ಆಯುರ್ವೇದಿಕ್ ಔಷಧದಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ
Team Udayavani, Jan 3, 2021, 6:43 PM IST
ಕಡೂರು: ಆಯುಷ್, ಆಯುರ್ವೇದ ಔಷಧ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಾಲೂಕು ಆಯುರ್ವೇದ ವೈದ್ಯಾಧಿಕಾರಿ ಡಾ| ದೊಡ್ಡಗುಣಿ ತಿಳಿಸಿದರು.
ಜಿಲ್ಲಾ ಆಯುಷ್ ಇಲಾಖೆ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕುಪ್ಪಾಳು ಇವರ ಸಹಯೋಗದೊಂದಿಗೆ ಲಕ್ಷಿ¾àಪುರ ಗ್ರಾಮದ ಸರ್ಕಾರಿ ಹಿ.ಪ್ರಾ.ಪಾಠಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ “ಆಯುಷ್ ಸೇವಾ ಗ್ರಾಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ಮಾರಕ ರೋಗದಿಂದ ಅನೇಕ ಜನರು ತಮ್ಮ ಮನೆಯಲ್ಲಿನ ಮನೆಮದ್ದನ್ನು ಉಪಯೋಗಿಸಿಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಮೂಲಕ ಕೋವಿಡ್ ಬಾರದಂತೆ ನೋಡಿಕೊಂಡಿದ್ದಾರೆ. ಯಾರು ತಮ್ಮ ಆರೋಗ್ಯದ ಬಗ್ಗೆ ವೈಯಕ್ತಿಕಕಾಳಜಿ ಇಟ್ಟುಕೊಳ್ಳುವರೋ ಅಂತಹವರಿಗೆ ರೋಗಗಳು ಬರುವುದಿಲ್ಲ ಎಂದರು.
ಸರ್ಕಾರವು ಪ್ರತಿ ತಾಲೂಕಿನಲ್ಲಿ 2 ಎರಡು ಆಯುಷ್ ಸೇವಾ ಗ್ರಾಮಗಳೆಂದು ಗುರುತಿಸಿ ಅಲ್ಲಿನ ರೋಗಿಗಳಿಗೆ ಆಯುಷ್ ಔಷ ಧಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಲಕ್ಷ್ಮೀಪುರ, ಅಂತರಗಟ್ಟೆಗೆ ಸೇರಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ| ಗೀತಾ ಮಾತನಾಡಿ, ಸೇವಾ ಗ್ರಾಮಕ್ಕೆ ಆಯ್ಕೆಗೊಂಡಗ್ರಾಮದಲ್ಲಿ ಜನಸಂಖ್ಯೆ 850ಕ್ಕೂ ಹೆಚ್ಚಿಗೆ ಇದ್ದು ಅಲ್ಲಿ ಕನಿಷ್ಟ 250 ಜನ ವಯೋಸಹಜಕಾಯಿಲೆಗಳಿಂದ ಬಳಲುತ್ತಿರಬೇಕು. ಇಲಾಖೆಯು ಪ್ರತಿ 15 ದಿನಗಳಿಗೊಮ್ಮೆ 4 ತಿಂಗಳ ಕಾಲ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಉಚಿತವಾಗಿ ಔಷ ಧಗಳನ್ನು ನೀಡಲಾಗುತ್ತದೆ ಎಂದರು.
ಬಿಸಲೆಹಳ್ಳಿಯ ವೈದ್ಯಾಧಿಕಾರಿ ಡಾ| ಕೆ.ಎನ್. ಪ್ರದೀಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಪುರಾತನ ಆಯುಷ್ ಔಷಧ ಬಳಕೆಯಿಂದ ಅನೇಕ ರೋಗಗಳು ಗುಣವಾಗಲಿವೆ. ಸರ್ಕಾರ ಆಯುಷ್ ಇಲಾಖೆಯ ಮೂಲಕ ನಡೆಸುತ್ತಿರುವಆಯುಷ್ ಸೇವಾ ಗ್ರಾಮ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಸಹಕಾರ ಇರುತ್ತದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಎ.ಕೆ. ಪಾಟೀಲ್ ಮಕ್ಕಳಿಗೆ ಸಮಾಜ ಕಲ್ಯಾಣಇಲಾಖೆಯಿಂದ ದೊರಕುವ ಸೌಲಭ್ಯಗಳನ್ನುವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಗೋವಿಂದರಾಜ್ ಮಾತನಾಡಿ, ಆಯುಷ್ ಉತ್ತಮ ಕಾರ್ಯಕ್ರಮವಾಗಿದ್ದು ಶಿಕ್ಷಣ ಇಲಾಖೆಯು ಸಹಕಾರ ನೀಡಲಿದೆ. ಔಷಧೀಯ ಗುಣಗಳುಳ್ಳ ಸಸಿಗಳನ್ನು ಶಾಲೆಯ ಆವರಣದಲ್ಲಿ ಬೆಳೆಸಲು ಸಿದ್ಧತೆ ಮಾಡಲಾಗಿದೆ ಎಂದರು.
ಡಾ| ಶ್ರೀನಿವಾಸ ನಾಯ್ಕ, ಪ್ರಭಾವತಿ, ಗೀತಾ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗ್ರಾಮದ ಮುಖಂಡರು ಸಭೆಯಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.