ಮರಳು ಸಾಗಾಟಕ್ಕೆ ಅಕ್ರಮ ಲೈಸೆನ್ಸ್
Team Udayavani, Mar 1, 2018, 6:00 AM IST
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಳಸಬೇಕಿದ್ದ ಮರಳು ಪರವಾನಗಿಯನ್ನು ಕರಾವಳಿ ಜಿಲ್ಲೆಗಳಲ್ಲಿ ಬಳಕೆಗೆ ಮಾರಾಟ ಮಾಡಿ ಕೋಟ್ಯಂತರ ರೂ. ಅವ್ಯವಹಾರವೆಸಗಿದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ, ಸಹಾಯಕ ಕಾರ್ಯ ಪಾಲಕ ಅಭಿಯಂತರ ಸೇರಿ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ, ಸುಮಾರು ನಾಲ್ಕು ಸಾವಿರ ಮಿನರಲ್ ಡಿಸ್‌ಪ್ಯಾಚ್ ಪರ್ಮಿಟ್ (ಎಂಡಿಪಿ)ಗಳನ್ನು ದುರುಪಯೋಗ ಮಾಡಿ ಮರಳು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಉಡುಪಿಯ ಕಾಪು, ಬೈಂದೂರು ಹಾಗೂ ದ.ಕನ್ನಡದ ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದರು.
ಸರ್ಕಾರ ನಿಗದಿಪಡಿಸಿರುವ ದರದಂತೆ ಪ್ರತಿ ಪರ್ಮಿಟ್ ಮರಳಿಗೆ 10 ಸಾವಿರ ರೂ. ಆಗುತ್ತದೆ. ಅದನ್ನೇ ಬ್ಲಾಕ್‌ನಲ್ಲಿ ಮಾರಾಟ ಮಾಡಿದರೆ 30-35 ಸಾವಿರ ರೂ. ಆಗುತ್ತದೆ. ಈ ಲೆಕ್ಕಾಚಾರದಲ್ಲಿ ನಾಲ್ಕು ಸಾವಿರ ಎಂಡಿಪಿಗಳಿಂದ 12 ರಿಂದ 15 ಕೋಟಿ ರೂ. ವಂಚನೆಯಾದಂತಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಲೋಕೋಪ ಯೋಗಿ ಇಲಾಖೆಯಲ್ಲಿ ಶೋಧ ನಡೆಸಿದಾಗ ಸುಮಾರು 4000 ಎಂಡಿಪಿಗಳು ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ ಎಂದರು.
ಅಕ್ರಮ ಪರ್ಮಿಟ್: ಸರ್ಕಾರವು ಇಡೀ ರಾಜ್ಯಕ್ಕೆ ಅಗತ್ಯವಾದ ಪರ್ಮಿಟ್‌ಗಳನ್ನು ಒಂದೆಡೆ ಮುದ್ರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡುತ್ತದೆ.
ಅಲ್ಲಿಂದ ಇಲಾಖೆಗೆ ಆ ಪರ್ಮಿಟ್‌ಗಳನ್ನು ಹಸ್ತಾಂತರ ಮಾಡಲಾಗುತ್ತದೆ. ನಂತರದಲ್ಲಿ ಅದನ್ನು ಮರಳು ಸಾಗಾಟ ಮಾಡಲು ಹಂಚಿಕೆ ಮಾಡಲಾಗುತ್ತದೆ. ಇಲಾಖೆಯ ಸ್ಟೋರ್‌ರೂಂನಲ್ಲಿ ಇಟ್ಟಿದ್ದ ನಾಲ್ಕು ಸಾವಿರ ಪರ್ಮಿಟ್‌ಗಳನ್ನು ಅಕ್ಷಯ್ ಎಂಬ ಗುತ್ತಿಗೆದಾರರ ಮೂಲಕ ಉಡುಪಿ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.
ಪರ್ಮಿಟ್ ನಾಪತ್ತೆ: ಇಲಾಖೆಯ ಇಇ ಪರಮೇಶ್ವರಯ್ಯ ಕೆಲ ದಿನಗಳ ಹಿಂದೆ ಪರ್ಮಿಟ್ ಗಳು ನಾಪತ್ತೆಯಾಗಿರುವ ಬಗ್ಗೆ ನಗರ ಠಾಣೆಗೆ ದೂರು ನೀಡಿದ್ದರು. ಆಗ ಪೊಲೀಸರು ನಿಮ್ಮ ಕರ್ತವ್ಯಲೋಪ ಕಂಡು ಬರುತ್ತಿದ್ದು, ವಿಚಾರಣೆಗೆ
ಸಹಕರಿಸಬೇಕೆಂದು ಹಿಂಬರಹ ನೀಡಿದ್ದರು ಎಂದು ವಿವರಿಸಿದರು. ಈಗ ಗುತ್ತಿಗೆದಾರ ಸೇರಿದಂತೆ ಇಲಾಖೆಯ ಕೆಲವರನ್ನು ಸಂದೇಹದ ಮೇಲೆ ವಶಕ್ಕೆ ಪಡೆದು ಉಡುಪಿ ಪೊಲೀಸರ ವಶಕ್ಕೆ ನೀಡಲಾಗಿದೆ. ಅವರು ವಿಚಾರಣೆ ನಡೆಸುತ್ತಾರೆ. ಪ್ರಕರಣವು ಚಿಕ್ಕಮಗಳೂರಿಗೆ ಸೇರಿರುವುದರಿಂದ ಇಲ್ಲಿಗೆ ವರ್ಗಾಯಿಸಲು ಉಡುಪಿ ಪೊಲೀಸರಿಗೆ ಪತ್ರ ಬರೆಯುವುದಾಗಿ ಹೇಳಿದರು. ಪರ್ಮಿಟ್‌ಗಳು ನಾಪತ್ತೆಯಾಗಿರುವುದರಲ್ಲಿ ಅಧಿಕಾರಿಗಳ ಕರ್ತವ್ಯಲೋಪವಿದೆ. ಇದರ ಬಗ್ಗೆ ಡಿಸಿಗೆ ಪತ್ರ ಬರೆದು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ದಾಖಲೆಗೆ ತಯಾರಿ
ಬೆಳ್ತಂಗಡಿ ಪೊಲೀಸರು ಲಾರಿಗಳ ತಪಾಸಣೆ ಮಾಡುತ್ತಿದ್ದಾಗ 2016ರ ಜುಲೈ ನಲ್ಲಿ ಮರಳು ಲಾರಿಯೊಂದರಲ್ಲಿ ಚಿಕ್ಕಮಗಳೂರಿನ ಪರ್ಮಿಟ್ ದೊರೆತಿದೆ. ಪ್ರಕರಣ ದಾಖಲಿಸಿಕೊಂಡ ಅವರು, ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ವಿಚಾರಿಸಿದ್ದಾರೆ. ಆಗ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯದಿಂದ ಕೆಲ ದಾಖಲೆಗಳನ್ನು ಸಿದ್ಧಪಡಿಸಲು ಲೋಕೋಪಯೋಗಿ ಇಲಾಖೆಯವರು ತಯಾರಿ ನಡೆಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Pegasus spyware ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಲಿ: ಸುರ್ಜೇವಾಲಾ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.