ನಾಗರ ಹಾವನ್ನು ಬೆನ್ನಟ್ಟಿ ಬಂದ ಬೃಹತ್ ಕಾಳಿಂಗ ಸರ್ಪ ಸೆರೆ!
Team Udayavani, Nov 20, 2018, 4:46 PM IST
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಅಡಿಕೆ ಮರದ ಲಾಟಿನಲ್ಲಿ ಅಡಗಿದ್ದ 13 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.
ಚೈತ್ರಾ ಕುಮಾರ್ ಎನ್ನುವವರ ಮನೆಯಲ್ಲಿ ನಾಗರ ಹಾವನ್ನು ಬೆನ್ನಟ್ಟಿ ಬಂದ ಕಾಳಿಂಗ ಒಂದು ವಾರದಿಂದ ಮನೆಯ ಹತ್ತಿರದ ಅಡಿಕೆ ಲಾಟಿನಲ್ಲಿ ಅಡಗಿ ಕುಳಿತಿತ್ತು.
ಮನೆಯವರು ಸ್ಥಳೀಯ ಉರಗ ತಜ್ಞ ಹರೀಂದ್ರಗೆ ಕರೆ ಮಾಡಿ ಕಾಳಿಂಗ ಸರ್ಪ ಹಿಡಿಯುವಂತೆ ಮನವಿ ಮಾಡಿದ್ದರು.
ಸ್ಥಳಕ್ಕೆ ಆಗಮಿಸಿದ ಹರೀಂದ್ರ ಅವರು ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ನಂತರ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪಕ್ಷದ ಬಿಕ್ಕಟ್ಟು ಪರಿಹಾರ ಮಾಡಿ ಮೇಲೇಳುತ್ತೇವೆ: ಕೋಟ ಆಶಯ
Kota Srinivas Poojary: ಅಲೆಖಾನ್ ಹೊರಟ್ಟಿಯಲ್ಲಿ ಉಪಗ್ರಹ ಆಧಾರಿತ ದೂರ ಸಂಪರ್ಕ ಸೇವೆ
Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Kalasa: ವೈದ್ಯನ ಶರ್ಟ್ ಹರಿದು ಹಲ್ಲೆ… ತಡೆಯಲು ಬಂದ ಮಹಿಳಾ ಸಿಬ್ಬಂದಿ ಮೇಲೂ ಹಲ್ಲೆ ಯತ್ನ