ಗ್ರಾಪಂ ಚುನಾವಣೆಗೆ ಭರದ ಸಿದ್ಧತೆ


Team Udayavani, Dec 7, 2020, 7:20 PM IST

CM-TDY-1

ಸಾಂದರ್ಭಿಕ ಚಿತ್ರ

ಶೃಂಗೇರಿ: ತಾಲೂಕಿನಲ್ಲಿ ಡಿಸೆಂಬರ್‌ ಕೊನೆಯ ವಾರದಲ್ಲಿ ನಡೆಯಲಿರುವ ಗ್ರಾ.ಪಂ ಚುನಾವಣೆಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಿ ಚುನಾವಣಾ ಕಾವು ನಿಧಾನವಾಗಿ ಏರುತ್ತಿದೆ.

ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅಖಾಡ ಸಿದ್ಧಪಡಿಸುತ್ತಿದ್ದು, ಅಲ್ಲಲ್ಲಿ ಚುನಾವಣಾ ಪೂರ್ವಸಭೆಗಳನ್ನು ಆಯೋಜಿಸುತ್ತಿವೆ. ತಾಲೂಕಿನ 9 ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು, 26543 ಮತದಾರರು ಮತ ಚಲಾಯಿಸಲಿದ್ದಾರೆ. ಇದರಲ್ಲಿ ಪುರುಷ ಮತದಾರರು 13097 ಹಾಗೂ ಮಹಿಳಾ ಮತದಾರರು 13446 ಇದ್ದು, ಒಟ್ಟು 48 ಮತಗಟ್ಟೆಗಳಿದ್ದು 86 ಸ್ಥಾನಗಳಿಗಾಗಿಚುನಾವಣೆ ನಡೆಯಲಿದೆ. ತಾಲೂಕಿನಲ್ಲಿ ಅಡ್ಡಗದ್ದೆ,ಬೇಗಾರ್‌, ಧರೆಕೊಪ್ಪ, ಮರ್ಕಲ್‌, ಮೆಣಸೆ,

ವಿದ್ಯಾರಣ್ಯಪುರ, ನೆಮ್ಮಾರ್‌, ಕೆರೆ, ಕೂತಗೋಡು ಸೇರಿ ಒಟ್ಟು 9 ಗ್ರಾಪಂಗಳಿದ್ದು ಒಟ್ಟು 86 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ 46 ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಸಾಮಾನ್ಯ ಕ್ಷೇತ್ರದಲ್ಲಿ18 ಪ.ಜಾತಿ 12 ಸ್ಥಾನಗಳಲ್ಲಿ 9 ಪ.ಪಂಗಡದಲ್ಲಿ 11 ರಲ್ಲಿ 9, ಬಿಸಿಎಂ ಎ 15 ಸ್ಥಾನದಲ್ಲಿ 9, ಬಿಸಿಎಂ ಬಿ 3 ಸ್ಥಾನದಲ್ಲಿ 1 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ.ತಾಲೂಕಿನಲ್ಲಿ ವಿದ್ಯಾರಣ್ಯಪುರ ಗ್ರಾ.ಪಂ ಅತಿ ಹೆಚ್ಚು ಮತದಾರರನ್ನು ಹೊಂದಿದ್ದು, ಕೆರೆ ಅತಿಕಡಿಮೆ ಮತದಾರರನ್ನು ಹೊಂದಿದೆ. ಡಿ. 7 ರಿಂದಅಭ್ಯರ್ಥಿಗಳು ಆಯ ಗ್ರಾ.ಪಂ ಕಚೇರಿಯಲ್ಲಿಸಲ್ಲಿಸಬಹುದಾಗಿದ್ದು, ಡಿ. 11 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ.

