11ಕ್ಕೆ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
ತುರ್ತು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ಇದ್ದು, ನೂತನ ಆಸ್ಪತ್ರೆ ಅನಾರೋಗ್ಯ ಪೀಡಿತರಿಗೆ ನೆರವಾಗಲಿ
Team Udayavani, Dec 8, 2022, 6:22 PM IST
ಶೃಂಗೇರಿ: ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಡಿ.11 ರಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶ್ರೀ ಮಠದ ಆಡಳಿತಾಧಿಕಾರಿ ಡಾ| ವಿ.ಆರ್. ಗೌರಿಶಂಕರ್ ಹೇಳಿದರು.
ಅಭಿನವ ವಿದ್ಯಾತೀರ್ಥ ಆಸ್ಪತ್ರೆಯಲ್ಲಿ ಬುಧವಾರ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಆಸ್ಪತ್ರೆ ವಿವಿಧ ಸೇವೆ ಲಭ್ಯವಾಗಲಿದೆ. ತಾಲೂಕಿನ ಜನರಿಗೆ ಆರೋಗ್ಯ ರಕ್ಷಣೆ ನೀಡುವ ನಿಟ್ಟಿನಲ್ಲಿ 1979 ರಲ್ಲಿ ಆರಂಭವಾದ ಧನ್ವಂತರಿ ಆಸ್ಪತ್ರೆ ನಾನಾ ಕಾರಣದಿಂದ ಉತ್ತಮ ಸೇವೆ ನೀಡಲು ಸಾಧ್ಯವಾಗಲಿಲ್ಲ.
ಆಸ್ಪತ್ರೆ ಅಭಿವೃದ್ಧಿಗೆ ಪ್ರಯತ್ನ ನಡೆಸಿದ್ದರೂ ಅದು ಫಲ ನೀಡಲಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸವಾಲು ಇದ್ದು, ಅದನ್ನು ನಿಭಾಯಿಸಿ ಆಸ್ಪತ್ರೆ ನಡೆಸಬೇಕಿದೆ. ಆಸ್ಪತ್ರೆಯಲ್ಲಿ ಗುಣ ಮಟ್ಟದ ಉಪಕರಣಗಳು, ತಜ್ಞ ವೈದ್ಯರು, ದಾದಿಯರು ಲಭ್ಯವಾಗಲಿದ್ದಾರೆ. ಕಡಿಮೆ ದರದಲ್ಲಿ ಗುಣ ಮಟ್ಟದ ಚಿಕಿತ್ಸೆ ಸಾಮಾನ್ಯ ಜನರಿಗೆ ದೊರಕಲಿದೆ. ಆಸ್ಪತ್ರೆಯಲ್ಲಿ ಪ್ರಯೋಗಾಲಯ, ಔಷಧ ಅಂಗಡಿ ಸೇವೆಗೆ ದೊರಕಲಿದೆ. ಬೆಂಗಳೂರಿನಲ್ಲಿರುವ ರಂಗದೊರೆ ಆಸ್ಪತ್ರೆ ಮಾರ್ಗದರ್ಶನದಲ್ಲಿ
ನಡೆಯಲಿದೆ ಎಂದರು.
ಆರಂಭದಲ್ಲಿ 50 ಬೆಡ್ ಆಸ್ಪತ್ರೆಯಾಗಿದ್ದು, ಸಾಮಾನ್ಯ ವಾರ್ಡ್ 14, ಸೆಮಿ ಪ್ರೈವೇಟ್ ವಾರ್ಡ್ 10, ತುರ್ತು ಚಿಕಿತ್ಸೆ 6, ಪ್ರೈವೆಟ್ ವಾರ್ಡ್ 10, ಐಸಿಯು 6, ಮೇಜರ್ ಒಟಿ 2, ಮೈನರ್ ಒಟಿ 1, ಲೇಬರ್ ವಾರ್ಡ್ 1 ಹೊಂದಿದೆ. ತಾಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ.
ಕಣ್ಣಿನ ಪೊರೆ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ವೈದ್ಯರು ಸದಾ ಲಭ್ಯವಿದ್ದು, ತಜ್ಞ ವೈದ್ಯರು ಅಗತ್ಯ ಸಂದರ್ಭದಲ್ಲಿ ಭೇಟಿ ನೀಡಲಿದ್ದಾರೆ. ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಆಸ್ಪತ್ರೆಯಲ್ಲಿ ಸರಕಾರ ಮತ್ತು ಖಾಸಗಿ ವಿಮಾ ಸೌಲಭ್ಯ ನೀಡಲಾಗುತ್ತದೆ ಎಂದರು. ನಾಗರಿಕ ಸಮಿತಿ ಅಧ್ಯಕ್ಷ ಮಿಗಿನಕಲ್ಲು ನರಸಿಂಹಮೂರ್ತಿ ಮಾತನಾಡಿ, ಆಹಾರ, ಆರೋಗ್ಯ ಎಲ್ಲಿರಿಗೂ ಅಗತ್ಯವಾಗಿದ್ದು, ತುರ್ತು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ಇದ್ದು, ನೂತನ ಆಸ್ಪತ್ರೆ ಅನಾರೋಗ್ಯ ಪೀಡಿತರಿಗೆ ನೆರವಾಗಲಿ ಎಂದರು.
ಸಭೆಯಲ್ಲಿ ಟಿ.ಕೆ. ವಿಶ್ವಜಿತ್, ಡಿ.ಸಿ. ಶಂಕರಪ್ಪ, ಜಿ.ಎಂ. ಸತೀಶ್, ಸುನಿತಾ ವಾಸು, ಪ್ರಕಾಶ್, ನಟರಾಜ್, ಉಮೇಶ್ ಪುದುವಾಳ್, ಪುಷ್ಪಾ ಲಕ್ಷ್ಮೀನಾರಾಯಣ, ಕೆ.ಎಂ. ಗೋಪಾಲ್ ಮಾತನಾಡಿದರು. ರಂಗದೊರೆ ಆಸ್ಪತ್ರೆಯ ಡಾ| ಕಲ್ಪನಾ, ಧನ್ವಂತರಿ ಆಸ್ಪತ್ರೆಯ ಕಾರ್ಯದರ್ಶಿ ಶೈಲಜಾ ಹೆಗ್ಡೆ, ಡಾ| ಅನಂತನಾರಾಯಣ, ಚಂದ್ರಶೇಖರರಾವ್, ಎ.ಎಸ್. ನಯನ, ಪರಾಶರ, ಬಿ.ಎನ್. ಕೃಷ್ಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Charmadi Ghat: ಚಾಲಕನ ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಡಿಕ್ಕಿ ಹೊಡೆದ ಕಾರು.. ಮಹಿಳೆ ಗಂಭೀರ
Hebbe Falls: ಸ್ನೇಹಿತರ ಜೊತೆ ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.