ಗೋರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದ್ದು ಶ್ಲಾಘನೀಯ
Team Udayavani, Jan 15, 2021, 4:44 PM IST
ಬಾಳೆಹೊನ್ನೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸಂತರ ಶತಮಾನಗಳ ಬೇಡಿಕೆಯಾದ ದೇಸಿ ಗೋ ಸಂರಕ್ಷಣೆ ಮತ್ತು ಗೋವುಗಳ ವರ್ಣ ಸಂಕರದ ವಿರುದ್ಧ ಕ್ರಮ ಕೈಗೊಂಡು ಸಂರಕ್ಷಣೆಗೆ ಮುಂದಾಗಿದ್ದು ಸಂತರ ಹೋರಾಟಕ್ಕೆ ಸಂದ ಗೌರವವಾಗಿದೆ ಎಂದು ಉಡುಪಿಯ ಹಂಗಾರಕಟ್ಟೆ ಬಾಳೆಕುದ್ರಿ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ತಿಳಿಸಿದರು.
ಕೆಮ್ಮಣ್ಣು ಕಾಮಧೇನು ಗೋ ಸೇವಾ ಕೇಂದ್ರಕ್ಕೆ ಮೇವನ್ನು ದಾನವಾಗಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ಗತ ವೈಭವಕ್ಕೆ ಮರಳಬೇಕಾದರೆ ಗೋ ಸಮೃದ್ಧಿಯಿಂದ ಮತ್ತು ಕೃಷಿ ಹಾಗೂ ಪರಿಸರದ ನಡುವೆ ಸಮತೋಲನ ಏರ್ಪಟ್ಟಾಗ ಮಾತ್ರ ಸಾಧ್ಯ. ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣವೂ ಸೋಮನಾಥ ದೇವಾಲಯದ ಪುನರ್ ನಿರ್ಮಾಣದಷ್ಟೇ ಮಹತ್ವದ್ದಾಗಿದೆ. ಎಲ್ಲಾ ಭಾರತೀಯರು ಕೈಜೋಡಿಸಿ ರಾಮ ಮಂದಿರ ನಿರ್ಮಾಣದ ಪ್ರಕ್ರಿಯೆಯ ಯಶಸ್ಸಿಗೆ ಕಾರಣರಾಗಬೇಕೆಂದರು. ಕಾಮದೇನು ಗೋ ಸೇವಾ ಕೇಂದ್ರದ ನಾಗೇಶ್ ಆಂಗೀರಸ, ಸುಮಾ ನಾಗೇಶ್, ಲಲಿತಾ ಆಂಗೀರಸ ಇದ್ದರು.
ಇದನ್ನೂ ಓದಿ: ಗಣಿನಾಡಿನಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ
Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.