ಹಾಲು ವಿತರಣೆಗಾಗಿ ಅಧಿಕಾರಿಗಳು-ಸದಸ್ಯರ ತಿಕ್ಕಾಟ
Team Udayavani, Apr 7, 2020, 4:23 PM IST
ಹರಿಹರ: ಹಾಲು ವಿತರಣೆ ಕುರಿತು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಗರಸಭೆ ಸದಸ್ಯರ ಸಭೆ ನಡೆಯಿತು
ಹರಿಹರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯ ಬಡವರು, ನಿರ್ಗತಿಕರಿಗೆ ಉಚಿತ ಹಾಲು ವಿತರಿಸುವ ಸರ್ಕಾರದ ಯೋಜನೆ ಕುರಿತ ಗೊಂದಲದಿಂದ ಇಲ್ಲಿನ ನಗರಸಭೆಯ ಅಧಿಕಾರಿಗಳು ಮತ್ತು ಸದಸ್ಯರ ಮಧ್ಯೆ ತಿಕ್ಕಾಟ ಆರಂಭವಾಗಿದೆ.
ಸರ್ಕಾರದ ನಿರ್ಧಾರದಂತೆ ನಗರದಲ್ಲೂ ಶನಿವಾರದಿಂದ ಹಾಲು ವಿತರಣೆ ಆರಂಭವಾಗಿದ್ದು, ಆದರೆ ಉಚಿತ ಹಾಲು ವಿತರಣೆಗೆ ಅರ್ಹ ಕುಟುಂಬಗಳು ಯಾವಾವು ಎಂಬ ಬಗ್ಗೆ ಅಧಿಕಾರಿಗಳಲ್ಲೂ ಸ್ಪಷ್ಟತೆ ಇಲ್ಲದ್ದರಿಂದ ಗೊಂದಲ ಉಂಟಾಗಿದೆ. ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ನಗರಸಭೆ ಸದಸ್ಯರು ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ಬಡ ಜನರಿಗೆ ಉಚಿತ ಹಾಲು ನೀಡುವುದಾಗಿ ಸರ್ಕಾರ ಘೋಷಿಸಿದೆ. ಅದರಂತೆ ಹಾಲು ಪೂರೈಸಿ ಎಂದು ಪೌರಾಯುಕ್ತರಿಗೆ ಒತ್ತಾಯಿಸಿದರು.
ಸದಸ್ಯ ಶಂಕರ್ ಖಟಾವಕರ್ ಮಾತನಾಡಿ, ನಗರದ ಕೊಳಚೆ ಪ್ರದೇಶದ ನಿವಾಸಿಗಳ ಸಂಖ್ಯೆಗೆ ತಕ್ಕಷ್ಟು ಹಾಲು ವಿತರಿಸುತ್ತಿಲ್ಲ. ಮೊದಲೆರಡು ದಿನ ತಲಾ 1 ಲೀ. ಹಾಲು ನೀಡಿ, ಸೋಮವಾರ ಕೇವಲ ಅರ್ಧ ಲೀ. ಹಾಲು ಮಾತ್ರ ಲಭ್ಯವಿದೆ ಎನ್ನಲಾಗುತ್ತಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ಎಸ್.ಲಕ್ಷ್ಮೀ, ಈಗಾಗಲೆ ದಾಖಲಾಗಿರುವ ಕೊಳಚೆ ಕುಟುಂಬಗಳ ಸಂಖ್ಯೆಗೆ ತಕ್ಕಷ್ಟು ಹಾಲು ಪೂರೈಕೆಯಾಗಿದೆ. ಹೆಚ್ಚುವರಿ ಕುಟುಂಬಗಳ ಮಾಹಿತಿಯನ್ನೂ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದು, ಅದಕ್ಕೆ ತಕ್ಕಂತೆ ಪೂರೈಕೆಯಾಗುವವರೆಗೆ ಎಲ್ಲರಿಗೂ ದೊರೆಯಲಿ ಎಂದು ಅರ್ಧ ಲೀ. ಹಾಲು ನೀಡಲಾಗುತ್ತಿದೆ ಎಂದರು. ಆದರೆ ಇದಕ್ಕೆ ಒಪ್ಪದ ಸದಸ್ಯರು ಸರ್ಕಾರ ಘೋಷಿಸಿದಂತೆ ಎಲ್ಲಾ ಅರ್ಹ ಕುಟುಂಬಗಳಿಗೆ 1 ಲೀಟರ್ ಹಾಲು ನೀಡುವುದಾದರೆ ನೀಡಿ, ಇಲ್ಲದಿದ್ದರೆ ಯಾರಿಗೂ ಹಾಲು ವಿತರಿಸುವುದು ಬೇಡ ಎಂದು ಪಟ್ಟು ಹಿಡಿದರು. ಈ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ತಿಳಿಸುವುದಾಗಿ ಹೇಳಿ ಪೌರಾಯುಕ್ತರು ಸಭೆ ಮುಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.