ಸಣ್ಣ ಕಾಫಿ ಬೆಳೆಗಾರರ ಕುಟುಂಬಕ್ಕೆ ಸಹಾಯಧನ ವಿತರಣೆ
Team Udayavani, Sep 16, 2020, 7:09 PM IST
ಚಿಕ್ಕಮಗಳೂರು: ಮಸಗಲಿ ಗ್ರಾಮದಸುತ್ತಮುತ್ತ ಸಣ್ಣ ಕಾಫಿ ಬೆಳೆಗಾರರು ಜೀವನೋಪಾಯಕ್ಕಾಗಿ ಬೆಳೆಸಿದ್ದತೋಟವನ್ನು ಅರಣ್ಯ ಇಲಾಖೆಯವರ ದೌರ್ಜನ್ಯದಿಂದ ನಾಶ ಮಾಡಿದ್ದು ಕಾಫಿ ಗಿಡಗಳು ನಾಶವಾಗಿರುವ ಕುಟುಂಬಕ್ಕೆ ಜಿಲ್ಲಾ ಯುವ ಜನತಾದಳದಿಂದ ಸಹಾಯಧನ ನೀಡಲಾಯಿತು.
ಜೆಡಿಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಮಾತನಾಡಿ, ಮಸಗಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅರಣ್ಯಾಧಿ ಕಾರಿಗಳ ದೌರ್ಜನ್ಯದಿಂದ ಹೊಟ್ಟೆಪಾಡಿಗಾಗಿ ಜೀವನ ಸಾಗಿಸುತ್ತಿರುವ ಕಡು ಬಡವರ ಕಾಫಿ ತೋಟಗಳನ್ನು ನಾಶಮಾಡಿರುವುದು ಅತ್ಯಂತ ಖಂಡನೀಯ. ತಮ್ಮ ಪತಿ ಹಾಗೂ ತೋಟವನ್ನು ಕಳೆದುಕೊಂಡ ಗ್ರಾಮದ ವಿಜಯಮ್ಮ, ಲಲಿತಮ್ಮ ಹಾಗೂ ದೇವಕಮ್ಮ ಕುಟುಂಬದವರಿಗೆ ಜಿಲ್ಲಾ ಯುವಜನತಾದಳ ವತಿಯಿಂದ ತಲಾ 10 ಸಾವಿರ ರೂ. ಸಹಾಯಧನ ನೀಡಿ ಮಾನವೀಯತೆ ಮರೆದಿದ್ದು,ಸಾಕಷ್ಟು ಸಮಾಜಮುಖೀ ಕೆಲಸವನ್ನು ಮಾಡಿಕೊಂಡು ಬಂದಿರುವಯುವಜನತಾದಳ ಕಾರ್ಯಕರ್ತರನ್ನು ಶ್ಲಾಘಿಸಿದರು.
ಈ ಹಿಂದೆ ಜೆಡಿಎಸ್ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಭಾಗದ ಒತ್ತುವರಿ ಮಾಡಿರುವ 211 ಕುಟುಂಬವನ್ನು ಕೂಡಾ ನಿರಾಶ್ರಿತರೆಂದು ಪರಿಗಣಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಬೇಕೆಂದುಒತ್ತಾಯಿಸಲಾಗಿತ್ತು ಎಂದರು. ಯುವಜನತಾದಳದ ಜಿಲ್ಲಾಧ್ಯಕ್ಷ ವಿನಯ್ ಮಾತನಾಡಿ, ಸಣ್ಣ ಸಹಾಯಧನ ನೀಡಿದ್ದು ಅವರ ದಿನನಿತ್ಯ ಉಪಯೋಗಕ್ಕೆ ಬಳಕೆಯಾಗಲಿದೆ ಎಂದು ಅವರು, ಇಂತಹ ಕಷ್ಟದ ಸಮಯದಲ್ಲಿರುವ ಕುಟುಂಬಕ್ಕೆ ಯುವಜನತಾದಳ ವತಿಯಿಂದ ಸಹಾಯಕ್ಕೆ ಸದಾ ಸಿದ್ಧವಿದೆ ಎಂದು ತಿಳಿಸಿದರು.
ಒತ್ತುವರಿ ಸಮಿತಿ ಅಧ್ಯಕ್ಷರಾದ ಎಂ.ಎಲ್. ಬಸವರಾಜ, ಯುವಜನತಾ ದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಆರ್. ಕುಶ, ಮುಖಂಡರಾದ ಆಶ್ರಯ್, ಶಶಿಧರ್, ಮಲ್ಲಂದೂರು ಕುಮಾರ್, ಸಂದೇಶ್, ಶಂಕರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.