ಗುರು ಮಾರ್ಗದರ್ಶನದಿಂದ ಜೀವನದ ದಿಕ್ಕು ಬದಲು
Team Udayavani, May 19, 2018, 5:27 PM IST
ಶೃಂಗೇರಿ: ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದರಿಂದ ಯಶಸ್ಸಿನ ಹಾದಿ ದೊರಕುತ್ತದೆ. ಯೋಗ್ಯ ಗುರುವಿನ
ಮಾರ್ಗದರ್ಶನ ಜೀವನದ ದಿಕ್ಕನ್ನೇ ಬದಲಿಸಬಹುದಾಗಿದೆ ಎಂದು ಯುವ ವಿಪ್ರ ವೇದಿಕೆ ಅಧ್ಯಕ್ಷ ನೈಭಿ ಸುಬ್ರಹ್ಮಣ್ಯ ಹೇಳಿದರು. ತಾಲೂಕಿನ ಅಡ್ಡಗದ್ದೆ ಗ್ರಾ.ಪಂ.ನ ಉಳುವೆಬೈಲು ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಯುವ ವಿಪ್ರ ವೇದಿಕೆ ಏರ್ಪಡಿಸಿರುವ ಒಂದು ವಾರದ ಸಂಸ್ಕಾರ ಶಿಬಿರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರದಲ್ಲಿ ವಿವಿಧ ರೀತಿಯ ತರಬೇತಿ, ಆಟ, ಕಥೆ, ವ್ಯಾಯಾಮ, ಯೋಗ, ರಾಮಾಯಣ, ಮಹಾಭಾರತದ ಕಥೆ, ಸಂಧ್ಯಾವಂದನೆ ಸಹಿತ ಎಲ್ಲವನ್ನು ಬೋಧಿ ಸಲಾಗುತ್ತದೆ. ಬೆಳಗ್ಗೆ ಬೇಗ ಏಳುವುದು ಮತ್ತು ಕಲಿಕೆಯನ್ನು ಬೆಳಗಿನ
ಜಾವದಲ್ಲಿ ಮಾಡುವುದರಿಂದ ಗ್ರಹಿಕಾ ಶಕ್ತಿ ಹೆಚ್ಚುತ್ತದೆ. ಸಂಧ್ಯಾವಂದನೆ ಮಾಡುವುದರಿಂದ ಏಕಾಗ್ರತೆ ಹಾಗೂ ಗುರು ಹಿರಿಯರಲ್ಲಿ ಭಕ್ತಿ ಬರುತ್ತದೆ ಎಂದರು.
ಶಿಕ್ಷಕ ಎಸ್.ಗುರುಮೂರ್ತಿ ಮಾತನಾಡಿ, ನಮ್ಮ ದೇಶದ ಇತಿಹಾಸವನ್ನು ನೋಡಿದರೆ, ಧರ್ಮಾಚರಣೆ ಮತ್ತು ಭಯ ಭಕ್ತಿ ಹೊಂದಿದ್ದ ಸಾಮಾನ್ಯ ಜನರು ಸಂಸ್ಕಾರವಂತರಾಗಿದ್ದರು. ಮನುಷ್ಯರಿಗೆ ಸಂಸ್ಕಾರ ಎಂಬುದು ಅತಿ ಮುಖ್ಯ. ಪ್ರಾಣಿಗಳಿಗೆ ಸಂಸ್ಕಾರ ಇರದಿರುವುದರಿಂದ ಬದುಕಿಗೆ ಅರ್ಥವಿಲ್ಲ. ಆದರೆ ಮನುಷ್ಯರು ಬದುಕಿನ ವಾತಾವರಣ, ಬಾಲ್ಯದ ಶಿಕ್ಷಣ, ಪೋಷಕರ ಹಾಗೂ ಗುರುವಿನ ಮಾರ್ಗದರ್ಶನ ದೊರಕಿದರೆ ಮಾತ್ರ ಯೋಗ್ಯ ಪ್ರಜೆಯಾಗಲು ಸಾಧ್ಯ. ಧರ್ಮಾಚರಣೆ ಮಾಡುವುದರಿಂದ ಜೀವನದಲ್ಲಿ ಶಿಸ್ತನ್ನು ಕಲಿಯಲು ಸಾಧ್ಯವಾಗಲಿದೆ.
ನಮ್ಮ ದೇಶಕ್ಕೆ ಸಾವಿರಾರು ವರ್ಷದ ಇತಿಹಾಸವಿದ್ದು, ಹಿಂದೂ ಧರ್ಮವು ಉತ್ತಮ ಸಂಸ್ಕಾರದಿಂದ ವಿಶ್ವಕ್ಕೆ ಒಳ್ಳೆಯ ಸಂದೇಶವನ್ನು ನೀಡಿದೆ ಎಂದರು.
ಶಿಬಿರವನ್ನು ರಮೇಶ್ ಡೋಂಗ್ರೆ ಉದ್ಘಾಟಿಸಿದರು. ಪ್ರಸನ್ನ ಗಣಪತಿ ದೇವಸ್ಥಾನದ ಅರ್ಚಕ ರಾಘವೇಂದ್ರ ಭಟ್, ಉಳುವೆ ಶೇಷಣ್ಣಯ್ಯ,ಕೃಷ್ಣಮೂರ್ತಿ, ಮಾಕೋಡು ಗಣಪತಿ, ದಿಲೀಪ್, ವಿಘ್ನೇಶ್, ಅಣ್ಣು ಕೊಡಿಗೆ ಶ್ರೀಧರರಾವ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.