ವಿಗ್ರಹ ಕಳವು ಪ್ರಕರಣ: ಮೂವರ ಬಂಧನ
Team Udayavani, Dec 13, 2017, 2:47 PM IST
ಮೂಡಿಗೆರೆ: ಸುಂಕಸಾಲೆ ಗ್ರಾ.ಪಂ.ವ್ಯಾಪ್ತಿಯ ಪುರಾತನ ಐತಿಹಾಸಿಕ ದುರ್ಗದಹಳ್ಳಿಯ ಶ್ರೀಕಾಲಬೈರವೇಶ್ವರ ದೇವಸ್ಥಾನದಲ್ಲಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ದೇವಸ್ಥಾನದ ವಿಗ್ರಹ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮೂವರನ್ನು ಬಂಧಿಸುವಲ್ಲಿ ಬಾಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾಗಡಿ ಸಮೀಪದ ದೊಡ್ಡ ಸೋಮನಹಳ್ಳಿಯ ಗಿರೀಶ್ ಆಲಿಯಾಸ್ ಗಿರಿ ಮಲ್ಲತಹಳ್ಳಿಯ ವೆಂಕಟಾಚಲ ಆಲಿಯಾಸ್ ವೆಂಕಟೇಶ್, ನಾಗರಭಾವಿಯ ಮನೋಜ್ ಆಲಿಯಾಸ್ ಮನು, ಬಂಧಿತ ಆರೋಪಿಗಳು. ಪುರಾಣಪ್ರಸಿದ್ಧ ಗುರಾಣಿ, ಪಂಜುರ್ಲಿ ಮತ್ತು
ದೇವರ ವಿಗ್ರಹವನ್ನು ಮೊದಲ ಬಾರಿಗೆ ಕಳವು ಮಾಡಿದ ಕಳ್ಳರು ಯಾವುದೇ ಸಾಕ್ಷ ಬಿಡದೆ ಪರಾರಿಯಾಗಿದ್ದರು.ಬಾಳೂರು ಪೊಲೀಸರಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅದರ ನಂತರ ಕೆಲವೇ ದಿನಗಳಲ್ಲಿ ಮತ್ತೆ ಎರಡನೇ ಬಾರಿಗೆ
ದೇವಸ್ಥಾನದ ಕಳಶವನ್ನು ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಬಾಳೂರು ಪೊಲೀಸರು ಎರಡನೇ ಬಾರಿಯ ಕಳವು ಜಾಡನ್ನು ಹಿಡಿದು ದೇವಸ್ಥಾನದಲ್ಲಿ ತೀವ್ರ ಶೋಧ ನಡೆಸಿದಾಗ ವಾಹನದ ವೀಲ್ ಅಲೈಮೆಂಟ್ ಮಾಡಿದ್ದ ಬೆಂಗಳೂರಿನ ಗ್ಯಾರೇಜ್
ಒಂದರ ಚೀಟಿಯೊಂದು ಸಿಕ್ಕಿತ್ತು. ಇದರ ಆಧಾರದ ಮೇಲೆ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ಪೊಲೀಸರು ಬೆಂಗಳೂರಿಗೆ ತೆರಳಿ ಅವರಿಂದ ಕಳವು ಮಾಡಿದ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದು ದೇವಸ್ಥಾನದ ಕಳಶ ಮಾತ್ರ ಪತ್ತೆಯಾಗಿಲ್ಲ. ಪೊಲೀಸರ ವಿಚಾರಣೆ ವೇಳೆ ಕಲಶವನ್ನು ಶ್ರೀರಂಗಪಟ್ಟಣದ ಸಮೀಪದ ಕಾವೇರಿ ನದಿಗೆ ಎಸೆದಿದ್ದಾಗಿ ಹೇಳಿದ್ದಾರೆ. ಅಲ್ಲಿ ಅದರ ಶೋಧ ಕಾರ್ಯವನ್ನು ನಡೆಸಿದರೂ ಪ್ರಯೋಜನವಾಗಿರುವುದಿಲ್ಲ. ಸ್ಥಳೀಯ ಪೊಲೀಸರ ಸಹಾಯ ಕೋರಿದ್ದು ಅದರ ಶೋಧಕಾರ್ಯ
ಮುಂದುವರಿದಿದೆ.
ಕಾರ್ಯಚರಣೆಯಲ್ಲಿ ಬಾಳೂರು ಪಿಎಸೆ„ ಮಂಜಯ್ಯ, ದಫೇದಾರ್ ರವೀಂದ್ರ, ಇಮಿ¤ಯಾಜ್, ಸಿಬ್ಬಂದಿಗಳಾದ ಜಾಫರ್, ಗಿರೀಶ್, ದೇವರಾಜ್, ವೈಭವ್,ಅನ್ವರ್ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.