ಮಳೆಗೆ ಮುಳುಗಿದ ಹೆಬ್ಟಾಳೆ ಸೇತುವೆ: ಸಂಚಾರ ಸ್ಥಗಿತ
Team Udayavani, Jun 12, 2018, 3:22 PM IST
ಮೂಡಿಗೆರೆ: ತಾಲೂಕಿನ ಕಳಸ ಹೋಬಳಿಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು,
ಸೋಮವಾರ ಭದ್ರಾ ನದಿಯು ಗರಿಷ್ಠ ಪ್ರಮಾಣದಲ್ಲಿ ತುಂಬಿ ಹರಿಯಲಾರಂಭಿಸಿದೆ.
ಕುದುರೆಮುಖ, ಜಾಂಬ್ಲೆ, ನೆಲ್ಲಿಬೀಡು ಪ್ರದೇಶಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ನದಿ, ಹಳ್ಳ, ತೊರೆಗಳು
ಮೈದುಂಬಿ ಹರಿಯುತ್ತಿವೆ. ಭದ್ರಾ ನದಿಯು ತುಂಬಿ ಹರಿಯುತ್ತಿರುವ ಪರಿಣಾಮ ಕಳಸ ಸಮೀಪದ ಹೆಬ್ಟಾಳೆ
ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತು. ಇದರಿಂದ ಹೊರನಾಡು, ಬಲಿಗೆ, ಚಿಕ್ಕನಕುಡಿಗೆ, ಮಾವಿನಹೊಲ, ಮಣ್ಣಿನಪಾಲ್ ಕಡೆ ಹೋಗುವ ಗ್ರಾಮಸ್ಥರು ತೊಂದರೆ ಅನುಭವಿಸಿದರು.
ಹೊರನಾಡಿಗೆ ಬಂದ ಪ್ರವಾಸಿಗರು ಒಂದೆರಡು ಗಂಟೆ ಸೇತುವೆ ಬುಡದಲ್ಲಿ ಕಾಯುವಂತಾಯಿತು. ಕೆಲ ಪ್ರಯಾಣಿಕರು ಹೊರನಾಡಿಗೆ ಹೋಗುವ ಬದಲಿ ಮಾರ್ಗದಲ್ಲಿ ತೆರಳಿದರು.
ಸಂಸೆಯ ಸೋಮಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಸಂಸೆ ಮುಖ್ಯ ರಸ್ತೆಯಲ್ಲಿ ಸಮರ್ಪಕ ಚರಂಡಿಯ ವ್ಯವಸ್ಥೆ ಇಲ್ಲದೆ ಮೂರು ಮನೆಗಳಿಗೆ ನೀರು ನುಗ್ಗಿದೆ. ಮುಖ್ಯ ರಸ್ತೆಯಲ್ಲಿ ಒಂದೆರಡು ಅಡಿಗಳಷ್ಟು ನೀರು ತುಂಬಿ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಹುಚ್ಚು ಸಾಹಸ ಮೆರೆದ ಪ್ರಯಾಣಿಕರು: ಕಳಸ-ಹೊರನಾಡು ಸಂಪರ್ಕ ಹೆಬ್ಟಾಳೆ ಸೇತುವೆ ಮುಳುಗಡೆಯಾಗುತ್ತಿದ್ದಂತೆ ಪ್ರವಾಸಿಗರು, ಖಾಸಗಿ ಬಸ್, ಸರ್ಕಾರಿ ಬಸ್ ಇತರೆ ವಾಹನಗಳು ಸೇತುವೆ ದಾಟಿಸಿ
ಹುಚ್ಚು ಸಾಹಸ ಮೆರೆದರು. ಸೇತುವೆಯಿಂದ ಸುಮಾರು ಒಂದೂವರೆ ಅಡಿಗಳಷ್ಟು ಎತ್ತರದಲ್ಲಿ ರಭಸವಾಗಿ
ನೀರು ಹರಿಯುತ್ತಿದ್ದರೂ ಕೂಡ ಪ್ರಯಾಣಿಕರೊಂದಿಗೆ ಸೇತುವೆಯ ಮೇಲೆ ವಾಹನ ದಾಟಿಸಿದರು. ಸ್ಥಳೀಯರು
ಇಂತಹ ಅಪಾಯಕಾರಿ ಸೇತುವೆಯ ಮೇಲೆ ವಾಹನ ದಾಟಿಸಬೇಡಿ ಎಂದು ಹೇಳಿದರೂ ಕೂಡ ಪ್ರವಾಸಿಗರು
ಸ್ಥಳಿಯರ ಮಾತಿಗೆ ಬೆಲೆ ನೀಡಲಿಲ್ಲ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.