ಕಳೆದ ಗ್ರಾ.ಪಂ ಚುನಾವಣೆಯಲ್ಲಿ 9 ಗ್ರಾ.ಪಂನಲ್ಲಿ 5 ರಲ್ಲಿ ಬಿಜೆಪಿ ಮತ್ತು 4 ರಲ್ಲಿ ಕಾಂಗ್ರೆಸ್‌ ಬೆಂಬಲಿತರು ಆಡಳಿತ ಚುಕಾಣಿ ಹಿಡಿದಿದ್ದರು. ಈ ಬಾರಿಯೂಬಹುತೇಕ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ನಡೆಯಲಿದೆ. ಆದರೆ ತಾಲೂಕಿನಲ್ಲಿ ರೈತರು ಅಡಿಕೆ ಕೊಯ್ಲು ನಿರ್ವಹಣೆಯಲ್ಲಿ ತೊಡಗಿದ್ದು, ಇದರೊಂದಿಗೆ ಗದ್ದೆ ಕೊಯ್ಲು ಕೂಡ ಅಲ್ಲಲ್ಲಿ ಪ್ರಾರಂಭವಾಗಿದೆ. ಒಂದೆಡೆ ಚಂಡಮಾರುತದ ಹಾವಳಿಯಿಂದಾಗಿ ಮಳೆಯ ಭೀತಿ, ಅಡಿಕೆ ಗದ್ದೆ ಹಾಗೂ ಕಾμ ಕೊಯ್ಲುಒಟ್ಟೊಟ್ಟಿಗೆ ಬಂದಿರುವುದರಿಂದ ಕಾರ್ಮಿಕರ ಸಮಸ್ಯೆ ಎದುರಿಸುತ್ತಿದ್ದು, ಮತ್ತೂಂದೆಡೆ ಚುನಾವಣಾ ತಯಾರಿ ಒಟ್ಟಾರೆ ಗ್ರಾ.ಪಂ ಚುನಾವಣೆಗೆ ತಾಲೂಕು ಆಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ತಾಲೂಕು ಸಣ್ಣದಾಗಿದ್ದರೂ ಇಲ್ಲಿನ ಸಮಸ್ಯೆ ಮಾತ್ರ ಬೃಹದಾಕಾರವಾಗಿದೆ. ಕಸ್ತೂರಿ ರಂಗನ್‌ ವರದಿ ಪ್ರಕಾರ ತಾಲೂಕಿನ ಒಟ್ಟು 49 ಕಂದಾಯ ಗ್ರಾಮಗಳಲ್ಲಿ 26 ಗ್ರಾಮಗಳು ಸೇರಿದ್ದು, ಇದರೊಂದಿಗೆ ಹುಲಿ ಯೋಜನೆಯು ಮಾರಕವಾಗಿ ಪರಿಣಮಿಸಿರುವುದರಿಂದ ಜನ ಹೈರಾಣಾಗಿದ್ದಾರೆ.

ಹಲವು ಗ್ರಾಮದಲ್ಲಿ ಮೂಲ ಸೌಕರ್ಯದ ಕೊರತೆ, ಕುಡಿಯುವ ನೀರು, ರಸ್ತೆ, ಸೇತುವೆ ಹಾಗೂ ಕೆಲವು ಭಾಗಗಳಲ್ಲಿ ದೊಡ್ಡ ದೊಡ್ಡ ಹಳ್ಳಗಳಿಗೆ ಈಗಲೂಕಾಲುಸಂಕದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯ  ಸ್ಥಿತಿ. ವಸತಿ ಯೋಜನೆಗೆ ಕೆಲವು ಗ್ರಾಪಂನಲ್ಲಿ ಜಾಗ ಗುರುತಿಸಲ್ಪಟ್ಟಿದ್ದರು ಮೀಸಲು ಅರಣ್ಯ ಘೋಷಣೆ, ಸೊಪ್ಪಿನಬೆಟ್ಟ ಇತ್ಯಾದಿ ಕಾರಣಗಳಿಂದ ನನೆಗುದಿಗೆ ಬಿದ್ದಿದೆ.

ಒಟ್ಟಾರೆ ಗ್ರಾಮೀಣ ಭಾಗದ ಜನರ ಪಾಲಿಗೆ ಸಂಕಷ್ಟಗಳೇ ಜಾಸ್ತಿಯಾಗಿದೆ. ಸೌಲಭ್ಯ ವಂಚಿತ ಗ್ರಾಮಸ್ಥರು ಇದೇ ಸಂದರ್ಭ ಬಳಸಿಕೊಂಡು ಸ್ಪರ್ಧಾಳುಗಳಲ್ಲಿ ಸವಲತ್ತು ಕೇಳುವ ತವಕದಲ್ಲಿದ್ದಾರೆ. ಸ್ಪರ್ಧಾಳುಗಳು ಸವಲತ್ತಿನ ಸವಾಲನ್ನು ಎದುರಿಸಬೇಕಿದೆ. ಕಳೆದ ಎರಡು ವರ್ಷಗಳಿಂದ ದಾಖಲೆ ಪ್ರಮಾಣದಲ್ಲಿ ತಾಲೂಕಿನಲ್ಲಿ ಅತಿವೃಷ್ಟಿಯಾಗಿದ್ದು, ಇದರ ಪರಿಣಾಮ ಜಮೀನು,

