ಹದಗೆಟ್ಟ ರಸ್ತೆ ದುರಸ್ತಿ ಮಾಡಿ ಪ್ರಾಣ ರಕ್ಷಿಸಿ
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಪಂ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು ಆಗ್ರಹ
Team Udayavani, Jan 29, 2020, 1:09 PM IST
ಕಡೂರು: ರಾಷ್ಟ್ರೀಯ ಹೆದ್ದಾರಿ 206ರ ಅರಸೀಕೆರೆ ಮಾರ್ಗದಲ್ಲಿ ಕಡೂರು ಪಟ್ಟಣದಿಂದ ಬಾಣಾವರದ ವರೆಗೆ ಉಂಟಾಗಿರುವ ಹಲವಾರು ಗುಂಡಿ-ಗೊಟರುಗಳು ಪ್ರಯಾಣಿಕರ ಸಾವಿನ ಗುಂಡಿಗಳಾಗಿವೆ ಎಂದು ಜಿಪಂ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ ಮಾರ್ಗದಿಂದ ಬಾಣವರದವರೆಗೆ ಗುಂಡಿಗಳನ್ನು ಮುಚ್ಚಲಾಗಿದೆ. ಅದೇ ರೀತಿ ಬಾಣಾವರದಿಂದ ಕಡೂರು ಪಟ್ಟಣದವರೆಗೆ ಯಾವುದೊಂದು ಗುಂಡಿಯನ್ನು ಮುಚ್ಚಿಲ್ಲ. ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ತಾರತಮ್ಯ ಮಾಡುತ್ತಿದ್ದಾರೆ. ಇದರಿಂದ ವಾಹನಗಳ ಚಾಲಕರಿಗೆ ವಾಹನ ಓಡಿಸಲು ಕಷ್ಟಕರವಾಗಿದೆ. ಈಗಾಗಲೇ ಕಳೆದ 6 ತಿಂಗಳಿನಿಂದ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗುಂಡಿಗಳಿಗೆ ದ್ವಿಚಕ್ರ ವಾಹನಗಳು ಬಿದ್ದು 18ಕ್ಕೂ ಹೆಚ್ಚು ಸಾವು-ನೋವುಗಳಾಗಿವೆ ಎಂದು ದೂರಿದರು.
ಹೆದ್ದಾರಿ ಪ್ರಾ ಧಿಕಾರದ ಅಧಿ ಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬುದು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ ಈಗಾಗಲೇ ಮತಿಘಟ್ಟದ ಭಾಗದಲ್ಲಿ ಬೈಪಾಸ್ ನಿರ್ಮಿಸಲು ಭೂಮಿಯನ್ನು ಸ್ವಾಧೀನ ಪಡೆಯುವ ಈ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಅಧಿ ಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ನಿರ್ಮಾಣ ಕಾಮಗಾರಿ ತಡವಾಗುವ ಸಂಭವವಿದೆ. ಅಲ್ಲಿಯವರೆಗೆ ಗುಂಡಿ-ಗೊಟರುಗಳನ್ನು ಮುಚ್ಚಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಅರಸೀಕೆರೆಯಿಂದ ಬಾಣಾವರದವರೆಗೆ ಮುಚ್ಚಿರುವುದು ಕಾಣುತ್ತಿಲ್ಲವೇ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಅನುಸರಿಸುತ್ತಿರುವ ಇಂಜಿನಿಯರ್ ವಿರುದ್ಧ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಂಗಲಿ ತಾಂಡಾ ಬಳಿ ಭಾರೀ ಗಾತ್ರದ ಹಲವು ಗುಂಡಿ-ಗೊಟರುಗಳು ನಿರ್ಮಾಣವಾಗಿದ್ದು, ಅದನ್ನೂ ಕೂಡ ಸೂಕ್ತ ರೀತಿಯಲ್ಲಿ ಮುಚ್ಚಿಸದೇ ಇರುವುದರಿಂದ ಅನೇಕ ಅಪಘಾತಗಳಾಗಿ
ಸಾವು-ನೋವುಗಳಾಗಿವೆ. ಪೊಲೀಸ್ ಇಲಾಖೆಯಲ್ಲಿ ಎಷ್ಟು ಅಪಘಾತಗಳಾಗಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಪಡೆಯಲಿ. ಆಗ ಅವರಿಗೆ ಸಾರ್ವಜನಿಕರ ಸಮಸ್ಯೆ ಅರ್ಥವಾಗುತ್ತದೆ ಎಂದು ಹರಿಹಾಯ್ದರು.
ಮತಿಘಟ್ಟ-ತಂಗಲಿ ತಾಂಡ್ಯದ ರಸ್ತೆ ಉಬ್ಬಿನ ಬಳಿ ದ್ವಿಚಕ್ರ ವಾಹನ ಸವಾರರು ಬಹಳಷ್ಟು ಸಂಖ್ಯೆಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡಿರುವ ಅಥವಾ ತಲೆಗೆ ಪೆಟ್ಟು ಬಿದ್ದಿರುವ ಘಟನೆ ನಡೆದಿದೆ. ಕೆಲವರ ಪ್ರಾಣವೂ ಹೋಗಿದೆ. ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ
ರಸ್ತೆ ಉಬ್ಬುಗಳು ಕಾಣದೆ ವೇಗವಾಗಿ ಚಲಿಸುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಸರಿಪಡಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದ ಇಂಜಿಯರ್‌ರನ್ನು ಒತ್ತಾಯಿಸಿದರು.
ಫೆ. 5ರೊಳಗೆ ಬಾಣಾವರದಿಂದ ಕಡೂರು ಪಟ್ಟಣದವರೆಗಿನ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ಗುಂಡಿಗಳಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪಟ್ಟಣದ ಉದ್ಯಮಿ ಸತೀಶ್, ಎಚ್.ಎಂ. ರೇವಣ್ಣಯ್ಯ, ಚೇತನ್ ಕೆಎಂಕೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್
ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ
Chikkamagaluru: ನಕ್ಸಲರ ಶರಣಾಗತಿಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮಟೆ ಮನವಿ
Chikkamagaluru: ನಕ್ಸಲ್ ಆರೋಪಿತರ ಪ್ರಕರಣ ಖುಲಾಸೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.