ಕನ್ನಡ ಕಲಾ ಸಂಘದ ಎದುರು ಕಸದ ರಾಶಿ!
Team Udayavani, Nov 1, 2021, 1:18 PM IST
ಕಡೂರು: ಕಡೂರಿನ ಸಾಂಸ್ಕೃತಿಕ ಹಾಗೂ ಕನ್ನಡ ನಾಡು ನುಡಿಯ ಅಭಿಮಾನದ ಪ್ರತೀಕವಾಗಿದ್ದ ಪಟ್ಟಣದ ಕನ್ನಡ ಕಲಾ ಸಂಘದಲ್ಲಿ ಯಾವುದೇ ಚಟುವಟಿಕೆಗಳಿಲ್ಲದೆ ಸ್ತಬ್ಧವಾಗಿದೆ.
ರಾಜ್ಯೋತ್ಸವದ ಮಾಸದಲ್ಲಿ ನೂರಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪಟ್ಟಣದ ಕಲಾಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದ ಕಲಾ ಸಂಘವು ಕಲಾವಿದರ ಕೊರತೆಯಿಂದ ನಿರ್ಲಕ್ಷ್ಯಕೊಳ್ಳಗಾಗಿದೆ.
ಸುಮಾರು 73 ವರ್ಷಗಳ ಹಿಂದೆ 1948 ರಲ್ಲಿ ಕಡೂರಿನ ಹಿರಿಯ ಕಲಾಸಕ್ತರೆಲ್ಲ ಸೇರಿ ಆರಂಭಿಸಿದ ಸಂಸ್ಥೆ ಕರ್ನಾಟಕ ಸಂಘ. ಪುರಸಭೆ ಪಟ್ಟಣದ ಕೋರ್ಟ್ ಬಳಿಯ ಒಂದು ಜಾಗವನ್ನು ಸಂಘಕ್ಕೆ ನೀಡಿತ್ತು. ಅಲ್ಲಿ ಚಿಕ್ಕ ಕಟ್ಟಡ ನಿರ್ಮಾಣ ಮಾಡಲು ಸಂಘದ ಸದಸ್ಯರು ನಿರ್ಧರಿಸಿದರು ಮೈಸೂರು ಸಂಸ್ಥಾನದ ಕಂದಾಯ ಸಚಿವ ಎಚ್. ಸಿದ್ದಯ್ಯ ಈ ಕಟ್ಟಡಕ್ಕೆ ಅಡಿಗಲ್ಲು ಹಾಕಿದರು. ಆಗಿನ ಕಾಲಕ್ಕೆ ದೊಡ್ಡದೇ ಎಂಬಂತಹ ಕಟ್ಟಡ ನಿರ್ಮಾಣವಾಯಿತು.
ಕರ್ನಾಟಕ ಸಂಘ ಸಾಹಿತ್ಯಕ, ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು ಕ್ರಿಯಾಶೀಲವಾಗಿತ್ತು. ಇಲ್ಲಿನಸದಸ್ಯರು ಸೇರಿ ಕನ್ನಡ ಕಲಾ ಸಂಘ ಹೆಸರಿನಲ್ಲಿ ನಾಟಕತಂಡವೊಂದನ್ನು ರಚಿಸಿಕೊಂಡು ನಾಟಕಗಳನ್ನುಪ್ರದರ್ಶಿಸುತ್ತಿದ್ದರು. ದೇವದಾಸಿ, ಎಚ್.ಎಂ. ನಾಯಕಮುಂತಾದ ನಾಟಕಗಳನ್ನು ಇದೇ ಸಂಘದ ಕಟ್ಟಡದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು. ನಂತರ ಮಿಡಲ್ ಸ್ಕೂಲ್‌ಮೈದಾನ ಅಥವಾ ಗಣಪತಿ ಪೆಂಡಾಲ್ ಮುಂತಾದ ಕಡೆನಾಟಕ ಪ್ರದರ್ಶನ ನೀಡುತ್ತಿದ್ದರು. ಅದೂ ಈಗಿನಂತೆವೈಭವದ ಸ್ಟೇಜ್‌ನಲ್ಲಿ ಅಲ್ಲ. ತೆಂಗಿನ ಗರಿಯ ಚಪ್ಪರವೇ ಸ್ಟೇಜ್. ಕಲಾವಿದರ ಮನೆಯಿಂದ ತಂದ ಬೆಡ್‌ಶೀಟ್ ಗಳೇ ಪರದೆಗಳಾಗಿರುತ್ತಿದ್ದವು. ಕನ್ನಡ ಕಲಾಸಂಘದ ನಾಟಕಗಳಿಗೆ ಬಹಳ ಪ್ರೋತ್ಸಾಹ ದೊರೆಯುತ್ತಿತ್ತು.
