ಕಡೂರು: ಪರಿಸರ ದಿನಾಚರಣೆ
Team Udayavani, Jun 6, 2020, 6:49 AM IST
ಕಡೂರು: ಮಲೆನಾಡಿನ ಪರಿಸರಕ್ಕೆ ಗಿಡ- ಮರಗಳು ಆಸರೆಯಾದರೆ ಬಯಲು ಸೀಮೆಗೆ ತೆಂಗಿನ ತೋಟಗಳೇ ಪರಿಸರವನ್ನು ಉಳಿಸಿವೆ ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ವಿಶ್ವ ಪರಿಸರದ ದಿನದ ಅಂಗವಾಗಿ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರವನ್ನು ನಾವು ರಕ್ಷಿಸಿದರೆ ಮಾತ್ರ ಮುಂದೆ ನಮ್ಮ ಪೀಳಿಗೆಯನ್ನು ಪರಿಸರ ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡಗಳನ್ನು ನೆಡುವುದರ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಿಗರು, ತಮ್ಮ ಕೆಲಸಗಳಿಗೆ ಬರುವ ರೈತರು, ಸಾರ್ವಜನಿಕರಿಗೆ ಕನಿಷ್ಟ 10 ಸಸಿಗಳನ್ನು ನೆಟ್ಟರೆ ನಿಮ್ಮ ಕೆಲಸವನ್ನು ಬೇಗ ಮಾಡಿಕೊಡುವುದಾಗಿ ಅವರ ಮನವೊಲಿಸಿದರೆ ಕ್ಷೇತ್ರದಲ್ಲಿ ಪರಿಸರ ಕ್ರಾಂತಿಯನ್ನೇ ಮಾಡಬಹುದು. ಆದರೆ ನಿಮ್ಮಲ್ಲಿ ಇಚ್ಛಾಶಕ್ತಿ ಬರಬೇಕು. ಮುಂದಿನ ದಿನಗಳಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ತಹಶೀಲ್ದಾರ್ ಜೆ. ಉಮೇಶ್, ತಾಪಂ ಇಒ ಡಾ| ದೇವರಾಜನಾಯ್ಕ, ತಾಪಂ ಅಧ್ಯಕ್ಷೆ ಪ್ರೇಮಾಬಾಯಿ ಇದ್ದರು. ಮುಂಜಾನೆ ಮಂಜು ಪರಿಸರ ಗೀತೆ ಹಾಡಿದರು. ಎ. ಮಣಿ ಮತ್ತು ಪುರಸಭೆ ಮಾಜಿ ಸದಸ್ಯ ಮಂಜುನಾಥ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.