾ ತೀವ್ರ ತರನಾದ ಅಪರಾಧಗಳನ್ನು ಮಾಡಿದ ಖೈದಿಗಳ ಗುಂಪಿಲ್ಲ. ಹಾಗಾಗಿ ಇಲ್ಲಿ ಮಾದಕ ವಸ್ತು ಮತ್ತು ಇನ್ನಿತರೆ ಕಾನೂನಿಗೆ ವಿರೋಧವಾದ ವಸ್ತುಗಳನ್ನು ಹೊಂದಿರುವ ಸಂಭವ ಕಡಿಮೆ. ಆದರೂ ಸಹ ನಾವು ಪರಿಶೀಲಿಸುತ್ತಿರುತ್ತೇವೆ. ಈ ಜೈಲಿನಲ್ಲಿ ಕನಿಷ್ಟ ಸೌಲಭ್ಯ ಗಳು ಮಾತ್ರ ಇದೆ. ಇಲ್ಲಿನ ವಾತಾವರಣ ಶೀತಮಯವಾಗಿರುವು ದರಿಂದ ಸ್ವಲ್ಪ  ಮಟ್ಟಿಗೆ ಖೈದಿಗಳು ಅಸ್ವಸ್ಥರಾಗುವುದು ಅಧಿಕ ಎಂದು ತಿಳಿಸಿದರು. 

ಪೊಲೀಸ್‌ ಇಲಾಖೆಯಲ್ಲೂ ಒತ್ತಡರಹಿತ ವ್ಯವಸ್ಥೆ ಜಾರಿಯಾಗಲಿ 
ಚಿಕ್ಕಮಗಳೂರು: ಅವರೂ ಸಹ ನಮ್ಮಂತೆಯೇ ಪೊಲೀಸರು. ಆದರೆ ಒತ್ತಡವಿಲ್ಲದೆ ಕೆಲಸ ಮಾಡುತ್ತಾರೆ. 8 ಗಂಟೆಗಳ ಕಾಲ ಪ್ರತಿನಿತ್ಯ ಕಾರ್ಯನಿರ್ವಹಿಸಿ ತೆರಳುತ್ತಾರೆ. ಹಾಗಾಗಿ ಗುಣಮಟ್ಟದ ಪೊಲೀಸ್‌  ಸೇವೆಯನ್ನು ಅಲ್ಲಿ ಕಾಣಬಹುದು ಎಂದು ಅಲ್ಲಿನ ಪೊಲೀಸ್‌ ವ್ಯವಸ್ಥೆ ಅಧ್ಯಯನ ಮಾಡಲು ಜರ್ಮನಿಗೆ ತೆರಳಿದ್ದ ಜಿಲ್ಲಾ ರಕ್ಷಣಾಧಿಕಾರಿ ಕೆ.ಅಣ್ಣಾಮಲೆ„ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಪೊಲೀಸ್‌ ವ್ಯವಸ್ಥೆಯಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡವಿದೆ. ಇಲ್ಲಿ ಹಲವು ಸಲ ಒಬ್ಬ ಪೊಲೀಸ್‌ ಸಿಬ್ಬಂದಿ 12 ರಿಂದ 13 ಗಂಟೆ ಕಾರ್ಯನಿರ್ವಹಿಸಬೇಕಾಗುತ್ತದೆ. ಅಷ್ಟೊಂದು ಸಮಯ ಕೆಲಸ ಮಾಡಿದರೂ ಸಾರ್ವಜನಿಕರಿಂದ
ಬೈಗುಳ ಹಾಗೂ ಟೀಕೆ ತಪ್ಪಿದ್ದಲ್ಲ. ಆದರೆ ಜರ್ಮನಿಯಲ್ಲಿ ಪೊಲೀಸರಿಗೆ ಈ ರೀತಿಯ ಒತ್ತಡವಿಲ್ಲ. ಕೆಲಸದ ಸಮಯ 8 ಗಂಟೆ ಮಾತ್ರ. ರಾಜಕಾರಣಿಗಳೆ ಪೊಲೀಸರನ್ನು ಆಯ್ಕೆ ಮಾಡಿದರೂ ಅವರು ಗುಣಮಟ್ಟದ ಸೇವೆ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಭಾರತೀಯ ಪೊಲೀಸ್‌ ವ್ಯವಸ್ಥೆಯಲ್ಲಿ ಹಲವು ರೀತಿಯ ಬದಲಾವಣೆಗಳಾಗಿವೆ. ಆದರೆ ಈ ಬದಲಾವಣೆಗಳು ಆಂತರಿಕ ಬದಲಾವಣೆಗೆ ದಾರಿ ತೆರೆದಿಲ್ಲ
ಅನ್ನಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ಪೊಲೀಸರಿಗೆ ಒತ್ತಡ ಕಡಿತಗೊಳಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸಬೇಕಾಗಿದೆ. ಆಂತರಿಕ ಬದಲಾವಣೆ ಬಹಳ ಮುಖ್ಯ. ಬಾಹ್ಯ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಪ್ರತಿಯೊಬ್ಬ ಪೊಲೀಸ್‌ ಅಧಿಕಾರಿ ಹಲವು ರೀತಿಯ ಸುಧಾರಣೆಗಳನ್ನು
ತರಲು ಪ್ರಯತ್ನಿಸಿದ್ದಾರೆ ಮತ್ತು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಆಂತರಿಕವಾದ ಬದಲಾವಣೆ ಇನ್ನೂ ಸಹ ಸಾಧ್ಯವಾಗಿಲ್ಲ ಎಂದು ಹೇಳಿದರು.