ಜನಮಿತ್ರ ನಾರಾಯಣ ಎಂಬ ಕಲಾವಿದರು ಪ್ರಮುಖ ಪಾತ್ರಧಾರಿಗಳಾಗಿದ್ದರು. ಬ್ಯಾಂಕ್ ರಾಮಕೃಷ್ಣಯ್ಯ ಮುಂತಾದವರು ಸಂಘ ಸಕ್ರಿಯವಾಗಿರಿಸುವಲ್ಲಿ ಸದಾ ಶ್ರಮಿಸುತ್ತಿದ್ದರು. 1980 ರ ತನಕವೂ ಸಂಘಸಕ್ರಿಯವಾಗಿತ್ತು. ಜಿ.ವಿ.ಮಂಜುನಾಥ ಸ್ವಾಮಿ, ಜಿ.ವಿ.ಶೇಷಣ್ಣ,ಎಸ್‌ಜಿಕೆ ಮೂರ್ತಿ ಮುಂತಾದವರು ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
80 ರ ದಶಕದಲ್ಲಿ ಸಂಘದ ಸದಸ್ಯರೇ ಸೇರಿ ಒಂದು ಆರ್ಕೆಸ್ಟ್ರಾ ತಂಡ ಕಟ್ಟಿದ್ದರು. ಕೆಲ ದಿನಗಳ ನಂತರ ಅದೂ ಸ್ಥಗಿತಗೊಂಡಿತು. ಕೆಲ ದಿನಗಳ ನಂತರ ಕೆ.ಎಂ. ಕೃಷ್ಣಮೂರ್ತಿ ಶಾಸಕರಾಗಿದ್ದಾಗ ಹಿರಿಯ ಪತ್ರಕರ್ತ ಎಚ್.ಎಸ್. ಸೂರ್ಯನಾರಾಯಣ ಮತ್ತು ಸಾಹಿತಿ ಅಜ್ಜಂಪುರ ಜಿ.ಸೂರಿ ಯವರಿಗೆ ಕಟ್ಟಡದಜವಾಬ್ದಾರಿ ವಹಿಸಲಾಗಿತ್ತು. ನಂತರದಲ್ಲಿ ಸಂಘದಕಟ್ಟಡ ನಿರುಪಯುಕ್ತ ಎನ್ನುವಂತಾಗಿದೆ. ಕನ್ನಡ ಕಲಾ ಸಂಘ ಪ್ರಸ್ತುತ ಅಸ್ತಿತ್ವದಲ್ಲಿ ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಈಚೆಗೆ ಕನ್ನಡ ಸಾಹಿತ್ಯಪರಿಷತ್‌ನ ಕೆಲ ಸದಸ್ಯರು ಕಲಾ ಸಂಘಕ್ಕೆ ಮರುಜೀವ ನೀಡಲೆತ್ನಿಸಿದ್ದರೂ ಅದು ಮುಂದುವರಿಯಲಿಲ್ಲ. ಆವರಣದ ತುಂಬ ಗಿಡಗಂಟಿಗಳು ಬೆಳೆದಿವೆ.
ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪಿ.ಕೆ. ರೇವಣ್ಣಯ್ಯ ಮತ್ತಿತರರು ನಡೆಸಿಕೊಂಡು ಬಂದಿದ್ದರು. ಕಳೆದ ಆರೇಳು ವರ್ಷಗಳಿಂದ ಕಲಾ ಸಂಘವು ಸದಸ್ಯರ ನಿರ್ಲಕ್ಷ್ಯದಿಂದ ಯಾವುದೇ ಚಟುವಟಿಕೆಗಳಿಲ್ಲದೆ ಸೊರಗುತ್ತಿದೆ. ರಾಜ್ಯೋತ್ಸವದ ಮಾಸವಾಗಿರುವ ಈತಿಂಗಳಲ್ಲಿ ಮತ್ತೆ ಮೈಕೊಡವಿಕೊಂಡು ಕಲಾ ಸಂಘವು ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾಣುವುದೇ ಎಂಬುದುಕಲಾಭಿಮಾನಿಗಳ ಆಶಯವಾಗಿದೆ. ಪಟ್ಟಣದ ಹೆಮ್ಮೆಯ ಕೇಂದ್ರವಾಗಬಹುದಾಗಿದ್ದ ಕನ್ನಡ ಕಲಾ ಸಂಘ ಮತ್ತೆ ಪುನರುಜ್ಜೀವನಗೊಂಡು ಕನ್ನಡದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂಬ ಹಾರೈಕೆ ಕಡೂರಿನವರದ್ದಾಗಿದೆ.
ನೂರಾರು ಹಿರಿಯ ಕಲಾವಿದರು ಸೇರಿ ಕಟ್ಟಿದ ಕಡೂರು ಕನ್ನಡ ಕಲಾ ಸಂಘವು ಕೇವಲ ಕೆಲವು ಪಟ್ಟಭದ್ರ ವ್ಯಕ್ತಿಗಳ ಕಪಿಮುಷ್ಠಿಯಿಂದ ಬಿಡುಗಡೆಗೊಂಡು ನಮಗೆಕಟ್ಟಡದ ಕೀ ನೀಡಿದರೆ ದಿನ ನಿತ್ಯ ಸಂಗೀತ,ವಾದ್ಯಗೋಷ್ಠಿಗಳ ಅಭ್ಯಾಸ ಮಾಡಲು ಹಾಗೂ ಸಾಂಸ್ಕೃತಿಕ ಚಟುವಟಿಕೆ ನಡೆಸಲು ತಾವು ಸಿದ್ಧರಾಗಿದ್ದೇವೆ. -ಹೊ.ರ.ಕೃಷ್ಣಕುಮಾರ್, ಚುಟುಕು ಕವಿ
-ಎ.ಜೆ.ಪ್ರಕಾಶಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ
Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.