ಆಡಳಿತ ಪಕ್ಷದ ಶಾಸಕರಿಗಿಂತ ಹೆಚ್ಚಿನ ಅನುದಾನ ತಂದಿರುವೆ


Team Udayavani, Aug 20, 2017, 5:40 PM IST

chikku.jpg

ಕಡೂರು: ಸರ್ಕಾರಗಳು ಯಾವುದೇ ಇದ್ದರೂ ಅನುದಾನಗಳನ್ನು ತರುವಲ್ಲಿ ಆಯಾಯ ಕ್ಷೇತ್ರದ ಶಾಸಕನ ಶ್ರಮ ಇರುತ್ತದೆ ಎಂದು ಶಾಸಕ ವೈ.ಎಸ್‌.ವಿ. ದತ್ತ ಹೇಳಿದರು. ತಾಲೂಕಿನ ಹರುವನಹಳ್ಳಿ ಸಮೀಪದಲ್ಲಿ 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸರ್ಕಾರಿ ಪಾಲಿಟೆಕ್ನಿಕ್‌ನ ನೂತನ ಕಾಲೇಜು ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅನುದಾನಗಳನ್ನು ತರುವಲ್ಲಿ ಭಗೀರಥ ಪ್ರಯತ್ನ ಮಾಡಬೇಕು. ಅದರಲ್ಲೂ ವಿರೋಧ ಪಕ್ಷದ
ಶಾಸಕನಾದರೆ ಇನ್ನೂ ಕಷ್ಟ. ತಾವು ವಿರೋಧ ಪಕ್ಷದ ಶಾಸಕನಾಗಿ ಆಡಳಿತರೂಢ ಕಾಂಗ್ರೆಸ್‌ ಸರ್ಕಾರದಿಂದ
ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ತಂದಿದ್ದೇನೆ ಎಂದರು. ಇದನ್ನು ಟೀಕೆ ಮಾಡುವ ಜನರು ತಾವೇ ಸರ್ಕಾರದ ಮೇಲೆ ಪ್ರಭಾವ ಬಳಸಿ ಅನುದಾನ ತರಲಿ. ಇತಂಹ ಕಾಮಗಾರಿಗಳಿಗೆ ತಮ್ಮ ಶ್ರಮದಿಂದಲೇ ಅನುದಾನ ಬಂದಿದೆ ಎಂದು ಘೋಷಿಸಲಿ. ಹೃದಯ ವೈಶಾಲ್ಯತೆ ಮೆರೆಯಲಿ ಎಂದು ಪರೋಕ್ಷವಾಗಿ ತಮ್ಮ ಟೀಕಕಾರರಿಗೆ ಚಾಟಿ ಬೀಸಿದರು. ಇಂದು ಭುಮಿ ಪೂಜೆಯಾಗುತ್ತಿರುವ ಸರ್ಕಾರ ಪಾಲಿಟೆಕ್ನಿಕ್‌ ಕೂಡ ವಿವಾದಾಸ್ಪದ ವಿಷಯವಾಗಿತ್ತು. ಇದರ ಮಂಜೂರಾತಿ ಬಿಜೆಪಿ ಸರ್ಕಾರವಿದ್ದಾಗ ಆಗಿದ್ದು. ಶಾಸಕ ಸಿ.ಟಿ. ರವಿ ಅವರ ಶ್ರಮ ಇದಕ್ಕೆ ಕಾರಣ. ನಂತರದ ದಿನಗಳಲ್ಲಿ ಅ ಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಹಿಂದಿನ ಸರ್ಕಾರದ ಮಂಜೂರಾತಿಗಳನ್ನು ಕಿತ್ತುಕೊಂಡರು. ಉತ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಅವರ ಮೇಲೆ ಒತ್ತಡ ತಂದು ತಾವು ಈ ಕಾಲೇಜನ್ನು ಮರು ಮಂಜೂರಾತಿ ಮಾಡಿಸಿದೆ. ಈ ಇಬ್ಬರನ್ನು ಸ್ಮರಿಸುತ್ತೇನೆ ಎಂದು ಹೇಳಿದರು. ಮಂಜೂರಾತಿ ನಂತರ ತಾವು ಈ ಕಾಲೇಜನ್ನು ಗ್ರಾಮೀಣ ಭಾಗದ ಚೌಳಹಿರಿಯೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು ನಿಜ. ಅಭಿವೃದ್ಧಿ ವಿಕೇಂದ್ರಿಕರಣ ಮತ್ತು ಗ್ರಾಮೀಣ ಜನರಿಗೆ ನಗರ ಮಟ್ಟದ ಸೌಲಭ್ಯ ಸಿಗಲಿ ಎಂಬುದು ತಮ್ಮ ಮಹದಾಸೆಯಾಗಿತ್ತು. ಆದರೆ ಅದಕ್ಕೆ ಕಾಂಗ್ರೆಸ್‌ ಪಕ್ಷದ ಮಾಜಿ ವಿಧಾನಪರಿಷತ್‌ ಸದಸ್ಯೆಯೊಬ್ಬರು ಅಡ್ಡಿಯಾದರೆಂದು ಟೀಕಿಸಿದರು. ಈ ಕಾಲೇಜಿಗಾಗಿ ಅರಣ್ಯ ಭೂಮಿಯನ್ನು
ಕಂದಾಯ ಭೂಮಿಯಾಗಿ ಪರಿವರ್ತಿಸಲು ಹೋರಾಡಿದ್ದೇನೆ. ಕಾಲೇಜು ಕಟ್ಟಲು ಮಾತ್ರ ಭೂಮಿಯನ್ನು ಬಳಸಿಕೊಂಡು ಉಳಿದ ಭಾಗವನ್ನು ಹರುವನಹಳ್ಳಿ ಗ್ರಾಮದ ಜನರ ಮೂಲಭೂತ ಅವಶ್ಯಕತೆಗಳಿಗಾಗಿ ಹಾಗೂ ರುದ್ರಭೂಮಿ ಸ್ಥಾಪಿಸಲು ತಾವು ಬದ್ದ ಎಂದರು. ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ವಿಶೇಷಾಧಿಕಾರಿ ಶೇಖರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಕಾಲೇಜಿನ ಕಟ್ಟಡಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದ್ದು ಇದಕ್ಕೆ ಶಾಸಕರು ಸಮ್ಮತಿಸಿದರು.  ಜಿಪಂ ಸದಸ್ಯೆ ಕಾವೇರಿ ಲಕ್ಕಪ್ಪ, ತಾಲೂಕು ಪಂಚಾಯತ್‌ ಅಧ್ಯಕ್ಷೆ ರೇಣುಕಾ ಉಮೇಶ್‌, ಸದಸ್ಯೆ ಸವಿತಾ ಆನಂದ್‌(ಡೆ„ರಿ), ತಂಗಲಿ ಗ್ರಾಪಂ ಅಧ್ಯಕ್ಷ ಟಿ.ಟಿ.ಶ್ರೀನಿವಾಸ್‌, ಚಿಕ್ಕಮಗಳೂರು ಪಾಲಿಟೆಕ್ನಿಕ್‌ ಪ್ರಾಂಶುಪಾಲ ಉಮಾಪತಿ, ಜೆಡಿಎಸ್‌ ಮುಖಂಡರಾದ ಭಂಡಾರಿ ಶ್ರೀನಿವಾಸ್‌, ಎಂ. ರಾಜಪ್ಪ ಮುಂತಾದವರು ಇದ್ದರು. 

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

1-nxxxxx

Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ

Lokayukta

Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.