ಅತ್ಯಂತ ಸಮರ್ಥವಾಗಿ ಒತ್ತಡರಹಿತವಾಗಿ ಕೆಲಸ ಮಾಡುವ ವ್ಯವಸ್ಥೆ ಪೊಲೀಸ್‌ ಇಲಾಖೆಯಲ್ಲಿ ಸಾಮಾನ್ಯವಾಗಬೇಕು. ಆಗ ಅತ್ಯಂತ ಗುಣಮಟ್ಟದ ಸೇವೆಯನ್ನು ಪೊಲೀಸರಿಂದ ನಿರೀಕ್ಷಿಸಬಹುದು. ಈ ನಿಟ್ಟಿನಲ್ಲಿ ಚಿಂತನೆಗಳು ನಡೆದಿವೆ. ಅವುಗಳು ಆಂತರಿಕ ಬದಲಾವಣೆಗೆ ಪೂರಕವಾಗುವಂತೆ ಕೃತಿಗಿಳಿಸುವ ಕೆಲಸ ಆಗಬೇಕಾಗಿದೆ. ಭಾರತೀಯ ಪೊಲೀಸ್‌ ವ್ಯವಸ್ಥೆ ಉತ್ತಮವಾಗಿದೆ. ಆದರೆ ಹಲವು ಕಾರಣಗಳಿಂದ ಒತ್ತಡ ಹೆಚ್ಚಿದೆ. ಅದನ್ನು ಕಡಿಮೆಗೊಳಿಸುವ ದಾರಿಗಳನ್ನು ಇನ್ನಷ್ಟು ಕಂಡುಕೊಳ್ಳುವುದು ಅತ್ಯಂತ ಅಗತ್ಯ ಎಂದರು.

ಖಾಸಗಿ ಸಂಸ್ಥೆ ಸಹಕಾರ: ಜಿಲ್ಲಾ ಪೊಲೀಸರಲ್ಲಿ ಅವರನ್ನು ದೈಹಿಕವಾಗಿ ಕಾಡುವ ಹಲವು ಆತಂಕಗಳನ್ನು ನಿವಾರಿಸಲು ಆಲೋಚಿಸಲಾಗಿದೆ. ಪೊಲೀಸರಿಗೆ ಕಾಡುವ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್‌ ಹೆಚ್ಚಳ ಇವುಗಳನ್ನು ಕಡಿತಗೊಳಿಸಲು ಖಾಸಗಿಯಾಗಿ ವೆಲೆ°ಸ್‌ ಕಂಪನಿಯೊಂದರ ಸಹಕಾರವನ್ನು ಪಡೆಯಲು ಆಲೋಚಿಸಲಾಗಿದೆ. ಜೊತೆಗೆ ಧ್ಯಾನ, ಯೋಗ ಮತ್ತು ಆರೋಗ್ಯಕರ ಜೀವನಶೈಲಿ ಬಗ್ಗೆ ಸಹ ತರಬೇತಿ ನೀಡುವ ಆಲೋಚನೆಯೂ ಇದೆ ಎಂದು ಅಣ್ಣಾಮಲೈ ವಿವರಿಸಿದರು. 

ತಂಡಕ್ಕೆ ಬಹುಮಾನ: ಇತ್ತೀಚೆಗೆ ಜಾರ್ಖಂಡ್‌ ರಾಜ್ಯಕ್ಕೆ ತೆರಳಿ ಆನ್‌ ಲೈನ್‌ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದ ತಂಡವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದ ನಗರ ಠಾಣಾ ಪೊಲೀಸ್‌ ತಂಡಕ್ಕೆ ಎಸ್‌.ಪಿ. ಅಣ್ಣಾಮಲೈ ಬಹುಮಾನ ವಿತರಿಸಿದರು. ತಂಡದ ಪರವಾಗಿ  ನಗರ ಠಾಣಾ ಪಿಎಸ್‌ಐ ರಘು ಬಹುಮಾನ ಸ್ವೀಕರಿಸಿದರು. 

ಟಾಪ್ ನ್ಯೂಸ್

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

1-nxxxxx

Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ

Lokayukta

Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.