ಮನೆ ಕಳೆದುಕೊಂಡು ಸಂತ್ರಸ್ತರಾದವರು ಕೂಡ ಸ್ಪರ್ಧಾಳುಗಳಲ್ಲಿ ಬೇಡಿಕೆ ಇರಿಸಲು ಕಾಯುತ್ತಿದ್ದಾರೆ. ಗ್ರಾ.ಪಂ ಚುನಾವಣೆಯಲ್ಲಿ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಬೇಕಿದೆ. ರಾಜಕೀಯ ಪಕ್ಷದ ಚಿಹ್ನೆ ಬಳಸಲು ಅವಕಾಶವಿಲ್ಲದಿದ್ದರು ಪಕ್ಷಗಳು ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಿ ಗ್ರಾಪಂ ಆಡಳಿತವನ್ನು ತೆಕ್ಕೆಗೆ ಪಡೆಯುವಲ್ಲಿ ಹವಣಿಸುತ್ತಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಜೆಪಿ ಆಡಳಿತದಲ್ಲೆ ಇರುವುದರಿಂದ ಜನರ ಸಮಸ್ಯೆಗಳನ್ನು ಪರಿಹರಿಸಲು ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಆಡಳಿತಕ್ಕೆ ಬಂದರೆ ಸಹಾಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಅನೇಕ ಜನಪರ ಯೋಜನೆಗಳಿಂದ ಜನರು ಬಿಜೆಪಿ ಪರ ಇದ್ದಾರೆಂಬುದು ಈಗಾಗಲೇ ಸಾಬೀತಾಗಿದೆ.  ತಲಗಾರು ಉಮೇಶ್‌, ಬಿಜೆಪಿ ಅಧ್ಯಕ್ಷರು.

ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಜನರು ಸ್ಥಳೀಯ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ ಪಕ್ಷದ ಪರವಾಗಿ ಇದ್ದಾರೆ. ಶಾಸಕ ಟಿ.ಡಿ. ರಾಜೇಗೌಡ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ.  –ನಟರಾಜ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಈ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಜನರಿಗೆ ಮನವರಿಕೆ ಮಾಡಿಕೊಟ್ಟು ಗ್ರಾ.ಪಂ ಚುನಾವಣೆ ಎದುರಿಸಲಿದ್ದೇವೆ. ಟಿ.ಟಿ ಕಳಸಪ್ಪ, ಜೆಡಿಎಸ್‌ ಅಧ್ಯಕ್ಷರು

 

-ರಮೇಶ್‌ ಕರುವಾನೆ

ಟಾಪ್ ನ್ಯೂಸ್

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-ckm

Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi

ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ

12-

Chikkamagaluru: ನಕ್ಸಲರ ಶರಣಾಗತಿಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮಟೆ ಮನವಿ

Chikkamagaluru: ನಕ್ಸಲ್‌ ಆರೋಪಿತರ ಪ್ರಕರಣ ಖುಲಾಸೆ

Chikkamagaluru: ನಕ್ಸಲ್‌ ಆರೋಪಿತರ ಪ್ರಕರಣ ಖುಲಾಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

Sheikh Hasina ಹಸ್ತಾಂತರಕ್ಕೆ ಬಾಂಗ್ಲಾದೇಶ ಮನವಿ ಸತ್ಯ: ಕೇಂದ್ರ ಸರಕಾರ‌

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

ಚಾತುರ್ವರ್ಣ ವ್ಯವಸ್ಥೆಗೂ ಸನಾತನ ಧರ್ಮಕ್ಕೂ ನಂಟು ಇಲ್ಲ: ಶಿವಗಿರಿ ಸ್ವಾಮಿ

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.